UN NEWS NETWORKS
ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ ೬೬ರ ಕೊಲ್ಯ ಬಳಿ ಟೆಂಪೊ ರಿಕ್ಷಾ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಗಾಯಗೊಂಡಿದ್ದು, ಇಬ್ಬರು ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನೀರುಮಾರ್ಗ ನಿವಾಸಿಗಳಾದ ಲೆನನ್ ಮತ್ತು ಶೋಧನ್ ಗಾಯಗೊಂಡವರು . ಬುಧವಾರ ತಲಪಾಡಿ ಕಡೆಯಿಂದ ಕೊಲ್ಯ ಕಡೆಗೆ ಸಂಚರಿಸುತ್ತಿದ್ದ ಟೆಂಪೋ ರಿಕ್ಷಾ ರಾಷ್ಟ್ರೀಯ ಹೆದ್ದಾರಿ ಕೊಲ್ಯ ಜಂಕ್ಷನ್ನಲ್ಲಿ ಕಲ್ಯ ಕನೀರು ತೋಟ ಕಡೆ ತಿರುವು ತೆಗೆದುಕೊಳ್ಳುತ್ತಿದ್ದಂತೆ ತೊಕ್ಕೊಟ್ಟು ಕಡೆಯಿಂದ ತಲಪಾಡಿ ಕಡೆ ಸಂಚರಿಸುತ್ತಿದ್ದ ಬೈಕ್ ರಿಕ್ಷಾ ಟೆಂಪೊಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು ಸವಾರರಿಬ್ಬರು ಹೆಲ್ಮೆಟ್ ಧರಿಸಿದ್ದರಿಂದ ದೊಡ್ಡ ಅಪಘಾತವೊಂದು ತಪ್ಪಿದಂತಾಗಿದೆ. ಲೆನೆನ್ ಫರ್ನೀಚರ್ ಅಂಗಡಿಯಲ್ಲಿ ಕ್ಯಾಶಿಯರ್ ಆಗಿದ್ದು, ಶೋಧನ್ ಐಟಿಐ ಪೂರೈಸಿದ್ದು ಲೆನೆನ್ರೊಂದಿಗೆ ಕಾಸರಗೋಡು ಕಡೆ ಸಂಚರಿಸುತ್ತಿದ್ದಾಗ ಈ ಘಟನೆ ನಡೆದಿದೆ. ದಕ್ಷಿಣ ಸಂಚಾರಿ ವಿಭಾಗದ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.


