ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಪಾವೂರು: ಪರಿಸರ ಸ್ವಚ್ಛತೆ, ಶಿಕ್ಷಣ ಜತೆಗೆ ಸಮಾಜಮುಖಿ ಕೆಲಸಗಳಲ್ಲಿ ಹಾಗೂ ವ್ಯಕ್ತಿತ್ವಗಳನ್ನು ರೂಪಿಸುವ ಮೂಲಕ ಪಾವೂರು ಗ್ರಾಮ ಇತರೆ ಗ್ರಾಮಗಳಿಗೆ ಮಾದರಿಯಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಅವರು ಪಾವೂರು ಗ್ರಾಮ ಪಂಚಾಯತ್ ನೂತನ ಆಡಳಿತ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಅಂಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಿಂದ ವರ್ಷ ತುಂಬಿದ ಹರ್ಷ, ಕೋಟಿ ವೃಕ್ಷ (ಮಗುವಿಗೊಂದು ಗಿಡ) ಹಾಗೂ ಸಾಧಕರಿಗೆ ಅಭಿನಂದನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪಾವೂರು ಗ್ರಾಮದಲ್ಲಿ ಸಮಾಜಮುಖಿ ವ್ಯಕ್ತಿತ್ವಗಳನ್ನು ಒಟ್ಟುಗೂಡಿಸುವ ಬೆಳವಣಿಗೆ ಶ್ಲಾಘನೀಯ. ಅಭಿವೃದ್ಧಿಗೆ ಪೂರಕವಾದ ವಾತಾವರಣ ಇಲ್ಲಿ ನಿರ್ಮಾಣವಾಗಿದೆ. ರೇಷನ್ನಿನಲ್ಲಿ ರಾಜ್ಯದಲ್ಲಿ 17 ಲಕ್ಷ ಬಾಕಿ ಉಳಿದಿದ್ದರೆ, ಜಿಲ್ಲೆಯಲ್ಲಿ 11,000 ಬಾಕಿ ಇದೆ. ಇದನ್ನು ಸರಿಪಡಿಸುವ ಸಲುವಾಗಿ ಮುಂದಿನ ದಿನಗಳಲ್ಲಿ ಪಂಚಾಯತ್ ಗಳಿಗೆ ರೇಷನ್ ಮಾಡುವ ಅಧಿಕಾರ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ಈ ಸಂದರ್ಭ ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ನೀರುಮಾರ್ಗ ಜಿಲ್ಲಾ ಪಂಚಾಯಿತಿ ಸದಸ್ಯೆ ಸೀಮಾ ಮೆಲ್ವಿನ್, ಪಾವೂರು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಫಿರೋಜ್ , ಉಪಾಧ್ಯಕ್ಷೆ ಲೀಲಾವತಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ಯಾಮಲ ಸಿ.ಕೆ, ಕೊಣಾಜೆ ಕ್ಲಸ್ಟರಿನ ಸಿಆರ್ ಪಿ ಸುಗುಣ, ಸದಸ್ಯರುಗಳಾದ ಚೆನ್ನಮ್ಮ, ವಾಮನ ಸಫಲಿಗ, ಮಹಮ್ಮದ್, ಅಬ್ದುಲ್ ಮಜೀದ್, ಪ್ರಭಾಕರ್, ವಿವೇಕ್, ಲೀಲಾವತಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಇನೋಳಿ ಶ್ರೀ ಸೋವiನಾಥೇಶ್ವರ ದೇವಸ್ಥಾನದ ಕಾರ್ಯಾಧ್ಯಕ್ಷ ಪ್ರೊ.ಐ.ವಿ.ರಾವ್, ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು, ನಿವೃತ್ತ ಯೋಧ ಪಾಶ್ವನಾಥ ಶೆಟ್ಟಿ ಪಾವೂರುಗುತ್ತು, ನಿವೃತ್ತ ಗ್ರಾಮಸಹಾಯಕ ಪಾವುಲ್ ಡಿಸೋಜ, ನಿವೃತ್ತ ಗ್ರಾ.ಪಂ ನೌಕರರಾದ ಮಹಮ್ಮದ್ ಪಾವೂರು, ಕೆ.ಪ್ರವೀಣ್ ಇವರನ್ನು ಸನ್ಮಾನಿಸಲಾಯಿತು.


