UN NEWS NETWORKSಉಳ್ಳಾಲ: ಭಾರತೀಯ ಜನತಾ ಪಾರ್ಟಿ ಮಂಗಳೂರು ಮಂಡಲದ ವತಿಯಿಂದ ಉಳ್ಳಾಲ ನಗರಸಭೆಯಲ್ಲಿನ ಅವ್ಯವಹಾರ, ಕರ್ತವ್ಯಲೋಪ ನಿ ಸೋರಿಕೆ ಹಾಗೂ ಕಾಮಗಾರಿಯಲಿ ತಾರತಮ್ಯ ಧೋರಣೆಯ ವಿಚಾರದಲ್ಲಿ, ತನಿಖೆ ನಡೆಸುವ ಬಗ್ಗೆ ಮುಖ್ಯಾಽಕಾರಿ ವಿದ್ಯಾ ಕಾಳೆ ಯವರಿಗೆ ನಗರಸಭಾ ಬಿಜೆಪಿ ಸದಸ್ಯರು ಮತ್ತು ನಾಮ ನಿರ್ದೇಶಕ ಸದಸ್ಯರಿಂದ ಮನವಿಯನ್ನು ನೀಡಲಾಯಿತು. ಉಳ್ಳಾಲ ನಗರಸಭೆಯು ಹಗರಣಗಳ ತಾಣವಾಗಿದ್ದು, ಎಲ್ಲಾ ಚಟುವಟಿಕೆಗಳಲ್ಲಿ, ಅವ್ಯವಹಾರ ತುಂಬಿ ಹೋಗಿರುತ್ತದೆ, ಅದರೊಂದಿಗೆ ಸಮರ್ಪಕ ಲೆಕ್ಕ ಪತ್ರ ನಿರ್ವಹಣೆಯಿಲದೇ, ಅಧಿಕಾರಿಗಳ ಕರ್ತವ್ಯಲೋಪದಿಂದ ನಿಧಿ ವ್ಯಾಪಕವಾಗಿ ಸೋರಿಕೆಯಾಗಿದೆ, ಮನೆ ನಂಬ್ರ ಹಾಗೂ ವ್ಯಾಪಾರ ಲೈಸನ್ಸ್ ಕಟ್ಟಡ ಪರವಾನಿಗೆ ನೀಡುವಲ್ಲಿ, ಬಹಳಷ್ಟು ಭ್ರಷ್ಟಚಾರವಾಗಿದ್ದು ನಕಲಿ ರಶೀದಿ ಪುಸ್ತಕಗಳ ಬಳಕೆಯಾಗಿರುವ ಬಗ್ಗೆ ಹಾಗೂ ಹಿಂದಿನ ಪೌರಾಯುಕ್ತರ ಸೀಲು ಹಾಗೂ ಸಹಿಯನ್ನು ಫೋರ್ಜರಿ ಮಾಡಿ ದುರುಪಯೋಗ ಮಾಡಿರುವ ಗುಮಾನಿ ಇದೆ ಎಂದು ಆಡಳಿತ ಪಕ್ಷದ ಸದಸ್ಯರೋರ್ವರು ಆರೋಪ ಮಾಡಿರುತ್ತಾರೆ, ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಬಗ್ಗೆ, ಆಡಳಿತ ಪಕ್ಷದವರು ತಾರತಮ್ಮ ಧೋರಣೆ ಅನುಸರಿಸುತ್ತಿದ್ದು, ಸಾರ್ವಜನಿಕರು ನಗರಸಭೆಯ ಆಡಳಿತದಿಂದ…
Author: UllalaVani
UN NEWS NETWORKS ಉಳ್ಳಾಲ: ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘವು ೨೦೨೧-೨೦೨೨ ನೇ ಸಾಲಿನಲ್ಲಿ ೬೫೦.೫೪ ಕೋಟಿ ರೂ.ಗಳ ವ್ಯವಹಾರವನ್ನು ನಡೆಸಿ ೧.೫೫ ಕೋಟಿ ನಿವ್ವಳ ಲಾಭಾಂಶ ಗಳಿಸಿ ಪ್ರಗತಿ ಪ್ರಥದಲ್ಲಿ ಸಾಗುತ್ತಿದ್ದು ಕಳೆದ ಹಲವು ವರ್ಷಗಳಿಂದ ಷೇರುದಾರರಿಗೆ ಶೇ. ೨೫ ಡಿವಿಡೆಂಡ್ ನೀಡುತ್ತಿರುವ ಅಗ್ರಗಣ್ಯ ಸಹಕಾರ ಸಂಘಗಳಲ್ಲಿ ಒಂದಾಗಿದೆ ಎಂದು ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರು ಗುತ್ತು ತಿಳಿಸಿದರು. ಅವರು ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಪ್ರಧಾನ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವರದಿ ಸಾಲಿನ ಅಂತ್ಯಕ್ಕೆ ಸಂಘವು “ಎ” ತರಗತಿಯ ೮೨೭೭ ಸದಸ್ಯರನ್ನು ಹೊಂದಿದ್ದು ೨.೩೦ ಕೋಟಿ ರೂಗಳ ಪಾಲು ಬಂಡವಾಳವನ್ನು ಹೊಂದಿದೆ. ಆರ್ಥಿಕ ವರ್ಷದಲ್ಲಿ ರೂ. ೨೮೮.೬೪ ಕೋಟಿ ಠೇವಣಿ ಸಂಗ್ರಹ, ೨೭೨.೨೫ ಕೋಟಿ ಠೇವಣಿ ಪಾವತಿಸಿಸುವ ಮೂಲಕ ವರ್ಷಾಂತ್ಯದಲ್ಲಿ ರೂ ೧೩೭.೦೭ ಕೋಟಿ ಠೇವಣಿ ಹೊಂದಿದ್ದು, ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಠೇವಣಿ ಸಂಗ್ರಹದಲ್ಲಿ ೧೬.೪೦ ಕೋಟಿ ರೂ. ಗಳ…
UN NEWS NETWORKSಉಳ್ಳಾಲ: ರಾಷ್ಟ್ರೀಯ ಹೆದ್ದಾರಿ ೬೬ರ ಕೊಲ್ಯ ಬಳಿ ಟೆಂಪೊ ರಿಕ್ಷಾ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಗಾಯಗೊಂಡಿದ್ದು, ಇಬ್ಬರು ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನೀರುಮಾರ್ಗ ನಿವಾಸಿಗಳಾದ ಲೆನನ್ ಮತ್ತು ಶೋಧನ್ ಗಾಯಗೊಂಡವರು . ಬುಧವಾರ ತಲಪಾಡಿ ಕಡೆಯಿಂದ ಕೊಲ್ಯ ಕಡೆಗೆ ಸಂಚರಿಸುತ್ತಿದ್ದ ಟೆಂಪೋ ರಿಕ್ಷಾ ರಾಷ್ಟ್ರೀಯ ಹೆದ್ದಾರಿ ಕೊಲ್ಯ ಜಂಕ್ಷನ್‌ನಲ್ಲಿ ಕಲ್ಯ ಕನೀರು ತೋಟ ಕಡೆ ತಿರುವು ತೆಗೆದುಕೊಳ್ಳುತ್ತಿದ್ದಂತೆ ತೊಕ್ಕೊಟ್ಟು ಕಡೆಯಿಂದ ತಲಪಾಡಿ ಕಡೆ ಸಂಚರಿಸುತ್ತಿದ್ದ ಬೈಕ್ ರಿಕ್ಷಾ ಟೆಂಪೊಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು ಸವಾರರಿಬ್ಬರು ಹೆಲ್ಮೆಟ್ ಧರಿಸಿದ್ದರಿಂದ ದೊಡ್ಡ ಅಪಘಾತವೊಂದು ತಪ್ಪಿದಂತಾಗಿದೆ. ಲೆನೆನ್ ಫರ್ನೀಚರ್ ಅಂಗಡಿಯಲ್ಲಿ ಕ್ಯಾಶಿಯರ್ ಆಗಿದ್ದು, ಶೋಧನ್ ಐಟಿಐ ಪೂರೈಸಿದ್ದು ಲೆನೆನ್‌ರೊಂದಿಗೆ ಕಾಸರಗೋಡು ಕಡೆ ಸಂಚರಿಸುತ್ತಿದ್ದಾಗ ಈ ಘಟನೆ ನಡೆದಿದೆ. ದಕ್ಷಿಣ ಸಂಚಾರಿ ವಿಭಾಗದ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
BlogsCasino games Try Best FunEnjoyable “no Registration Necessary” Video game Created by finest-tier business, the Blackjack video game can make targeting 21 more humorous for you. The newest online game make use of the most advanced https://mrbetwithdrawal.com/how-to-play-mr-bet-casino/ technology to work effectively to the one smart phone. To play in the you to definitely bet for a long time, use the automated spins form not to start spins each and every time but simply watch the overall game.
UN networks ಉಳ್ಳಾಲ: ಮಂಜನಾಡಿ ಗ್ರಾ.ಪಂ. ಅಧ್ಯಕ್ಷೆ ವಿರುದ್ಧ ಸದಸ್ಯರು ಗುರುವಾರ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದ್ದು, ಮೂರನೇ ಎರಡು ಮತಗಳಿಂದ ಪಂಚಾಯತ್ ಅಧ್ಯಕ್ಷೆ ನಸ್ರೀನ ಇಕ್ಬಾಲ್ ತನ್ನ ಸ್ಥಾನ ಕಳೆದುಕೊಂಡಿದ್ದಾರೆ. ಮಂಜನಾಡಿ ಗ್ರಾಮ ಪಂಚಾಯತ್ ನಲ್ಲಿ ಒಟ್ಟು ೨೬ ಸದಸ್ಯರಿದ್ದು, ಈ ಪೈಕಿ ೧೮ ಸದಸ್ಯರು ಅವಿಶ್ವಾಸ ಗೊತ್ತುವಳಿ ಪರ ಮತ ಚಲಾಯಿಸಿದ್ದಾರೆ. ಕೇವಲ ಎಂಟು ಸದಸ್ಯರು ಮಾತ್ರ ಅವಿಶ್ವಾಸ ಗೊತ್ತುವಳಿ ನಿರ್ಣಯದ ವಿರುದ್ಧ ಮತ ಹಾಕಿದರು. ಈ ಹಿನ್ನೆಲೆಯಲ್ಲಿ ಅವಿಶ್ವಾಸ ಗೊತ್ತುವಳಿ ಯನ್ನು ಮೂರನೇ ಎರಡು ಬಹುಮತದೊಂದಿಗೆ ಅಂಗೀಕರಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಮಧನ್ ಮೋಹನ್ ಘೋಷಿಸಿದರು.ಇದರಿಂದ ಮಂಜನಾಡಿ ಗ್ರಾಮ ಪಂಚಾಯತ್ ನಲ್ಲಿ ೧೯ ತಿಂಗಳು ಆಡಳಿತ ನಡೆಸಿದ ನಸ್ರೀನ ಅಧ್ಯಕ್ಷ ಹುದ್ದೆ ಕಳೆದುಕೊಂಡ ಹಿನ್ನೆಲೆಯಲ್ಲಿ ಆಡಳಿತಕ್ಕೆ ಪೂರ್ಣ ವಿರಾಮ ಬಿದ್ದಿದೆ.ನಸ್ರೀನ ೨೦೨೧ರ ಫೆಬ್ರವರಿ ತಿಂಗಳಲ್ಲಿ ಮಂಜನಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಇತ್ತೀಚೆಗೆ ಸದಸ್ಯರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಅಧ್ಯಕ್ಷರು ಸ್ಪಂದಿಸುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು.…
UN networks ಮಂಗಳೂರು: ಎನ್ ಐ ಎ ತಂಡ ದ.ಕ ಜಿಲ್ಲೆಯಪಿಎಫ್ ಐ ಹಾಗೂ ಎಸ್ ಡಿಪಿಐ ಕಚೇರಿ ಸೇರಿದಂತೆ ಆರು ಮಂದಿ ಪಿಎಫ್ ಐ ಮುಖಂಡರ ಮನೆಗಳಿಗೆ ದಾಳಿ ನಡೆಸಿದೆ.1) ಪಿಎಫ್ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಯ್ಯೂಬ್ ಅಗ್ನಾಡಿಯ ಉಪ್ಪಿನಂಗಡಿ ಮನೆಗೆ ದಾಳಿ, 2) ಪಿಎಫ್ ಐ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್ ನ ಜೋಕಟ್ಟೆ ನಿವಾಸಕ್ಕೆ ದಾಳಿ, 3) ಪಿಎಫ್ ಐ ರಾಜ್ಯ ನಾಯಕ ತಫ್ಸೀರ್ ನ ಎಸ್ಬಡಿ ಕಲ್ಲಡ್ಕ ದ ಬೋಳಂತೂರು ನಿವಾಸಕ್ಕೆ ದಾಳಿ, 4) ಪಿಎಫ್ ಐ ದ.ಕ ಗ್ರಾಮಾಂತರ ಜಿಲ್ಲಾಧ್ಯಕ್ಷ ನವಾಜ್ ಕಾವೂರು ವಿನ ಕಾವೂರು ಬಳಿಯ ನಿವಾಸ, 5) ಪಿಎಫ್ ಐ ನಾಯಕ ಮೊಯಿದ್ದೀನ್ ಹಳೆಯಂಗಡಿಯ ಸುರತ್ಕಲ್ ನಿವಾಸ, 6) ಪಿಎಫ್ ಐ ನಗರಾಧ್ಯಕ್ಷ ಅಶ್ರಫ್ ನ ಬಜಪೆ ನಿವಾಸದ ಮೇಲೆ ದಾಳಿ, ಈ ಆರು ಜನರ ಮನೆಗಳ ಮೇಲೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಸೂಚನೆ ಹಿನ್ನೆಲೆಯಲ್ಲಿ ದಾಳಿನಡೆದಿದೆ. ಮಂಗಳೂರು ಕಮಿಷನರೇಟ್ ಮತ್ತು…
UN networks ಮಂಗಳೂರು: ಸಾಮ್ಯತೆ ಇರುವ ದೇಶದ ಹಲವು ಕೇಸ್ ಗಳನ್ನು ಒಂದೇ ಕಡೆ ಸೇರಿಸಿ ಎಫ್‌ಐಆರ್ ದಾಖಲಿಸಿ ಅದರ ಆಧಾರದಲ್ಲಿ ಇಂದು ದೇಶಾದ್ಯಂತ ಎನ್ ಐ ಎ ಆಪರೇಷನ್ ಅಂಬ್ರೆಲಾ ಹೆಸರಿನಲ್ಲಿ ಅಖಾಡಕ್ಕೆ ಇಳಿದಿದೆ. ಪ್ರವೀಣ್ ನೆಟ್ಟಾರು ಕೇಸ್ ಸೇರಿದಂತೆ, ವಿವಿಧ ಹತ್ಯೆ, ಗಲಭೆ, ಭಯೋತ್ಪಾದಕ ಕೃತ್ಯಗಳ ಪ್ರಕರಣಗಳನ್ನು ಸೇರಿಸಿ ಎಫ್.ಐ.ಆರ್ ದಾಖಲಿಸಿಕೊಂಡಿದೆ.ಎನ್ ಐಎ ಉನ್ನತ ಮೂಲಗಳು ನೀಡಿರುವ ಮಾಹಿತಿಯಂತೆಭಾರತ ವಿವಿಧ ಕಡೆ ದಾಳಿ ನಡೆದಿದೆ.ಅಂಬ್ರೆಲಾ ಕೇಸ್ ದಾಖಲು ಮಾಡಿಕೊಂಡು ಎನ್.ಐ.ಎ ಕಾರ್ಯಾಚರಣೆಗೆ ಇಳಿದಿದೆ.
UN networks ಮಂಗಳೂರು: ರಾಜ್ಯ ಪೊಲೀಸ್ ತಂಡದಿಂದ ಮೂವರು ಪಿ.ಎಫ್.ಐ ನಾಯಕರ ವಶಕ್ಕೆ ಪಡೆದ ಪ್ರಕರಣ ಪೊಲೀಸ್ ಬಿಗಿ ಭದ್ರತೆಯಲ್ಲಿ ನಾಯಕರನ್ನು ಬೆಂಗಳೂರಿಗೆ ಉಳ್ಳಾಲ ಪೊಲೀಸ್ ಇನ್ಸ್ಪೆಕ್ಟರ್ ಸಂದೀಪ್ ನೇತೃತ್ವದಲ್ಲಿ ಕರದೊಯ್ಯಲಾಗುತ್ತಿದೆ.ಪಿಎಫ್ಐ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್, ಮೋಹಿದೀನ್ ಹಳೆಯಂಗಡಿ, ನವಾಜ್ ಕಾವೂರು ಎಂಬವರನ್ನು ಬೆಂಗಳೂರಿಗೆ ಕರೆದೊಯ್ಯಲಾಗುತ್ತಿದೆ.ಹೆಚ್ಚಿನ ವಿಚಾರಣೆಗೆ ಎಲ್ಲರನ್ನು ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.
UN networks ಮಂಗಳೂರು: ಜಿಲ್ಲೆಯಲ್ಲಿ ಎನ್.ಐ.ಎ ಮತ್ತು ರಾಜ್ಯ ಪೊಲೀಸ್ ದಾಳಿ ನಡೆಸಿ ಮತ್ತೆ ಇಬ್ಬರು ಪಿಎಫ್ ಐ ಮುಖಂಡರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಪುತ್ತೂರು ಮತ್ತು ಬಂಟ್ವಾಳದ ಇಬ್ಬರು ಪಿಎಫ್ ಐ ಮುಖಂಡರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.ಪಿಎಫ್ ಐ ರಾಜ್ಯ ನಾಯಕರಾದ ತಫ್ಸೀರ್ ಮತ್ತು ಅಬ್ದುಲ್ ಖಾದರ್ ಸಾಮೆತ್ತಡ್ಕ ವಶಕ್ಕೆ ಪಡೆದುಕೊಂಡವರು. ಕಲ್ಲಡ್ಕ ದ ಬೋಳಂತೂರು ನಿವಾಸಕ್ಕೆ ದಾಳಿ ನಡೆಸಿ ತಫ್ಸಿರ್ ನನ್ನು ವಶಕ್ಕೆ ಪಡೆದುಕೊಂಡರೆ, ಪುತ್ತೂರು ತಾಲೂಕಿನ ಸಾಮೆತ್ತಡ್ಕ ನಿವಾಸಕ್ಕೆ ದಾಳಿ ನಡೆಸಿ ಅಬ್ದುಲ್ ಖಾದರ್ ಸಾಮೆತ್ತಡ್ಕ ವಶಕ್ಕೆ ಪಡೆಯಲಾಗಿದೆ.ದ.ಕ ಜಿಲ್ಲಾ ಪೊಲೀಸರ ಸಹಕಾರದೊಂದಿಗೆ ಬೆಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಇಬ್ಬರನ್ನೂ ಪೊಲೀಸರು ಬೆಂಗಳೂರಿಗೆ ಕರೆದೊಯ್ಯುತ್ತಿದ್ದಾರೆ. ಈಗಾಗಲೇ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪಿಎಫ್ ಐ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್, ಮೊಯಿದ್ದೀನ್ ಹಳೆಯಂಗಡಿ ಮತ್ತು ಪಿಎಫ್ ಐ ಗ್ರಾಮಾಂತರ ಜಿಲ್ಲಾಧ್ಯಕ್ಷ ನವಾಜ್ ಕಾವೂರು ಎಂಬಾತನನ್ನು ವಶಕ್ಕೆ ಪಡೆದುಕೊಳ್ಳಾಗಿದೆ.
UN networks ಉಳ್ಳಾಲ: ಮಾಡೂರು ಸೈಟ್ ನಲ್ಲಿ ತಲವಾರು ದೊಣ್ಣೆ ತೋರಿಸಿ ಜೀವಬೆದರಿಕೆಯೊಡ್ಡಿ ಜಾನುವಾರು ಕಳವುಗೈದ ಮೂವರು ಆರೋಪಿಗಳನ್ನು ಎಸಿಪಿ ದಿನಕರ್ ಶೆಟ್ಟಿ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ಸಂದೀಪ್ ಜಿ.ಎಸ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಂಟ್ವಾಳ ಕಸಬಾ ಗ್ರಾಮದ ಟಿಪ್ಪುನಗರ ದ ಜಾಬೀರ್ (24), ಫರಂಗಿಪೇಟೆ ಅಮ್ಮೆಮ್ಮಾರ್ ಮಸೀದಿ ಬಳಿಯ ಹೈದರಾಲಿ(24), ಬಂಟ್ವಾಳ ಸಿದ್ದಕಟ್ಟೆಯ ಸಂಗಬೆಟ್ಟುವಿನ ಮುಹಮ್ಮದ್ ಆರೀಫ್(30) ಬಂಧಿತರು. ಮಾಡೂರು ಸೈಟ್ ನಿವಾಸಿ ಸತೀಶ್ ಎಂಬವರಿಗೆ ಸೇರಿದ ರೂ. 30,000 ಬೆಲೆಬಾಳುವ 4 ವರ್ಷ ಪ್ರಾಯದ ಹೋರಿ ಎತ್ತನ್ನು ಆರೋಪಿಗಳು ಕಳವು ನಡೆಸಿದ್ದರು.ಆ.22. ರಂದು ಮಾಡೂರು ವನದುರ್ಗ ಅಯ್ಯಪ್ಪ ಮಂದಿರದ ಅಶ್ವತ್ಥಕಟ್ಟೆಯ ಬಳಿ ಕಟ್ಟಿ ಹಾಕಲಾಗಿದ್ದ ಹೋರಿಯನ್ನು ನಸುಕಿನ 4.25 ಕ್ಕೆ ಇಬ್ಬರು ಆರೋಪಿಗಳು ಬಲಾತ್ಕಾರವಾಗಿ ಹಿಂಸಾತ್ಮಕವಾಗಿ ಎಳೆದೊಯ್ಯುವಾಗ ಜೋರಾಗಿ ಕೂಗುವುದನ್ನು ಗಮನಿಸಿ ಮಾಲೀಕ ಸತೀಶ್ ಅವರು ಓಡಿಬಂದಿದ್ದರು. ಈ ವೇಳೆ ತಲವಾರು ಮತ್ತು ದೊಣ್ಣೆ ತೋರಿಸಿದ ದುಷ್ಕರ್ಮಿಗಳು , ಅಡ್ಡಿಪಡಿಸಿದರೆ ಕೊಲ್ಲುವುದಾಗಿ…

