
ಮಂಗಳೂರು: ಕಾರು ಹರಿಸಿ ಮುಡಿಪು ನಿವಾಸಿ ಯುವ ನ್ಯಾಯವಾದಿಯನ್ನು ಕೊಲೆಗೆ ಯತ್ನಿಸಿರುವ ಘಟನೆ ಮಂಗಳೂರು ದಕ್ಷಿಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.
ಮುಡಿಪು ನಿವಾಸಿ ಯುವ ನ್ಯಾಯವಾದಿ ಮಹಮ್ಮದ್ ಅಸ್ಗರ್ ಕೊಲೆಯತ್ನಕ್ಕೆ ಒಳಗಾದವರು. ಎ.24 ರಂದು ಮೊಹಮ್ಮದ್ ಮುಸ್ತಾಕ್ ಎಂಬಾತ ನ್ಯಾಯವಾದಿ ಅಸ್ಗರ್ ಕಚೇರಿಗೆ ಆಗಮಿಸಿ ತನ್ನ ಪ್ರಕರಣವನ್ನು ನಡೆಸುವಂತೆ ಹೇಳಿದ್ದನು. ಆದರೆ ಅಸ್ಗರ್ ಅವರು ನ್ಯಾಯಾಲಯದಲ್ಲಿ ವ್ಯಕ್ತಿಯ ಪ್ರಕರಣ ವಾದಿಸಲು ತನ್ನಿಂದ ಅಸಾಧ್ಯ ಅನ್ನುತ್ತಿದ್ದಂತೆ , ಅಕ್ರಮವಾಗಿ ಕಚೇರಿಗೆ ನುಗ್ಗಿದ ಮೊಹಮ್ಮದ್ ಮುಸ್ತಾಕ್ ಬೆದರಿಕೆಯೊಡ್ಡಿ ಕಾರಿನ ಕೀಯನ್ನು ಕಸಿದು, ಕಾರು ಕೊಂಡೊಯ್ಯಲು ಯತ್ನಿಸುವ ಸಂದರ್ಭ ಅಡ್ಡಗಟ್ಟಿದಾಗ ಕಾರು ಹರಿಸಿ ಕೊಲೆಗೆ ಯತ್ನಿಸಿದ್ದಾನೆ. ಈ ಕುರಿತು ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.