ಭಾರತದ ಸಂವಿಧಾನದ ಪರಿಚ್ಛೇದ 21 ಪ್ರತಿಯೊಬ್ಬ ನಾಗರಿಕನಿಗೆ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಖಾತರಿಪಡಿಸುತ್ತದೆ. ಈ ಹಕ್ಕಿನ ವ್ಯಾಪ್ತಿಯಲ್ಲಿ ತುರ್ತು ಆರೋಗ್ಯ ಸೇವೆ ಮತ್ತು ಜೀವ ರಕ್ಷಕ ಚಿಕಿತ್ಸೆಗೆ ಪ್ರವೇಶವೂ ಸೇರಿದೆ ಎಂದು ವಿವಿಧ ನ್ಯಾಯಾಂಗ ತೀರ್ಪುಗಳು ಸ್ಪಷ್ಟಪಡಿಸಿವೆ. ಸರ್ಕಾರದ ಅಧಿಕಾರಿಗಳು, ಅದರಲ್ಲೂ ಆರೋಗ್ಯ ಸಚಿವರು, ಇದೇ ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪೆರ್ಮನ್ನೂರು ಕಲ್ಲಾಪು ನಿವಾಸಿ ದೀಕ್ಷಾ ಕುತ್ತಾರು (30) ಅವರ ಪರಿಸ್ಥಿತಿ ಗಂಭೀರ ಕಳವಳಕ್ಕೆ ಕಾರಣವಾಗಿದೆ. ಮೆದುಳಿನ ಜ್ವರದಿಂದ ಬಳಲುತ್ತಿರುವ ಅವರು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬದ ಮಾಹಿತಿ ಮತ್ತು ಆಸ್ಪತ್ರೆ ಮೂಲಗಳ ಪ್ರಕಾರ, ಮುಂದಿನ ಚಿಕಿತ್ಸೆಗೆ ಸುಮಾರು ₹20 ಲಕ್ಷ ವೆಚ್ಚವಾಗಬಹುದು ಎನ್ನಲಾಗಿದೆ. ಬಡ ಕುಟುಂಬಕ್ಕೆ ಈ ಮೊತ್ತವನ್ನು ಭರಿಸುವುದು ಅಸಾಧ್ಯವಾಗಿದೆ. ಜೀವ ಉಳಿಸುವ ಚಿಕಿತ್ಸೆಯು ಕೇವಲ ಹಣವಂತರಿಗೆ ಮಾತ್ರ ಸೀಮಿತವಾಗಬಾರದು. ಆರ್ಥಿಕ ಸಂಕಷ್ಟದಿಂದ ಒಬ್ಬ ರೋಗಿ…
Author: UllalaVani
ಪೆರ್ಮನ್ನೂರು, ಜು.31: ತಂದೆಯ ನಿಧನದ ಬಳಿಕ ವಿಧವೆ ತಾಯಿಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪೆರ್ಮನ್ನೂರು ಕಲ್ಲಾಪು ನಿವಾಸಿ ದೀಕ್ಷಾ ಕುತ್ತಾರು (30) ಅವರು ಗಂಭೀರ ಅನಾರೋಗ್ಯದಿಂದ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬದ ಮಾಹಿತಿ ಪ್ರಕಾರ, ದೀಕ್ಷಾ ಅವರು ಮೆದುಳಿನ ಜ್ವರದಿಂದ ಬಳಲುತ್ತಿದ್ದು, ಮುಂದಿನ ಚಿಕಿತ್ಸೆಗಾಗಿ ಸುಮಾರು ₹20 ಲಕ್ಷ ವೆಚ್ಚವಾಗುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸಿರುವುದಾಗಿ ಹೇಳಲಾಗಿದೆ. ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಕ್ಕೆ ಇಷ್ಟೊಂದು ದೊಡ್ಡ ಮೊತ್ತವನ್ನು ಭರಿಸುವುದು ಅಸಾಧ್ಯವಾಗಿದ್ದು, ಸರ್ಕಾರ ಹಾಗೂ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಭಾರತದ ಸಂವಿಧಾನದ ಪರಿಚ್ಛೇದ 21ರಡಿ ಪ್ರತಿಯೊಬ್ಬ ನಾಗರಿಕನಿಗೆ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು ನೀಡಲಾಗಿದೆ. ಈ ಹಕ್ಕಿನ ವ್ಯಾಪ್ತಿಯಲ್ಲಿ ತುರ್ತು ಆರೋಗ್ಯ ಸೇವೆ ಹಾಗೂ ಜೀವ ರಕ್ಷಕ ಚಿಕಿತ್ಸೆಗೆ ಪ್ರವೇಶವೂ ಒಳಗೊಂಡಿದೆ ಎಂದು ವಿವಿಧ ನ್ಯಾಯಾಂಗ ತೀರ್ಪುಗಳು ಸ್ಪಷ್ಟಪಡಿಸಿವೆ. ಈ ಹಿನ್ನೆಲೆಯಲ್ಲಿ ದೀಕ್ಷಾ ಅವರ ಚಿಕಿತ್ಸೆಗೆ ರಾಜ್ಯ ಆರೋಗ್ಯ ಇಲಾಖೆ…
ಕಡಬ, ಜು. 31: ಮಳೆಗಾಳಿಗೆ ಅಡಿಕೆಮರ ಮುರಿದು ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದ ಘಟನೆ ಕಡಬ ತಾಲೂಕಿನ ಕುಂತೂರು ಗ್ರಾಮದ ಕೇವಳದಲ್ಲಿ ನಡೆದಿದೆ. ಯಾದವ ಗೌಡ (66) ಎಂಬವರು ಮೃತಪಟ್ಟವರು. ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಬೀಸಿದ ಮಳೆಗಾಳಿಗೆ ಅಡಿಕೆಮರ ಮುರಿದು ಬಿದ್ದು ಯಾದವ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಸ್ಥಳಕ್ಕೆ ತಹಶೀಲ್ದಾರ್ ಗಣೇಶ್ ಸವಣೂರ, ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು,ಜು. 31 : ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ತನ್ನನ್ನು ಬ್ರಿಟನ್ ನಿವಾಸಿ ಎಂದು ನಂಬಿಸಿ, ಬಳಿಕ ಉಡುಗೊರೆ ಪಾರ್ಸೆಲ್ ಹಾಗೂ ಕಸ್ಟಮ್ಸ್ ಕ್ಲಿಯರೆನ್ಸ್ ನೆಪದಲ್ಲಿ ಮಹಿಳೆಯೊಬ್ಬರಿಂದ 2,67,000ರೂ ಹಣ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸುಮಾರು ಎರಡು ತಿಂಗಳ ಹಿಂದೆ 46 ವರ್ಷದ ಮಹಿಳೆ ಶ್ರೀಮತಿ ಅವರಿಗೆ ಫೇಸ್‌ಬುಕ್‌ನಲ್ಲಿ “ಡಾ. ವಿಲಿಯಮ್ಸ್ ಹೆರ್ಬಟ್” ಎಂಬ ಹೆಸರಿನ ಪ್ರೊಫೈಲ್‌ನಿಂದ ಸ್ನೇಹದ ವಿನಂತಿ ಬಂದಿತ್ತು. ತಾನು ಯುನೈಟೆಡ್ ಕಿಂಗ್‌ಡಮ್ (UK) ಮೂಲದ ವೈದ್ಯ ಎಂದು ಪರಿಚಯಿಸಿಕೊಂಡಿದ್ದ ಆತ, ಬಳಿಕ ವಾಟ್ಸಾಪ್ ಹಾಗೂ ಫೇಸ್‌ಬುಕ್ ಮೆಸೆಂಜರ್ ಮೂಲಕ ನಿರಂತರ ಸಂಪರ್ಕದಲ್ಲಿದ್ದು ಮಹಿಳೆಯ ವಿಶ್ವಾಸಗಳಿಸಿದ್ದ.ಜೂನ್ 28ರಂದು ವಾಟ್ಸಾಪ್ ಕರೆ ಮಾಡಿದ ಆರೋಪಿ, ನಿಮಗಾಗಿ ಚಾಕೊಲೇಟ್, ಚಿನ್ನ, ಬ್ಯಾಗ್ ಹಾಗೂ ಅಪಾರ ಪ್ರಮಾಣದ ಹಣವಿರುವ ಉಡುಗೊರೆ ಪಾರ್ಸೆಲ್ ಕಳುಹಿಸಿದ್ದೇನೆ ಎಂದು ಹೇಳಿ ಮಹಿಳೆಯನ್ನು ನಂಬಿಸಿದ್ದಾನೆ.ಮರುದಿನ ಮತ್ತೊಬ್ಬ ವ್ಯಕ್ತಿ ‘ಕಸ್ಟಮ್ಸ್ ಅಧಿಕಾರಿ’ ಎಂದು ಪರಿಚಯಿಸಿಕೊಂಡು ಕರೆ…
ಮಂಗಳೂರು, ಜು. 31 :16ನೇ ಆವೃತ್ತಿಯ ಆಳ್ವಾಸ್ ಪ್ರಗತಿ–2026 ದೇಶದ ಅತಿದೊಡ್ಡ ಉದ್ಯೋಗ ಮೇಳ ಆಗಸ್ಟ್ 7 ಮತ್ತು 8, 2026 ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಯೋಜಿಸುತ್ತಿರುವ 16ನೇ ಆವೃತ್ತಿಯ ‘ಆಳ್ವಾಸ್ ಪ್ರಗತಿ’ ಬೃಹತ್ ಉದ್ಯೋಗ ಮೇಳವು ಆಗಸ್ಟ್ 7 ಮತ್ತು 8ರಂದು ಮೂಡುಬಿದಿರೆಯ ಆಳ್ವಾಸ್‌ನ ವಿದ್ಯಾಗಿರಿ ಆವರಣದಲ್ಲಿ ನಡೆಯಲಿದೆ. 16ನೇ ಆವೃತ್ತಿಯ ‘ಆಳ್ವಾಸ್ ಪ್ರಗತಿ 2026ರಲ್ಲಿ ಐಟಿ, ಐಟಿಐಎಸ್, ಉತ್ಪಾದನಾ ವಲಯ, ಆರೋಗ್ಯ ಮತ್ತು ಔಷಧ, ಬ್ಯಾಂಕಿಂಗ್ ಮತ್ತು ಹಣಕಾಸು, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆತಿಥ್ಯ, ಮಾಧ್ಯಮ, ಎಲೆಕ್ಟ್ರಾನಿಕ್ಸ್, ದೂರಸಂಪರ್ಕ ಹಾಗೂ ನಿರ್ಮಾಣ ಕ್ಷೇತ್ರಗಳ 320 ಕಂಪನಿಗಳು ನೋಂದಾಯಿಸಿಕೊಂಡಿದ್ದು, 350ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.2026ರ ಶೈಕ್ಷಣಿಕ ವರ್ಷದಲ್ಲಿ ಅಥವಾ ಅದಕ್ಕೂ ಮೊದಲು ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು, ಎಸ್ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್, ನರ್ಸಿಂಗ್, ವೈದ್ಯಕೀಯ, ಪ್ಯಾರಾ ಮೆಡಿಕಲ್, ಬಿಬಿಎ, ಎಂಬಿಎ ಸೇರಿದಂತೆ ಎಲ್ಲ ವಿಭಾಗದವರು ಭಾಗವಹಿಸಬಹುದು. ಹೊರ ಜಿಲ್ಲೆಗಳಿಂದ ಬರುವ…
ಮಂಗಳೂರು, ಜು. 31 :2015 ರ ಕೊಲೆ ಯತ್ನ ಪ್ರಕರಣದ ಪ್ರಮುಖ ಆರೋಪಿಯನ್ನು 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಂಗಳೂರು ನಗರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಮಲ್ಲೇನಹಳ್ಳಿ ಪೋಸ್ಟ್‌ನ ಕರ್ನೆಳ್ಳಿ ಗ್ರಾಮದ ನಿವಾಸಿ ಚುಂಕಿ ಆಕಾಶಭವನ ಅಲಿಯಾಸ್ ಸಂತೋಷ್ ಎಸ್ (34) ಎಂದು ಗುರುತಿಸಲಾಗಿದೆ.ಪೊಲೀಸರ ಪ್ರಕಾರ, ಈ ಘಟನೆ 2015 ರಲ್ಲಿ ಆಕಾಶಭವನದಲ್ಲಿ ನಡೆದ ಮೆಹಂದಿ ಸಮಾರಂಭದಲ್ಲಿ ನಡೆದಿತ್ತು. ಅಶೋಕ್ ಕುಮಾರ್ ಕೊಟ್ಟಾರಿ ಮತ್ತು ಮತ್ತೊಬ್ಬ ಆರೋಪಿ ಜಗ್ಗು ನಡುವೆ ಜಗಳ ನಡೆದಿತ್ತು. ಇದರ ನಂತರ, ಪ್ರಮುಖ ಆರೋಪಿ ಚುಂಕಿ ಆಕಾಶ್ ಭವನ್, ತನ್ನ ಸಹಚರರಾದ ರಂಜಿತ್, ಧನು, ಧೂಮಾ, ಸ್ವೀಟಿ ಅಲಿಯಾಸ್ ನರೇಶ್ ಮತ್ತು ಜಗ್ಗು ಅವರೊಂದಿಗೆ ಅಶೋಕ್ ಕುಮಾರ್ ಕೊಟ್ಟಾರಿಯ ರವರಿಗೆ ತಲವಾರಿನಿಂದ ಕಡಿದು ಮಾರಣಾಂತಿಕ ಹಲ್ಲೆ ನಡೆಸಿ ಗಂಭೀರ ಗಾಯವುಂಟು ಮಾಡಿ ಕೊಲೆಯತ್ನ ನಡೆಸಿದ್ದು, ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ 135/2015…
ಮಂಗಳೂರು: ನೀನಾಸಂ, ರಂಗಾಯಣ ತರಬೇತಿ ಕೇಂದ್ರಗಳಂತೆ ತುಳು ರಂಗಭೂಮಿಗೂ ತರಬೇತಿ ಕೇಂದ್ರದ ಅಗತ್ಯವಿದೆ. ಹೊಸ ಕಲಾವಿದರು ಈ ಕ್ಷೇತ್ರಕ್ಕೆ ಪರಿಚಯವಾಗಬೇಕಿದೆ. ಇತ್ತೀಚೆಗೆ ಸ್ಥಳೀಯ ಟಿವಿ ಶೋಗಳು ಈ ರೀತಿಯ ಕೆಲಸಕ್ಕೆ ತೊಡಗಿವೆ.ಸರಕಾರ ತುಳುವಿಗೊಂದು ರಂಗಾಯಣ ಆರಂಭಿಸಬೇಕು ಎಂದು ತುಳು ನಾಟಕ ಮತ್ತು ಸಿನೆಮಾ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲಬೈಲ್ ತಿಳಿಸಿದ್ದಾರೆ. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠದ ವತಿಯಿಂದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ತುಳು ವಿಭಾಗ ಮತ್ತು ಕನ್ನಡ ವಿಭಾಗದ ಸಹಕಾರದಲ್ಲಿ ವಿಶ್ವವಿದ್ಯಾಲಯದ ಲ್ಲಿ ನಡೆದ ‘ಪ್ರಚಾರೋಪನ್ಯಾಸ’ ಕಾರ್ಯಕ್ರಮದಲ್ಲಿ ಮಾತನಾಡಿದರು. ತುಳು ರಂಗಭೂಮಿ ಯಶಸ್ವಿಯಾಗಲು ಮುಖ್ಯ ಕಾರಣ ಈ ಮಣ್ಣಿನ ಸತ್ವ , ಜನಪದೀಯ ಕತೆಗಳು. ತುಳು ನಾಟಕಗಳನ್ನು ಏಕಕಾಲಕ್ಕೆ 20,000 ಪ್ರೇಕ್ಷಕರು ವೀಕ್ಷಿಸಿದಂತಹ ದಾಖಲೆಗಳಿವೆ. ತುಳು ರಂಗಭೂಮಿಗೆ ಶ್ರೀಮಂತ, ಮಧ್ಯಮ ಮತ್ತು ಬಡ ವರ್ಗ ಹೀಗೆ ಎಲ್ಲಾ ರೀತಿಯ ಕಲಾಭಿಮಾನಿಗಳಿದ್ದಾರೆ. ಇದು ನಮ್ಮ ರಂಗಭೂಮಿಯ ವಿಶೇಷತೆ ಎಂದ ಅವರು, ಹಿಂದೆ ಗದ್ದೆಗಳಲ್ಲಿ ಊರಿನ ಸಂಘ ಸಂಸ್ಥೆಗಳ…
ಉಳ್ಳಾಲ: ನಾಲ್ಕು ಗೋಡೆಗಳ ಮಧ್ಯೆ ಮಕ್ಕಳಿಗೆ ಶಿಕ್ಷಣ ನೀಡಿದರಷ್ಟೆ ಉತ್ತಮ ಶಿಕ್ಷಕರಾಗಲು ಸಾಧ್ಯವಿಲ್ಲ. ಜನರೊಂದಿಗೆ ಬೆರೆತು ಸಮಾಜದ ಏಳಿಗೆಗಾಗಿ ತನ್ನನ್ನ ತೊಡಗಿಸಿದರೆ ಮಾತ್ರ ಉತ್ತಮ ಶಿಕ್ಷಕನಾಗಲು ಸಾಧ್ಯವಿದೆ. ಭಗತ್ ಸಿಂಗ್ ಪ್ರತಿಷ್ಠಾನವು ಸಮಾಜಕ್ಕೆ ಆದರ್ಶ ಪ್ರಾಯರಾದವರನ್ನ ಗುರುತಿಸಿ ಗುರುವಂದನೆ ನಡೆಸುವ ಮೂಲಕ ಗುರುಪರಂಪರೆಯ ಸಂಸ್ಕೃತಿಯ ಸಂರಕ್ಷಣೆ ಮಾಡುತ್ತಿದೆಯೆಂದು ನಿವೃತ್ತ ಮುಖ್ಯ ಶಿಕ್ಷಕರು,ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷರಾದ ರವೀಂದ್ರ ರೈ ಕಳ್ಳಿಮಾರು ಹೇಳಿದರು. ಗುರುಪೂರ್ಣಿಮೆಯ ಪ್ರಯುಕ್ತ ತೊಕ್ಕೊಟ್ಟಿನ ಭಗತ್ ಸಿಂಗ್ ಪ್ರತಿಷ್ಠಾನದ ವತಿಯಿಂದ ಅಸೈಗೋಳಿಯ ಅಯ್ಯಪ್ಪ ಮಂದಿರದಲ್ಲಿ ನಿವೃತ್ತ ಮುಖ್ಯ ಶಿಕ್ಷಕರು, ಮಂಗಳೂರು ವಿವಿಯ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ಸದಸ್ಯರಾದ ಆನಂದ.ಕೆ ಅಸೈಗೋಳಿಯವರಿಗೆ ನಡೆದ ಗುರುವಂದನಾ ಕಾರ್ಯಕ್ರಮವನ್ನುದ್ಧೇಶಿಸಿ ಅವರು ಮಾತನಾಡಿದರು. ವಿಷಯ ಜ್ಞಾನ ಇದ್ದವರು ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯ. ಆನಂದ ಅಸೈಗೋಳಿಯವರು ಆ ರೀತಿಯ ಎಲ್ಲಾ ಗುಣಗಳನ್ನ ಅಳವಡಿಸಿದ ಉತ್ತಮ ಶಿಕ್ಷಕರಾಗಿದ್ದಾರೆ. ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲೂ ತನ್ನನ್ನು ತೊಡಗಿಸಿಕೊಂಡಿರುವ ಅವರು ವಿಶಾಲ ಮನಸ್ಸುಳ್ಳವರಾಗಿದ್ದಾರೆ.ಅವರ ದೈಹಿಕ ಮತ್ತು ಮಾನಸಿಕ…
ಉಳ್ಳಾಲ: ಭರತನಾಟ್ಯ ಕ್ಷೇತ್ರಕ್ಕೆ ಶ್ರಾವಣ್ ಉಳ್ಳಾಲ್ ಅವರ ಕೊಡುಗೆ ಅಪಾರ ಎಂದು ಮೊಗವೀರ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಾನಕೀ ಪುತ್ರನ್ ಹೇಳಿದರು.ಉಳ್ಳಾಲದ ಮಂತ್ರ ನಾಟ್ಯಕಲಾ ಗುರುಕುಲವು ಇತ್ತೀಚೆಗೆ ನಿಧನರಾದ ಭರತನಾಟ್ಯ ಗುರು ವಿದ್ವಾನ್ ಶ್ರಾವಣ್ ಉಳ್ಳಾಲರ ನೆನಪಿನಲ್ಲಿ ಉಳ್ಳಾಲ ಭಗವತೀ ಕ್ಷೇತ್ರದ ಸಭಾಂಗಣದಲ್ಲಿ ಆಯೋಜಿಸಿದ “ಶ್ರಾವಣ ಸ್ಮರಣ” ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶ್ರಾವಣ್ ಉಳ್ಳಾಲರು ದೇಶ ವಿದೇಶಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಾ, ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿ, ಸಣ್ಣ ಪ್ರಾಯದಲ್ಲೇ ನಮ್ಮನ್ನಗಲಿರುವುದು ಭರತನಾಟ್ಯ ಕ್ಷೇತ್ರಕ್ಕೆ ಅತೀ ದೊಡ್ಡ ನಷ್ಟ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರೇಶ್ ಭಟ್ನಗರ ವಹಿಸಿದ್ದರು. ಶ್ರೀಮತಿ ಬಬಿತಾ ಸೂರಜ್, ಕುಸುಮಾಕರ್ ಕುಂಪಲ, ಗುರುಕುಲದ ಗೌರವಾಧ್ಯಕ್ಷರು ಶ್ರೀಮತಿ ಶಕೀಲಾ ಜನಾರ್ಧನ್, ಟ್ರಸ್ಟಿಗಳಾದ ಶೈನಾ ಶ್ರಾವಣ್, ಬಬಿತಾ ಕಿರಣ್ ಭಾಗವಹಿಸಿದ್ದರು.ವಿದುಷಿ ಹರ್ಷಿತಾ ಸಾಲ್ಯಾನ್ ರಿಂದ ಏಕವ್ಯಕ್ತಿ ಹಾಗೂ ಪ್ರಕಾಮ್ಯ ತಂಡದಿಂದ ಸಮೂಹ ನೃತ್ಯ ಕಾರ್ಯಕ್ರಮ ನೆರವೇರಿತು. ಕಾರ್ಯದರ್ಶಿ ಕಿರಣ್ ಉಳ್ಳಾಲ್ ಸ್ವಾಗತಿಸಿ, ವಂದಿಸಿದರು.
ಉಳ್ಳಾಲ: ಛಾಯಾಗ್ರಾಹಕರ ಕುಟುಂಬ ಭದ್ರತೆಗಾಗಿ ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಷನ್(ಎಸ್ ಕೆಪಿಎ)ವತಿಯಿಂದ ನೂತನ ಯೋಜನೆಯೊಂದು ಜಾರಿಗೊಳ್ಳಲಿದ್ದು,ಸಂಘದ ಎಲ್ಲಾ ಸದಸ್ಯರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಷನ್ ನ ಜಿಲ್ಲಾಧ್ಯಕ್ಷರಾದ ನವೀನ್ ರೈ ಪಂಜಳ ತಿಳಿಸಿದರು. ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಷನ್ ನ ಉಳ್ಳಾಲ ವಲಯದ ಹದಿಮೂರನೇ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ದಕ್ಷಿಣ ಕನ್ನಡ, ಉಡುಪಿ ಉಭಯ ಜಿಲ್ಲೆಯ ಛಾಯಾಗ್ರಾಹಕರ ಶ್ರೇಯೋಭಿವೃದ್ಧಿಗಾಗಿ ಎಸ್ ಕೆಪಿಎ ಅವಿರತವಾಗಿ ಶ್ರಮಿಸುತ್ತಿದೆ. ಸಂಘದ ಸದಸ್ಯರ ಕುಟುಂಬದ ಭದ್ರತೆಗಾಗಿ ಎಸ್ ಕೆಪಿಎ ವತಿಯಿಂದ ನೂತನ ಯೋಜನೆಯೊಂದನ್ನು ಈ ವರುಷದ ಕೊನೆಯಲ್ಲಿ ಜಾರಿಗೊಳಿಸಲಿದ್ದು, ಸದಸ್ಯರು ವಾರ್ಷಿಕ 3000/ ರೂ.ಗಳನ್ನ ಕಟ್ಟಿದಲ್ಲಿ ಅವರ ಮರಣಾನಂತರ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿಗಳು ಯೋಜನೆಯ ಮುಖಾಂತರ ಪರಿಹಾರ ರೂಪದಲ್ಲಿ ಸಿಗಲಿದೆಯೆಂದರು.ಎಸ್ ಕೆಪಿಎ ಉಳ್ಳಾಲ ವಲಯದ ಅಧ್ಯಕ್ಷರಾದ ರಾಜೇಶ್ ತೊಕ್ಕೊಟ್ಟು ಅಧ್ಯಕ್ಷತೆ ವಹಿಸಿದ್ದರು.…

