ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು : ತೊಕ್ಕೊಟ್ಟು ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲೆ ವತಿಯಿಂದ ಶ್ರೀ ಕೃಷ್ಣ ಜನಮಾಷ್ಠಮಿ ಪ್ರಯುಕ್ತ ನಡೆಯುವ ಮೊಸರುಕುಡಿಕೆ ಉತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಆಕರ್ಷಕ ಟ್ಯಾಬ್ಲೋಗಳು , ಹುಲಿ ವೇಷ ಧಾರಿಗಳು ಗಮನ ಸೆಳೆಯಿತು. ಎಬಿಸಿ ಕ್ಲಬ್ ( ಅಗ್ನಿ ಭಾಯ್ಸ್ ಸರ್ಕಲ್), ತೊಕ್ಕೊಟ್ಟು ಇವರಲ್ಲಿ ಸದಸ್ಯರೋರ್ವರ ಕಾರೊಂದಕ್ಕೆ ಹುಲಿಯ ಬಣ್ಣ ಅಂಟಿಸಿರುವುದು ಆಕರ್ಷಣೆಯ ಬಿಂದು ಆಗಿತ್ತು.
ತುಂತುರು ಮಳೆಯ ನಡುವೆ ಆರಂಭಗೊಂಡ ಉತ್ಸವದಲ್ಲಿ ನಿರೀಕ್ಷೆಯಷ್ಟು ಜನ ಭಾಗವಹಿಸಿರಲಿಲ್ಲ. ಆದರೂ ಕಳೆದ ವರ್ಷಗಿಂತ ಅಧಿಕ ಜನ ಭಾಗವಹಿಸಿ ಉತ್ಸವವನ್ನು ಯಶಸ್ವಿಯನ್ನಾಗಿಸಿದ್ದಾರೆ ಅನ್ನುತ್ತಾರೆ ಸಂಘಟಕರು. ಟ್ಯಾಬ್ಲೋಗಳಲ್ಲಿ ಒಂದಕ್ಕಿಂತ ಒಂದು ವಿಭಿನ್ನವಾಗಿತ್ತು.


















