ಮಧೂರು ಬ್ರಹ್ಮ ಕಲಶೋತ್ಸವದ ಭಾಗವಾಗಿ ಆರ್ಯ ಮರಾಠ ಸಮಾಜದ ದೇವರ ಮನೆಗಳ ಒಕ್ಕೂಟ ಹಾಗೂ ಆರ್ಯ ಯಾನೆ ಮರಾಠ ಸಮಾಜ ಸಂಘ(ರಿ )ಮಂಗಳೂರು -ಕಾಸರಗೋಡು ಮತ್ತು ಆರ್ಯ ಸಮುದಾಯ ಸಂಘ (ರಿ )ಕಾಸರಗೋಡು ವತಿಯಿಂದ ಹೊರೆ ಕಾಣಿಕೆ ಮೆರವಣಿಗೆ ಸಮರ್ಪಸಲಾಯಿತು.

ವಿಶಿಷ್ಟ, ವಿಭಿನ್ನ ರೀತಿಯಲ್ಲಿ ಶಿಸ್ತು, ಸಂಯಮ, ಸಂಪ್ರದಾಯ, ಸಂಭ್ರಮ, ಸಡಗರದಿಂದ ಜರಗಿದ ಮೆರವಣಿಗೆಯು ನೆರೆದಿದ್ದ ಅಪಾರ ಜನಸ್ತೋಮದ ಮೆಚ್ಚುಗೆಗೆ ಪಾತ್ರವಾಯಿತು.
ಸಾಂಪ್ರದಾಯಿಕ ಉಡುಗೆ ಧರಿಸಿದ ಮಹಿಳೆಯರ ತಂಡದಿಂದ ಲೆಂಜಿಮ್ ತಾಳ ದೊಂದಿಗೆ ಕೇರಳ ಶೈಲಿಯ ಚೆಂಡೆಗೆ ಮಹಾರಾಷ್ಟ್ರ ಶೈಲಿಯ ನೃತ್ಯ, ಕುಂಟಾರು ಮತ್ತು ಮಲ್ಲ ತಂಡಗಳು ನಡೆಸಿಕೊಟ್ಟ ಕುಣಿತ ಭಜನೆಯು ಎಲ್ಲರ ಗಮನ ಸೆಳೆಯಿತು.
ಸಮಾಜ ಬಾಂಧವರು ಕೇಸರಿ ಪೇಟಧಾರಿಗಳಾಗಿ ಶಿಸ್ತಿನ ನಡಿಗೆಯಲ್ಲಿ ಭಾಗವಹಿಸಿರುವುದು ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿ ರೂಪವೇ ಎಂಬಂತೆ ವೇಷಧಾರಿ ಆಶ್ವಾರೋಹಿಯಾಗಿ ಮೆರವಣಿಗೆಯ ಮುಂಚೂಣಿಯಲ್ಲಿ ಬಂದಿರುವುದು ವಿಶೇಷ ಆಕರ್ಷಣೆ ಯಾಗಿತ್ತು.
ಮೆರವಣಿಗೆಯಲ್ಲಿ ಸಮಾಜದ 39 ದೇವರ ಮನೆಗಳ ಪ್ರಮುಖರು ಹಾಗೂ ಸದಸ್ಯರುಗಳು ಒಟ್ಟಾಗಿ ಭಾಗವಹಿಸಿ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಕ್ಕೆ ದೇಣಿಗೆ ನೀಡಿದರು.
ಆರ್ಯ ಯಾನೆ ಮಾರಾಠ ಸಮಾಜ ಸಂಘದ ಅಧ್ಯಕ್ಷ ರಾದ ಮೋಹನ್ ರಾವ್ ಭೋoಸ್ಲೆ, ಆರ್ಯ ಸಮುದಾಯ ಸಂಘದ ಅಧ್ಯಕ್ಷರಾದ ಗಿರಿಧರ್ ರಾವ್ ವಾಗ್ಮಾನ್, ಉಭಯ ಸಂಘಗಳ ಗೌರವಾಧ್ಯಕ್ಷರಾದ ಪ್ರೇಮಲತಾ ವೈ ರಾವ್,ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಕಾರ್ಕಳ ತಾಲ್ಲೂಕು ಅಧ್ಯಕ್ಷರಾದ ಕೀರ್ತನ್ ಕುಮಾರ್ ಲಾಡ್, ಯುವ ವೇದಿಕೆ ಸಂಚಾಲಕ ಶೈಲೇಶ್ ಬಹುಮಾನ್, ಪದಾಧಿಕಾರಿಗಳು, ವಲಯ ಸಂಚಾಲಕರು, ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಹೊರೆಕಾಣಿಕೆ ಕಾರ್ಯಕ್ರಮದ ಪ್ರಧಾನ ಸಂಚಾಲಕರಾದ ಪ್ರದೀಪ್ ಚಂದ್ರ ಜಾಧವ್, ಉಪ ಸಂಚಾಲಕರಾದ ಪ್ರಮೋದ್ ರಾವ್ ಬಹುಮಾನ್ , ಸದಸ್ಯರುಗಳಾದ ವಾಮನ್ ರಾವ್ ವಾಗ್ಮಾನ್, ದಯಾ ಚವಾನ್ ಕೊರಕೋಡು, ಕುಸುಮಾಕರ್ ಜಗತ್ತಾಪ್, ವಿವೇಕ್ ಸಿರಿಯಾರ್, ರಾಜೇಶ್ ಜಗತ್ತಾಪ್, ಚೈತ್ರ ಧರೆಕಾರ್, ಅಶ್ವಿತಾ ಧರೆಕರ್, ಸ್ವಾತಿ ಧರೆಕರ್, ಶ್ರುತಿ ಜಾಧವ್ ಮುಂತಾದವರು ಉಪಸ್ಥಿತರಿದ್ದು ಸಹಕರಿಸಿದರು.
ಬಳಿಕ ಸಮಾಜ ಬಾಂಧವರಿಂದ ಸ್ವಯಂ ಸೇವೆ ನಡೆಯಿತು.


