Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಗ್ರಾಮ

ಮಣ್ಣಿನಡಿ ಉರುಳಿದ ಮದ್ಯ ಗ್ರಾಹಕರ ದ್ವಿಚಕ್ರ ವಾಹನಗಳು

UllalaVaniBy UllalaVaniJune 25, 2016Updated:June 25, 2016No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಕುಡಿತ ಜೀವಕ್ಕೇ ಹಾಳು, ಕುಡಿತ ಹೆಚ್ಚಾದಲ್ಲಿ ಮಣ್ಣು ಪಾಲಾಗುವುದು ಅಂತೂ ಗ್ಯಾರಂಟಿ . ತೊಕ್ಕೊಟ್ಟು ಮಾಯಾ ಬಾರಿನ ಎದುರುಗಡೆ ಶುಕ್ರವಾರ ತಡರಾತ್ರಿ ನಡೆದ ಘಟನೆ ಇಂತಹದ್ದೊಂದು ಮಾತನ್ನು ನಿಜವಾಗಿಸಿದೆ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿ ಮಣ್ಣಿನಲ್ಲಿ ಮುಳುಗಿದ್ದು ಮದ್ಯವ್ಯಸನಿಗಳಲ್ಲ, ಬದಲಾಗಿ ಅದನ್ನು ಸೇವಿಸಲು ಬಂದಿದ್ದ ಮೂರು ಗ್ರಾಹಕರ ದ್ವಿಚಕ್ರ ವಾಹನಗಳು.

tkt 1

tkt 2

tkt 3

tkt 4

tkt 5

tkt 6

tkt 8

tkt 10

tkt 11

tkt 12

tkt 13

tkt 14\ tkt7

tkt8ಬಾಂಬ್ ಸ್ಫೋಟದ ಸದ್ದಿನಂತೆ ಇಡೀ ಬಾರಿನೊಳಗಿದ್ದ ಗ್ರಾಹಕರು, ಮಾಲೀಕರು, ಸಿಬ್ಬಂದಿ ಹಾಗೂ ಸ್ಥಳೀಯರನ್ನು ಕ್ಷಣಾರ್ಧದಲ್ಲಿ ದಂಗಾಗಿಸಿತ್ತು. ಇನ್ನೇನು ಹೊರಬಂದು ನೋಡುವಷ್ಟರಲ್ಲಿ ನೋಡನೋಡುತ್ತಿದ್ದಂತೆ ಬಾರಿನ ಹೊರ ಆವರಣದಲ್ಲಿ ನೂತನವಾಗಿ ಅಳವಡಿಸಿದ್ದ ಇಂಟರ್‍ಲಾಕ್‍ಗಳು ಭೂಮಿಯೊಳಗೆ ಮರೆಯಾಗುತ್ತಾ ಹೋದಂತೆ ಅಲ್ಲಿದ್ದ ದ್ವಿಚಕ್ರ ವಾಹನಗಳು ಮಣ್ಣಿನೊಳಗೆ ಹೂತು ಹೋಗುತ್ತಲೇ ಇತ್ತು. ಏನೋ ಕುಡಿತ ಜಾಸ್ತಿಯಾದರೆ ಹೀಗೆಲ್ಲಾ ಆಗ್ತದೆ. ಅನ್ನುತ್ತಾ ಬಾರಿನಲ್ಲಿದ್ದ ಗ್ರಾಹಕರು ಕಣ್ಣಿನ ರೆಪ್ಪೆಗಳನ್ನು ಮತ್ತೆ ಮತ್ತೆ ಸವರಿ ನೋಡಿದರೆ ಘಟನೆ ನಡೆಯುತ್ತಿರುವುದು ಅಕ್ಷರಶ: ನಿಜವಾಯಿತು. ಅಷ್ಟರಲ್ಲಿ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿದ್ದ ಹೊಸತಾಗಿ ಖರೀದಿಸಿದ ಎಂಟೈಸರ್ ಬೈಕ್, ಡಿಯೋ ಮತ್ತು ಆಕ್ಸೆಸ್ ಸ್ಕೂಟರ್ ಗಳು ಮಣ್ಣಿನಡಿ ಹೂತುಹೋಗಿತ್ತು. ಪಾರ್ಕಿಂಗ್ ಸ್ಥಳದಲ್ಲಿ ಬೃಹತ್ ಗಾತ್ರದ ಹೊಂಡವೇ ಸೃಷ್ಟಿಯಾಗಿತ್ತು.

ನಡೆದಿದ್ದೇನು : ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ನಿಮಿತ್ತ ಮಾಯಾ ಬಾರ್ ಇರುವ ಕಟ್ಟಡದ ಎದುರಿನ ಭಾಗವನ್ನು ಕಡಿಯಲಾಗಿತ್ತು. ಇದೇ ವೇಳೆ ಆ ಭಾಗದಲ್ಲಿ ಇದ್ದಂತಹ ಬಾವಿಗೆ ಕಾಂಕ್ರೀಟ್ ಹಾಕುವ ಮೂಲಕ ಮುಚ್ಚಿ, ಅದರ ಮೇಲೆ ಮಣ್ಣು ಮುಚ್ಚಲಾಗಿತ್ತು. ಆದರೆ ನಿರಂತರವಾಗಿ ಹರಿದ ಮಳೆ ಹಾಗೂ ಅದರ ಅಡಿಭಾಗದಲ್ಲೇ ರಾ.ಹೆ.ಯ ಚರಂಡಿ ಹಾದುಹೋಗುವುದರಿಂದ ನೀರಿನ ಭಾರವನ್ನು ಹೊರಲಾರದೆ ಕಾಂಕ್ರೀಟ್ ಸ್ಲಾಬ್ ತುಂಡಾಗಿದೆ. ಇದರಿಂದ ಕುಸಿತ ಉಂಟಾಗಿ ಮೇಲಿದ್ದ ಇಂಟರ್ ಲಾಕ್ ಸಹಿತ ವಾಹನಗಳು ಕೆಳಗಿದ್ದ ಬಾವಿಯೊಳಗೆ ಸೇರಿದೆ.

ಒಂಜಿ ಬಿಯರ್ ಲಗಾಡಿ ಕೊರ್‍ಂಡ್: `ಛೇ ಲಾಸ್ಟ್ ಒಂಜಿ ಬಿಯರ್ ಒಯಿಪುಗಾಂದ್ ಉಂತುದಿನಿ. ಆರ್ಡರ್ ಮಲ್ತ್‍ದ್ ಅರ್ಧ ಪರೋಡುಂದಾನಗನೇ ಎಂಕ್ಲೆನ ಬೈಕ್ ಮಾಯ್ಕಾ ಆತ್‍ಂಡ್’ ಇದು ಮೂರು ಬೈಕ್‍ಗಳು ಮಣ್ಣಿನೊಳಗೆ ಹೋಗಿ ಸಾವಿರಾರು ರೂ. ನಷ್ಟ ಉಂಟಾದ ದ್ವಿಚಕ್ರ ವಾಹನಗಳ ಮಾಲೀಕರಾದ ಅನಿಲ್, ಮ್ಯಾಕಲೀನ್, ಓಸ್ವಾಲ್ಡ್ ಎಂಬವರ ಹತಾಶೆಯ ಮಾತು. ಅದರಲ್ಲಿಯೂ ಒಂದು ಬೈಲ್ ಒಂದು ಲಕ್ಷ ಮೌಲ್ಯದ್ದಾಗಿದ್ದು, ಇತ್ತೀಚೆಗಷ್ಟೇ ಖರೀದಿಸಿದ್ದರು.

ವಾಹನಗಳಿಗಾಗಿ ಮೂರು ಗಂಟೆಗಳ ಕಾರ್ಯಾಚರಣೆ :

ಕುಸಿದುಬಿದ್ದು ನಿರ್ಮಾuವಾದ ಹೊಂಡದಲ್ಲಿ ಅರ್ಧದಷ್ಟು ನೀರು ಇತ್ತು. ಅದನ್ನು ಪಂಪ್‍ಸೆಟ್ ಬಾಡಿಗೆದಾರ ರಾತ್ರಿ ಹಗಲೆನ್ನದೆ ನಿಸ್ವಾರ್ಥ ಸೇವೆಯನ್ನೂ ನಿರ್ವಹಿಸುವ ಉಳ್ಳಾಲದ ಲತೀಫ್ ಎಂಬವರ ಮೂಲಕ ಪಂಪ್ ಸೆಟ್ ತರಿಸಿ ನಿರಂತರ ಒಂದು ಗಂಟೆ ಕಾಲ ನೀರನ್ನು ತೆಗೆಯಲಾಯಿತು. ಆ ಬಳಿಕ ಎರಡು ದ್ವಿಚಕ್ರ ವಾಹನಗಳು ಮಣ್ಣಿನೊಳಗಡೆ ಕಂಡು ಬಂತು.

ಆ ಬಳಿಕ ರಾ.ಹೆ.ಯ ಕ್ರೇನ್ ಮೂಲಕ ಅದರಲ್ಲಿ ಬಾರಿನ ಕಟ್ಟಡದ ಕಾಮಗಾರಿ ಗುತ್ತಿಗೆ ನಿರ್ವಹಿಸಿದ್ದ ಮನೋಜ್ ಎಂಬವರೇ ಕುಳಿತು ಕ್ರೇನಿನ ಸಹಾಯದಿಂದ ಕೆಳಗಿಳಿದು ವಾಹನಗಳನ್ನು ಹಗ್ಗದಲ್ಲಿ ಕಟ್ಟಿ ಮೇಲಕ್ಕೆತ್ತಿದರು. ಉಳ್ಳಾಲ ಠಾಣಾಧಿಕಾರಿ ಶಿವಪ್ರಕಾಶ್ ಅವರ ನಿರ್ದೇಶನದಂತೆ ಒಂದೊಂದೇ ವಾಹನಗಳನ್ನು ಮೇಲಕ್ಕೆತ್ತಲಾಯಿತು. ಸ್ಥಳದಲ್ಲಿ ಅಗ್ನಿ ಶಾಮಕ ಸಿಬ್ಬಂದಿ ಇದ್ದರೂ, ತರಬೇತಿ ಪಡೆದ ಸಿಬ್ಬಂದಿ ಹೊಂಡಕ್ಕೆ ಇಳಿಯಬೇಕಿತ್ತು. ಆದರೆ ಸ್ಥಳೀಯರನ್ನು ಇಳಿಸಿರುವುದು ತಪ್ಪು ಎಂಬ ಮಾತು ಸಾರ್ವಜನಿಕರಿಂದ ಕೇಳಿಬಂತು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ನೂರುಲ್ ಇಸ್ಲಾಂ ಮದ್ರಸ ಬಾಳೆಪುಣಿಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

August 15, 2026

ಹಿದಾಯತ್ ನಗರದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

August 15, 2026

ಮನಸ್ಸು ಶಾಂತವಾಗಿದ್ದಾಗ ಮಾತ್ರ ಏಕಾಗ್ರತೆ ಸಾಧ್ಯ: ಡಾ. ಸರ್ಫ್ರಾಜ್ ಜೆ. ಹಾಸಿಮ್

August 14, 2026
Leave A Reply

Advertise
ಸಂಪರ್ಕಿಸಿ

ಸ್ತನ್ಯಪಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಅಗತ್ಯವಿದೆ : ರೋಟರಿ ಡೌನ್‌ಟೌನ್ ಕ್ಲಬ್ ಅಧ್ಯಕ್ಷ ಉಮೇಶ್‌ ಗಟ್ಟಿ

August 8, 2026

ಹಣ ಇಲ್ಲದಿದ್ದರೆ ಯಾರೂ ಸಾಯಬಾರದು – ಸಂವಿಧಾನದ ಪರಿಚ್ಛೇದ 21ರ ಬೆಳಕಿನಲ್ಲಿ ತುರ್ತಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ಕೂಡಲೇ ಸ್ಪಂದಿಸುವ ಅಗತ್ಯ ಇದೆ.

August 1, 2026

ತಂದೆಯ ಸಾವು; ವಿಧವೆ ತಾಯಿಯ ಜವಾಬ್ದಾರಿ ಹೊತ್ತಿದ್ದ ಯುವತಿ ಈಗ ಐಸಿಯುನಲ್ಲಿ….! ಸುಮಾರು ₹20 ಲಕ್ಷ ಚಿಕಿತ್ಸಾ ವೆಚ್ಚ; ಆರೋಗ್ಯ ಸಚಿವ ಯು.ಟಿ.ಖಾದರ್‌ ಸಹಕಾರ ಅಗತ್ಯ

July 31, 2026

ಸಾವಿರ ವರ್ಷ ಕಳೆದರೂ ಕೊರೋನಾ ವೈರಸ್ ಇರುತ್ತೆ- ಭಯ ಬೇಡ ಎಚ್ಚರವಿರಲಿ: ಆರೋಗ್ಯ ಸಚಿವ ಯು.ಟಿ. ಖಾದರ್

July 22, 2026
All News

ನೂರುಲ್ ಇಸ್ಲಾಂ ಮದ್ರಸ ಬಾಳೆಪುಣಿಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

By UllalaVaniAugust 15, 20260

ಉಳ್ಳಾಲ: ಭವ್ಯ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವು ಬದ್ರಿಯಾ ಜುಮಾ ಮಸ್ಜಿದ್ ಹಾಗೂ ನೂರುಲ್ ಇಸ್ಲಾಂ ಹೈಯರ್ ಸೆಕೆಂಡರಿ…

ಹಿದಾಯತ್ ನಗರದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

August 15, 2026

ಮನಸ್ಸು ಶಾಂತವಾಗಿದ್ದಾಗ ಮಾತ್ರ ಏಕಾಗ್ರತೆ ಸಾಧ್ಯ: ಡಾ. ಸರ್ಫ್ರಾಜ್ ಜೆ. ಹಾಸಿಮ್

August 14, 2026

ಮೂಡಾ ವ್ಯಾಪ್ತಿಯ ಕೊಟ್ಟಾರ ಆಸ್ತಿ ಖರೀದಿ ಪ್ರಕ್ರಿಯೆ: ಮೂಲ ದಾಖಲೆಗಳ ಕುರಿತು ಪ್ರಶ್ನೆಗಳ ಸರಮಾಲೆ

August 14, 2026
1 2 3 … 2,060 Next
Automatic YouTube Gallery

ಉಳ್ಳಾಲ ತಾಲೂಕು 80ನೇ ಸ್ವಾತಂತ್ರ್ಯ ದಿನಾಚರಣೆ | ತೊಕ್ಕೊಟ್ಟು ಒವರ್‌ಬ್ರಿಡ್ಜ್ನಿಂದ ನೇರಪ್ರಸಾರ

ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಸಹಭಾಗಿತ್ವದಲ್ಲಿ, ತಾಲೂಕು ತಹಶಿಲ್ದಾರ್ ನೇತೃತ್ವದಲ್ಲಿ ಉಳ್ಳಾಲ ತಾಲೂಕು ಆಡಳಿತದಿಂದ
80ನೇ ಸ್ವಾತಂತ್ರ‍್ಯೋತ್ಸವ ಆಚರಣೆ

ಸ್ಥಳ: ತೊಕ್ಕೊಟ್ಟು ಒವರ್‌ಬ್ರಿಡ್ಜ್ ಫ್ಲಾö್ಯ ಗ್ ಪೋಲ್

ಉಳ್ಳಾಲ ಅಬ್ಬಕ್ಕ ವೃತ್ತದಿಂದ ತೊಕ್ಕೊಟ್ಟು ಒವರ್ ...
ಬ್ರಿಡ್ಜ್ ವರೆಗೆ ವಿದ್ಯಾರ್ಥಿಗಳ ಪಥಚಂಚಲನShow More
ಉಳ್ಳಾಲ ತಾಲೂಕು 80ನೇ ಸ್ವಾತಂತ್ರ್ಯ  ದಿನಾಚರಣೆ | ತೊಕ್ಕೊಟ್ಟು ಒವರ್‌ಬ್ರಿಡ್ಜ್ನಿಂದ ನೇರಪ್ರಸಾರ
Now Playing
ಉಳ್ಳಾಲ ತಾಲೂಕು 80ನೇ ಸ್ವಾತಂತ್ರ್ಯ ದಿನಾಚರಣೆ | ತೊಕ್ಕೊಟ್ಟು ಒವರ್‌ಬ್ರಿಡ್ಜ್ನಿಂದ ನೇರಪ್ರಸಾರ
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ...
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಸಹಭಾಗಿತ್ವದಲ್ಲಿ, ತಾಲೂಕು ತಹಶಿಲ್ದಾರ್ ನೇತೃತ್ವದಲ್ಲಿ ಉಳ್ಳಾಲ ತಾಲೂಕು ಆಡಳಿತದಿಂದ
80ನೇ ಸ್ವಾತಂತ್ರ‍್ಯೋತ್ಸವ ಆಚರಣೆ

ಸ್ಥಳ: ತೊಕ್ಕೊಟ್ಟು ಒವರ್‌ಬ್ರಿಡ್ಜ್ ಫ್ಲಾö್ಯ ಗ್ ಪೋಲ್

ಉಳ್ಳಾಲ ಅಬ್ಬಕ್ಕ ವೃತ್ತದಿಂದ ತೊಕ್ಕೊಟ್ಟು ಒವರ್ ...
ಬ್ರಿಡ್ಜ್ ವರೆಗೆ ವಿದ್ಯಾರ್ಥಿಗಳ ಪಥಚಂಚಲನShow More
ಕೊಣಾಜೆ ಮೈದಾನದಲ್ಲಿ ಗುರು-ಗಾಂಧಿ ಸಂವಾದ ಶತಮಾನೋತ್ಸವ -ನೇರ ಪ್ರಸಾರ
Now Playing
ಕೊಣಾಜೆ ಮೈದಾನದಲ್ಲಿ ಗುರು-ಗಾಂಧಿ ಸಂವಾದ ಶತಮಾನೋತ್ಸವ -ನೇರ ಪ್ರಸಾರ
ಕೊಣಾಜೆ ಮೈದಾನದಲ್ಲಿ ಗುರು-ಗಾಂಧಿ ಸಂವಾದ ಶತಮಾನೋತ್ಸವ -ನೇರ ಪ್ರಸಾರ
ಕೊಣಾಜೆ ಮೈದಾನದಲ್ಲಿ ಗುರು-ಗಾಂಧಿ ಸಂವಾದ ಶತಮಾನೋತ್ಸವ -ನೇರ ಪ್ರಸಾರ
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version