Author: UllalaVani

Kannada News From Coastal Karnataka

UN NETWORKS ತಲಪಾಡಿ : ಪ್ರತಿಯೊಬ್ಬ ನಾಗರಿಕನು ತನ್ನ ಜವಾಬ್ದಾರಿಯನ್ನು ಅರಿತುಕೊಂಡು ಕಸದ ನಿರ್ವಹಣೆಯನ್ನು ಮಾಡಿದಲ್ಲಿ ಸ್ವಚ್ಛ ಸುಂದರ ಪರಿಸರ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ವಚ್ಛತಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸ್ವಚ್ಛ ಮನಸ್ಸಿನ ಸೇನಾನಿಗಳಾಗಬೇಕು ಎಂದು ಎಂ.ವಿ. ಶೆಟ್ಟಿ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಪ್ರಾಧ್ಯಾಪಕಿ ಹಾಗೂ ರಾಮಕೃಷ್ಣ ಮಿಷನ್‍ನ ಸ್ವಚ್ಛ ಭಾರತಾ ಅಭಿಯಾನದ ಸಂಯೋಜಕಿ ಪ್ರೊ. ನಿವೇದಿತಾ ಕಾಮತ್ ಅಭಿಪ್ರಾಯಪಟ್ಟರು. ಅವರು ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲಿನಲ್ಲಿ ರಾಮಕೃಷ್ಣ ಮಿಶನ್ ಆಯೋಜಿಸಿದ ಸ್ವಚ್ಛ ಮನಸ್ಸು -2019 ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ನಮ್ಮ ಪರಿಸರದ ವಿಕೃತಿಗೆ ಮೂಲ ಕಾರಣ ಮಾನವ ತನ್ನ ಸುಖಲೋಲುಪತೆಯ ಜೀವನಕ್ಕಾಗಿ ಆತನು ಪ್ರಕೃತಿಯ ಮೇಲೆ ಮಾಡಿದ ಆಕ್ರಮಣದಿಂದಾಗಿ ನಮ್ಮ ಸುಂದರ ಪರಿಸರ ಇಂದು ವಿನಾಶದ ಅಂಚಿನಲ್ಲಿದೆ. ಹತ್ತು ಹಲವು ಮಾಲಿನ್ಯಗಳನ್ನು ತನ್ನ ಒಡಲಲ್ಲಿರಿಸಿದ ಪ್ರಕೃತಿಯು ಇಂದು ರೋಗರುಜಿನಗಳ ಗೂಡಾಗಿದೆ. ಇದರ ಮೂಲ ಕಾರಣವನ್ನು ಹುಡುಕುತ್ತಾ ಹೋದರೆ ನಮಗೆ…

Read More

UN NETWORKS ಉಳ್ಳಾಲ : ಅಂಬಿಕಾರೋಡ್‍ನ ಗಟ್ಟಿ ಸಮಾಜದ ಮಾತೃ ಸಂಘದ ಅಧ್ಯಕ್ಷರಾಗಿ ಪವಿತ್ರ ಕುಮಾರ್ ಗಟ್ಟಿ ಕುತ್ತಾರ್ ಆಯ್ಕೆಯಾಗಿದ್ದಾರೆ. 71ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.ಉಪಾಧ್ಯಕ್ಷರಾಗಿ ನಿತಿನ್ ಗಟ್ಟಿ ಲೇಡಿಹಿಲ್, ಪ್ರಧಾನ ಕಾರ್ಯದರ್ಶಿಯಾಗಿ ದಯಾನಂದ ಗಟ್ಟಿ ಪಿಲಾರ್, ಜೊತೆ ಕಾರ್ಯದರ್ಶಿಯಾಗಿ ಪದ್ಮನಾಭ ಗಟ್ಟಿ ಬಜಿಲಕೇರಿ, ಕೋಶಾಧಿಕಾರಿಯಾಗಿ ಕೃಷ್ಣ ಮೋಹನ್ ಗಟ್ಟಿ ಮಣ್ಣಗುಡ್ಡೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿಶ್ವನಾಥ ಗಟ್ಟಿ ವಗ್ಗ, ಪ್ರಶಾಂತ್ ಗಟ್ಟಿ ಅಮ್ಮೆಂಬಳ, ಜನಾರ್ಧನ ಗಟ್ಟಿ , ದಿನೇಶ್ ಗಟ್ಟಿ ಕುತ್ತಾರ್, ಸೇಸಪ್ಪ ಗಟ್ಟಿ ಕೊಲ್ಯ, ದಯಾನಂದ ಗಟ್ಟಿ ಪಿಲಿಕೂರು, ಕೆ. ಆರ್. ಗಟ್ಟಿ ಕೊರಂತೋಡಿ, ರಾಜೇಶ್ ಗಟ್ಟಿ ಕುಂಪಲ, ಸುಹಾಸಿನಿ ಗಟ್ಟಿ ಕೂಟತ್ತಜೆ, ಅಶೋಕ್ ಗಟ್ಟಿ ನಂದಾವರ, ಯಜ್ಞೇಶ್ವರ ಗಟ್ಟಿ ಕಾವೂರು, ಚಂದ್ರಶೇಖರ್ ಗಟ್ಟಿ ಕೊಂಚಾಡಿ, ಪ್ರಶಾಂತ್ ಗಟ್ಟಿ ಅಡ್ಕ, ಪುಷ್ಪಲತಾ ಗಟ್ಟಿ ಯು.ಕೆ. ಆಯ್ಕೆಯಾದರು.

Read More

UN NETWORKS ಕೊಣಾಜೆ: ದೇಶದಲ್ಲಿ ವಿಶ್ವವಿದ್ಯಾನಿಲಯಗಳು ಹಿಂದಿನ ಗೌರವವನ್ನು ಕಳೆದುಕೊಳ್ಳುತ್ತಿವೆ. ಇದಕ್ಕೆ ಆರ್ಥಿಕ -ಸಾಮಾಜಿಕ ಸಂಪನ್ಮೂಲಗಳ ಕೊರತೆ ಕಾರಣ. ನಮ್ಮ ವಿವಿಗಳು ವಿದೇಶಿ ವಿವಿಗಳನ್ನು ಅನುಕರಣೆ ಮಾಡದೆ ನಮ್ಮದೇ ಮಾದರಿಯಲ್ಲಿ ಶೈಕ್ಷಣಿಕ ಗುಣಮಟ್ಟಕ್ಕೆ ಒತ್ತು ನೀಡುವುದರೊಂದಿಗೆ ಆದರ್ಶ ರೀತಿಯಲ್ಲಿ ಪುನಶ್ಚೇತನವಾಗಬೇಕು. ನೂತನ ಕುಲಪತಿ ಪ್ರೊ| ಎಡಪಡಿತ್ತಾಯ ಅವರ ನೇತೃತ್ವದಲ್ಲಿ ಮಂಗಳೂರು ವಿವಿ ಇದೇ ಮಾರ್ಗದಲ್ಲಿ ಉನ್ನತ ಸ್ಥಾನಕ್ಕೆ ಏರಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು. ಡಾ| ಎಡಪಡಿತ್ತಾಯ ಅಭಿನಂದನ ಸಮಿತಿ ವತಿಯಿಂದ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಶನಿವಾರ ನೂತನ ಉಪಕುಲಪತಿ ಪ್ರೊ| ಪಿ.ಎಸ್‌. ಎಡಪಡಿತ್ತಾಯ ಅವರಿಗೆ ಅಭಿನಂದನೆ ನೆರವೇರಿಸಿ ಅವರು ಮಾತನಾಡಿದರು.50 ವರ್ಷಗಳಲ್ಲಿ ನಾನು ಹಲವಾರು ವಿಶ್ವವಿದ್ಯಾನಿಲಯ, ಕುಲಪತಿಗಳು, ರಾಜ್ಯಪಾಲರನ್ನು ಕಂಡಿದ್ದೇನೆ. ಹಿಂದೆ ವಿವಿಗಳಿಗೆ ಇದ್ದ ಹೆಸರು -ಗೌರವ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳ ಬುದ್ಧಿಮತ್ತೆ, ಜ್ಞಾನವನ್ನು ದುಡಿಸಿಕೊಳ್ಳುವ ಕಾರ್ಯಕ್ಕೆ ಪ್ರಾಧ್ಯಾಪಕರು ಮುಂದಾಗಬೇಕು. ಮಂಗಳೂರು ವಿವಿ ಮೇಲೆ ಹಲವು ನಿರೀಕ್ಷೆಗಳಿದ್ದು, ನಮ್ಮದೇ ಜಿಲ್ಲೆಯ ಉಪಕುಲಪತಿಗಳು…

Read More

UN NETWORKS ಮುಡಿಪು : ತುಂಬೆಯ ನೇತ್ರಾವತಿ ನದಿಯಿಂದ ಮುಡಿಪು ಸಮೀಪದ ಮೂಳೂರುವಿನಲ್ಲಿ ಹೊಸದಾಗಿ ಜಾರಿಗೊಳಿಸಿದ ಕೆನರಾ ಕೈಗಾರಿಕಾ ಪ್ರದೇಶ ಗಳಿಗೆ ನೀರು ಸರಬರಾಜು ಮಾಡಲು ಯೋಜನೆ ರೂಪಿಸಲಾಗುತ್ತಿದ್ದು, ಈ ಮೂಲಕ ಮಂಗಳೂರಿಗೆ ನೀರುಣಿಸುವ ತುಂಬೆ ವೆಂಟೆಡ್‌ ಡ್ಯಾಂನ ಮೇಲೆ ಇನ್ನಷ್ಟು ಒತ್ತಡ ಎದುರಾದಂತಾಗಿದೆ. ಈ ಬಾರಿ, ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ನಗರದಲ್ಲಿ ಕುಡಿ ಯುವ ನೀರಿಗೆ ಸಮಸ್ಯೆ ಉಲ್ಬಣಿಸಿತ್ತು. ಹೀಗಾಗಿ ಕೈಗಾರಿಕೆಗಳಿಗೆ ಆವಶ್ಯ ನೀರನ್ನು ಪರ್ಯಾಯ ಮೂಲಗಳಿಂದ ಒದಗಿಸ ಬೇಕು ಎಂದು ಆಡಳಿತ ವ್ಯವಸ್ಥೆ ಚಿಂತನೆ ನಡೆಸುತ್ತಿತ್ತು. ಆದರೆ ಇದೀಗ ತುಂಬೆ ಡ್ಯಾಂನ ನೀರನ್ನು ಕೆನರಾ ಕೈಗಾರಿಕಾ ಪ್ರದೇಶಕ್ಕೆ ಹರಿಸಲು ಯೋಜನೆಯೊಂದನ್ನು ರೂಪಿಸಲಾಗುತ್ತಿದೆ. ಯೋಜನೆಗೆ ಟೆಂಡರ್‌ ಆಹ್ವಾನ ಕೆನರಾ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 600 ಎಕ್ರೆಯಷ್ಟು ಭೂಮಿ ಕೆಐಎಡಿಬಿ ವಶದಲ್ಲಿದೆ. ಇದರಲ್ಲಿ 67.87 ಎಕ್ರೆ ಭೂಮಿಯನ್ನು ಹೊಸ ಜೈಲು ನಿರ್ಮಾಣಕ್ಕೆ ಮೀಸಲಿಡಲಾಗಿದೆ. ಉಳಿದ ಭೂಮಿ ಇನ್ನಷ್ಟೇ ಕೈಗಾರಿಕೆಗಳಿಗೆ ನೀಡಬೇಕಾಗಿದೆ. ಇದಕ್ಕೆ ಪೂರಕವಾಗಿ ಈ ಪ್ರದೇಶಕ್ಕೆ ನೀರು ಸರಬರಾಜಿಗಾಗಿ…

Read More

UN NETWORKS ಉಳ್ಳಾಲ : ಸುಮಾರು 12 ಕೋಟಿಗೂ ಅಧಿಕ ಸದಸ್ಯರ ಮೂಲಕ ಬಿ.ಜೆ.ಪಿ. ಜಗತ್ತಿನ ಅತೀ ದೊಡ್ಡ ರಾಜಕೀಯ ಶಕ್ತಿಯಾಗಿದೆ. ಮುಂದೆ 20 ಕೋಟಿ ಸದಸ್ಯರನ್ನು ನೋಂದಾಯಿಸುವ ಗುರಿಯಿಟ್ಟು ಸದಸ್ಯತನ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿಯವರು ವಾರಾಣಾಸಿಯಲ್ಲಿ ಚಾಲನೆ ನೀಡಿದ್ದಾರೆ ಎಂದು ಬಿ.ಜೆ.ಪಿ.ಸದಸ್ಯತನ ಅಭಿಯಾನದ ಜಿಲ್ಲಾ ಸಂಚಾಲಕ ಗೋಪಾಲಕೃಷ್ಣ ಹೇರಳೆ ತಿಳಿಸಿದ್ದಾರೆ. ಅವರು ಮಂಗಳೂರು ಬಿ.ಜೆ.ಪಿ.ಯ ವತಿಯಿಂದ ನಡೆದ ಸಂಘಟನಾ ಪರ್ವ ಕಾರ್ಯಾಗಾರದಲ್ಲಿ ಹೇಳಿದರು. ಕ್ಷೇತ್ರದ ವ್ಯಾಪ್ತಿಯಲ್ಲಿ 45 ಶಕ್ತಿ ಕೇಂದ್ರಗಳನ್ನಾಗಿ ವಿಂಗಡಿಸಿ ಸಂಚಾಲಕ, ಮತ್ತು ಪ್ರಮುಖರನ್ನು ನಿಯೋಜಿಸಿ ಪ್ರತಿ ಬೂತಿನಲ್ಲೂ ಮಿಸ್ ಕಾಲ್ ಮೂಲಕ ಸದಸ್ಯರನ್ನು ಸೇರ್ಪಡಿಸುವ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಕ್ಷೇತ್ರಧ್ಯಕ್ಷ ಸಂತೋಷ್ ಬೋಳಿಯಾರ್ ವಹಿಸಿದ್ದರು. ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ ಉಳ್ಳಾಲ್, ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ನಮಿತಾ ಶ್ಯಾಮ್, ಹಿರಿಯರಾದ ಸೀತರಾಮ್ ಬಂಗೇರ, ಸಂಜೀವ ಶೆಟ್ಟಿ ಅಂಬ್ಲಮೊಗರು, ಉಪಸ್ಥಿತರಿದ್ದರು. ಪ್ರ.ಕಾರ್ಯದರ್ಶಿ…

Read More

UN NETWORKS ಕೊಣಾಜೆ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಳ್ಳಾಲ ಸ್ಥಳೀಯ ಸಂಸ್ಥೆ ಮತ್ತು ಸೌಜನ್ಯ ಸ್ಕೌಟ್ಸ್ ದಳ ಶ್ರೀರಾಮಕೃಷ್ಣ ಪ್ರೌಢಶಾಲೆ ಹರೇಕಳ ಇದರ ವತಿಯಿಂದ ಸ್ಕೌಟ್ಸ್ ಗೈಡ್ಸ್ ಕಬ್ ಬುಲ್‍ಬುಲ್ ಮಕ್ಕಳಿಗಾಗಿ ಪರಂಡೆ ಗದ್ದೆಯಲ್ಲಿ 5ನೇ ವರ್ಷದ ಮುಂಗಾರು ಮಳೆಯಲ್ಲಿ ಭತ್ತದ ನಾಟಿ, ಕೆಸರು ಗದ್ದೆಯಲ್ಲಿ ಕ್ರೀಡೋತ್ಸವದಲ್ಲಿ ಮಕ್ಕಳು ಭಾಗವಹಿಸಿದರು.

Read More

UN NETWORKS ಮಂಗಳೂರು : ಫೈವ್ ಟ್ರಿಲಿಯನ್ ಇಕಾನಮಿ ಉದ್ದೇಶವನ್ನು ಇಟ್ಟುಕೊಂಡಿರುವುದರಿಂದ ದೇಶ ಸರ್ವತೋಮುಖ ಅಭಿವೃದ್ಧಿಯಾಗಲಿದೆ. ದೇಶದ ಮೂಲಸೌಕರ್ಯ ಅಭಿವೃದ್ಧಿಗೆ 100 ಲಕ್ಷ ಕೋಟಿಯನ್ನು ಮೀಸಲಿರಿಸಲಾಗಿದೆ. ಇದರಿಂದ ಕಟ್ಟಡ ಹಾಗೂ ಇತರೆ ಸಾಮಗ್ರಿ ತಯಾರಿಕಾ ಘಟಕಗಳಿಗೆ ಬಹಳ ಲಾಭದಾಯಕವಾಗಲಿದೆ. ಎಂದು ಕೆನರಾ ಸಣ್ಣ ಕೈಗಾರಿಕೆಗಳ ಅಸೋಸಿಯೇಷನ್ ಅಧ್ಯಕ್ಷ ಗೌರವ್ ಹೆಗ್ಡೆ ಅಭಿಪ್ರಾಯಪಟ್ಟರು. ಅವರು ಬೈಕಂಪಾಡಿಯ ಕೆನರಾ ಸಣ್ಣ ಕೈಗಾರಿಕೆಗಳ ಅಸೋಸಿಯೇಷನ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಬಜೆಟ್ -2019 ಚರ್ಚಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಕಾನ್ಫಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀ ( ಸಿಐಐ ) ಕಾರ್ಯಕ್ರಮ ಆಯೋಜಿಸಿತ್ತು. ಸಾಮಗ್ರಿಗಳ ಸಾಗಾಟ ಲಾಜಸ್ಟಿಕ್ ಗಳ ವ್ಯವಹಾರವೂ ಅಭಿವೃದ್ಧಿಯಾಗುವುದು. ಕಾರ್ಮಿಕರಿಗೆ ಕೆಲಸವಾಗಲಿದೆ. ಜಿಎಸ್ ಟಿಯಲ್ಲೂ ಸರಳೀಕರಣ ನೀತಿಯನ್ನು ಜಾರಿಗೊಳಿಸುವ ಉದ್ದೇಶ ಇದೆ. ಸಹಜ್ ಮತ್ತು ಸರಳ್ ಫೈಲಿಂಗ್ ಉದ್ದಿಮೆದಾರರಿಗೆ ಉಪಯುಕ್ತವಾಗಲಿದೆ. ಕಾರ್ಖಾನೆ ಕಾರ್ಮಿಕರಿಗೆ ಲೇಬರ್ ಕೋಡ್ ನೀತಿ ಜಾರಿಗೊಳಿಸುವ ಮೂಲಕ ಲೇಬರ್ ಮ್ಯಾನೇಜ್ ಮಂಟ್ ಸುಲಭವಾಗಲಿದೆ. ಗ್ರಾಮೀಣ ಜನರಿಗೆ ಕೌಶಲ್ಯವೃದ್ಧಿಗೆ ಒತ್ತು ಹಾಗೂ ಕಡಿಮೆ ವೆಚ್ಚದ ಮನೆ…

Read More

UN NETWORKS ಉಳ್ಳಾಲ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಬಿರುಸಿನ ಗಾಳಿಗೆ ಸೋಮೇಶ್ವರ ಉಚ್ಚಿಲ ಪ್ರದೇಶದಲ್ಲಿ ಕಡಲ್ಕೊರೆತದ ಅಬ್ಬರಕ್ಕೆ 10ಮನೆಗಳು ಅಪಾಯದ ಸ್ಥಿತಿಯಲ್ಲಿದೆ. ಹಲವು ಮನೆಗಳು ಹಾನಿಗೊಳಗಾಗಿದೆ. ಐದು ಮರಗಳು ಧರಾಶಾಹಿಯಾಗಿದೆ. ತಾತ್ಕಾಲಿಕ ಕಡಲ್ಕೊರೆತಕ್ಕೆ ತಟದ ಸುಮಾರು 200ಮೀ. ಉದ್ದಕ್ಕೆ ಹಾಕಲಾದ ಭಾರೀ ಗಾತ್ರದ ಕಲ್ಲುಗಳು ಸಮುದ್ರಪಾಲಾಗುತ್ತಿದೆ. ಎರಡು ವಾರದ ಹಿಂದೆ ಉಚ್ಚಿಲ ಕೋಟೆ, ಸೀಗ್ರೌಂಡ್ ಪ್ರದೇಶದಲ್ಲಿ ಭಾರೀ ಪ್ರಮಾಣದ ಕಡಲ್ಕೊರೆತ ಉಂಟಾಗಿದ್ದು ಅದರಿಂದಾಗಿ ಬಹಳಷ್ಟು ಮನೆಗಳು ಹಾನಿಗೀಡಾಗಿದ್ದವು, ಕೆಲವು ಮನೆಗಳು ಧರಾಶಾಹಿಯಾಗಿತ್ತು. ಶನಿವಾರ ಹಾಗೂ ಭಾನುವಾರದ ಮಳೆ ಹಾಗೂ ಬಿರುಸಿನ ಗಾಳಿಗೆ ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು ಉಚ್ಚಿಲದ ಕಡಲ ತಟ ಭಾಗದ ನಿವಾಸಿಗಳಾದ ರೂಪೇಶ್, ಸಂತೋಷ್, ತಾರಾನಾಥ್, ಸಂಜೀವ, ಕಿಶೋರ್, ಚಿದಾನಂದ, ಪ್ರದೀಪ್, ಚಂದಪ್ಪಣ್ಣವರ ಅಂಗಡಿ ಕಡಲ್ಕೊರೆತಕ್ಕೆ ಹಾನಿಯಾಗಿದೆ. ಹಾಗಿದ್ದರೂ ಈ ಭಾಗದಲ್ಲಿ ತಾತ್ಕಾಲಿಕ ಬ್ರೇಟ್ ವಾಟರ್ ದೊಡ್ಡ ಸಮಸ್ಯೆ ಎಂಬುದು ಕೆಲವರ ಅಭಿಪ್ರಾಯ.

Read More

UN NETWORKS ಮಂಗಳೂರು :ಆಯುಷ್ ಫೆಡರೇಶನ್ ಆಫ್ ಇಂಡಿಯಾ, ಮಂಗಳೂರು ವತಿಯಿಂದ ನಗರದ ಅಭಿಮಾನ್ ರೆಸಿಡೆನ್ಸಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಆಯುಷ್ ವೈದ್ಯರಿಗೆ ನಿರಂತರ ಶಿಕ್ಷಣ ಕಾರ್ಯಾಗಾರ ಹಾಗೂ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಪ್ರಯುಕ್ತ ರಸಪ್ರಶ್ನೆಯೊಂದಿಗೆ ವಿವಿಧ ಕಾರ್ಯಕ್ರಮ ನಡೆಯಿತು. ನಿರಂತರ ವೈದ್ಯಕೀಯ ಕಾರ್ಯಕ್ರಮದಡಿಯಲ್ಲಿ ಪ್ರಸಿದ್ಧ ಯೋಗ ತಜ್ನ ಡಾ.ಕೆ.ಗಣೇಶ ಭಟ್ ರವರು ” ಯೋಗ ಥೆರಪಿ ಇನ್ ಫ಼್ರೋಜನ್ ಶೋಲ್ಡರ್” ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದರು.ಅಂತಾರಾಷ್ಟ್ರೀಯ ವೈದ್ಯರ ದಿನಾಚಾರಣೆಯ ಅಂಗವಾಗಿ ಆಯುಷ್ ವೈದ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಕು.ಅಶ್ವೀಜಾ ಉಡುಪ ಇವರಿಂದ ಅದ್ಭುತ ಯೋಗ ಪ್ರದರ್ಶನ ನಡೆದು ನಂತರ ಡಾ.ಪ್ರತಿಭಾ ರೈ, ಡಾ.ಸುಧೀರ್ ಪ್ರಭು, ಡಾ.ವಿಜಯಲಕ್ಷ್ಮಿ ಪ್ರಸನ್ನಿ ಇವರು ತಮ್ಮ ಸುಶ್ರಾವ್ಯ ಕಂಠದಿಂದ ಸಭಿಕರ ಮನಸೂರೆಗೊಂಡರು. ಡಾ.ಸುದೀಪ್ ದಂಪತಿಗಳ ನೃತ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ಡಾ.ಶಶಿಧರ ಕಜೆಯವರು ಕಾರ್ಯಕ್ರಮ ನಿರ್ವಹಿಸಿ, ಮಂಗಳೂರು ಏ.ಎಫ್.ಐ.ಅಧ್ಯಕ್ಷ ಡಾ.ಕೃಷ್ಣ ಎಮ್ ಗೋಖಲೆಯವರು ಸ್ವಾಗಸಿದರೆ ಕಾರ್ಯದರ್ಶಿ ಡಾ.ಸುಧೀಂದ್ರ ರಾವ್ ರವರು ವಂದನಾರ್ಪಣೆ ಮಾಡಿದರು.ಜಿಲ್ಲಾ ಅಧ್ಯಕ್ಷ…

Read More

UN NETWORKS ಸುರತ್ಕಲ್: ಕಥೊಲಿಕ್ ಸಭಾ ಮಂಗಳೂರು ಪ್ರದೇಶ, ಸುರತ್ಕಲ್ ವಲಯ ಮತ್ತು ಘಟಕಗಳ ವತಿಯಿಂದ ಪರಿಸರ ಜಾಗೃತಿ ಅಭಿಯಾನ-2019 ಪ್ರಯುಕ್ತ ಅರಣ್ಯ ಇಲಾಖೆಯ ಸಹಭಾಗಿತ್ವದೊಂದಿಗೆ ಪರಿಸರ ದಿನಾಚರಣೆ ಮುಕ್ಕ ಚಚ್೯ ವಠಾರದಲ್ಲಿ ನಡೆಯಿತು. ಮಂಗಳೂರು ಧರ್ಮಪ್ರಾಂತ್ಯ ಶ್ರೇಷ್ಠ ಗುರು ಮ್ಯಾಕ್ಸಿಂ ಎಲ್. ನೊರೊನ್ಹಾ ಅಶೀರ್ವಚನಗೈದರು.ಮುಖ್ಯ ಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿ’ಸೋಜಾ ಗೀಡ ನೆಡುವ ಮೂಲಕ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮಂಗಳೂರು ಉತ್ತರ ಕ್ಷೇತ್ರ ಶಾಸಕ ಡಾ.ವೈ ಭರತ್ ಶೆಟ್ಟಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದರು.ಕಿನ್ನಿಗೋಳಿ ವಲಯ ಅರಣ್ಯಾಧಿಕಾರಿ ಕೆ.ಸಿ ಮ್ಯಾಥ್ಯು ಪರಿಸರ ಸಂರಕ್ಷಣೆ ಮತ್ತು ಮಳೆ ನೀರು ಇಂಗಿಸುವಿಕೆ ಬಗ್ಗೆ ಮಾಹಿತಿ ನೀಡಿದರು.ಕಥೋಲಿಕ್ ಸಭಾದ ಅಧ್ಯಾತ್ಮಿಕ ನಿರ್ದೇಶಕ ಮ್ಯಾಥ್ಯು ವಾಸ್, ಸುರತ್ಕಲ್ ವಲಯದ ಪಾವ್ಲ್ ಪಿಂಟೊ, ಅಧ್ಯಾತ್ಮಿಕ ನಿರ್ದೇಶಕ ಸಿರಿಲ್ ಪಿಂಟೊ, ಮಂಗಳೂರು ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್, ಮುಕ್ಕ ಚಚ್೯ ಸಮಿತಿಯ ಉಪಾಧ್ಯಕ್ಷ ರೋಶನ್ ಡಿಸೋಜ, ಕಾರ್ಯದರ್ಶಿ ಶೈಲಾ ಡಿಸೋಜ, ಕೇಂದ್ರೀಯ ಸಮಿತಿ ಅಧ್ಯಕ್ಷ ಪಾವ್ಲ್ ರೊಲ್ಫಿ ಡಿಕೊಸ್ತಾ,…

Read More