ಉಳ್ಳಾಲ: ಅಕ್ಷರವಂಚಿತ, ಅನ್ನವಂಚಿತ, ಆರೋಗ್ಯ ವಂಚಿತ ಮಹಿಳಾ ಸಮಾಜ ಇಂದು ನಿರ್ಮಾಣಗೊಂಡಿದ್ದು, ಈ ಬಗ್ಗೆ ಅಬ್ಬಕ್ಕ ಉತ್ಸವದ ವೇದಿಕೆಗಳಲ್ಲಿ ಚರ್ಚೆಗಳು ನಡೆದು ಅದರ ಕುರಿತ ವರದಿಯನ್ನು ಸರಕಾರದ ಮುಂದಿಡಬೇಕಿದೆ ಎಂದು ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ವಿ. ಮಂಜುಳಾ ಮಾನಸ ಹೇಳಿದ್ದಾರೆ.
ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕ ೃತಿ ಇಲಾಖೆ ಹಾಗೂ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯಲ್ಲಿ ನಡೆಯುತ್ತಿರುವ ರಾಣಿ ಅಬ್ಬಕ್ಕ ಉತ್ಸವ -2016ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶಕ್ಕಾಗಿ ಹೋರಾಡಿದ ದಿಟ್ಟ ಮಹಿಳೆಯರ ಹೆಸರಿನಲ್ಲಿ ಉತ್ಸವಗಳು ಮಾತ್ರ ಸೀಮಿತವಾಗಿದೆ. ಪ್ರಸ್ತುತ ಸಮಾಜದಲ್ಲಿ ಮಹಿಳೆಯರಿಗೆ ಗೌರವ ನೀಡುವಂತಹ ಕೆಲಸ ಸರಕಾರದಿಂದ ಆಗಬೇಕಿದೆ. ಇದರಿಂದ ವೀರ ಮಹಿಳೆಯರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಸಮಾಜದ ಮುಖ್ಯ ವಾಹಿನಿಗಳಲ್ಲಿ ಮಹಿಳೆಯರಿಗೆ ಸೂಕ್ತ ಅವಕಾಶಗಳು ಸಿಗುತ್ತಿಲ್ಲ. ಇದರಿಂದ ಹಿಂದಿನ ವೀರ ವನಿತೆಯರ ಇತಿಹಾಸ ಮರುಕಳಿಸುತ್ತಿಲ್ಲ. ಸಾಂಸ್ಕøತಿಕ ಹಿನ್ನೆಲೆಯ ದೇಶದಲ್ಲಿ ಗರ್ಭದಲ್ಲಿ ಹೆಣ್ಣು ಭ್ರೂಣವನ್ನು ಕೊಲ್ಲುವ ಸಂಸ್ಕಾರ ಬೆಳೆಯುತ್ತಿದ್ದರೆ, ಬೆಳೆದು ನಿಂತ ಮಹಿಳೆಯರ ಮೇಲೆ ವರದಕ್ಷಿಣೆ, ನೈತಿಕ ಪೊಲೀಸ್ ಗಿರಿ, ಔದ್ಯೋಗಿಕ ಕ್ಷೇತ್ರಗಳಲ್ಲಿನ ದೌರ್ಜನ್ಯಗಳು ಮುಂದುವರಿಯುತ್ತಿದೆ. ವೀರರಾಣಿ ಅಬ್ಬಕ್ಕಳ ಹೆಸರನ್ನು ಪಂಪ್ ವೆಲ್ ವೃತ್ತ ಹಾಗೂ ಬೆಂಗಳೂರಿನ ಕ್ವೀನ್ಸ್ ರಸ್ತೆಗೆ ಇಡುವ ಕಾಯಕಲ್ಪ ಆಗಬೇಕಿದೆ. ಇದರಿಂದ ವೀರಮಹಿಳೆಯರ ಸ್ಮರಣೆಯ ಜತೆಗೆ ಮಹಿಳೆಯರ ಮೇಲಿನ ಗೌರವ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಅಲ್ಲದೆ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಪಠ್ಯಪುಸ್ತಕಗಳಲ್ಲಿ ಅಬ್ಬಕ್ಕಳ ಪಾಠ ಇರಬೇಕಿದೆ. ಈ ಕುರಿತು ಬರಗೂರು ರಾಮಚಂದ್ರ ಅವರ ಸಮಿತಿಂiÀiಲ್ಲಿ ಮನವಿ ಮಾಡಲಾಗಿದ್ದು, ಅವರಿಂದ ಅಳವಡಿಸುವ ವಿಶ್ವಾಸವೂ ದೊರೆತಿದೆ.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುವಜನ ಕ್ರೀಡೆ ಮತ್ತು ಮೀನುಗಾರಿಕೆ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ ತಂದೆ ತಾಯಿ, ಸಂಬಂಧಿಕರು, ಗುರುಹಿರಿಯರನ್ನು ಮರೆಯುತ್ತಿರುವ ಕಾಲಘಟ್ಟದಲ್ಲಿ ದೇಶಕ್ಕಾಗಿ ಪ್ರಾಣ ಅರ್ಪಿಸಿದ ಅಬ್ಬಕ್ಕಳ ರಾಷ್ಟ ್ರಸೇವೆಯನ್ನು ಜನೆತೆ ಯಾವುದೇ ಕಾಲಘಟ್ಟದಲ್ಲಿ ಮರೆಯಬಾರದು. ಆಕೆಯ ತ್ಯಾಗ ಬಲಿದಾನದ ಬಗ್ಗೆ ಯುವ ಜನತೆಗೆ ತಿಳಿಸುವ ಕಾರ್ಯಕ್ರಮ ನಡೆಯುತ್ತಿರಬೇಕು ಎಂದು ನುಡಿದರು.
ರಾಜಧಾನಿ ಬೆಂಗಳೂರು ಪ್ರವೇಶಿಸುವ ಪ್ರಮುಖ ಸ್ಥಳದಲ್ಲಿ ರಾಣಿ ಅಬ್ಬಕ್ಕಳ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ವೀರಪ್ಪ ಮೊಯ್ಲಿ ಅವರು ರಾಜ್ಯದ ಜನತೆಗೆ ಅರಿಯುವ ಪ್ರಯತ್ನ ಮಾಡಲಾಗಿದೆ. ಮೂಡುಬಿದಿರೆಯ ರಾಜಕುಮಾರಿ ಅಬ್ಬಕ್ಕಳು ಮದುವೆಯಾದ ಬಳಿಕ ಉಳ್ಳಾಲದ ರಾಣಿ ಆಗಿ ಮುಂದುವರಿದಿದ್ದು ಆಕೆಗೂ ಮೂಡಬಿದಿರಿಗೆ ಶಾಶ್ವತ ಸಂಬಂಧವಿದೆ ಎಂಬುದನ್ನು ಜನತೆ ಮರೆಯಬಾರದು. ಕಳೆದ ಕೆಲವು ವರ್ಷಗಳಿಂದ ಅಬ್ಬಕ್ಕ ಉತ್ಸವ ಆಯೋಜಿಸುವ ಮೂಲಕ ಸಾಮರಸ್ಯದ ಬದುಕಿಗೆ ಪ್ರೇರಣೆಯಾಗುತ್ತಿರುವ ಉಳ್ಳಾಲ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಕಾರ್ಯ ಶ್ಲಾಘನೀಯ ಎಂದು ಅಭಿನಂದನೆ ಸಲ್ಲಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ವೀರರಾಣಿ ಅಬ್ಬಕ್ಕ ಉತ್ಸವ ಯಶಸ್ಸಿಗಾಗಿ ಶ್ರಮಿಸಿದ ಎಲ್ಲರನ್ನು ಅಭಿನಂದಿಸಿ ವೀರರಾಣಿ ಅಬ್ಬಕ್ಕಳ ಇತಿಹಾಸ ವಿಶ್ವದ ಮೂಲೆಮೂಲೆಗೂ ಪ್ರತಿಯೊಬ್ಬರಿಗೂ ತಿಳಿಸಿ ಕೊಡುವ ಪ್ರಯತ್ನ ನಡೆಯಬೇಕು. ಸಮಾಜದ ದೊಡ್ಡ ಆಸ್ತಿ ಸಂಪತ್ತು ಯಾವುದೆಂದರೆ ನಮ್ಮ ವ್ಯಕ್ತಿತ್ವ, ತ್ಯಾಗ ಜೀವನ, ಜೀವನ ಮೌಲ್ಯಗಳಾಗಿದ್ದು ಅಂತಹ ಶ್ರೇಷ್ಠ ಬದುಕನ್ನು ಕಂಡ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕಳ ಬದುಕು ನಮಗೆ ಮಾದರಿಯಾಗಬೇಕು ಎಂದು ನುಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪಿ.ಐ. ವಿದ್ಯಾ ವಿವಿಧ ಗೋಷ್ಠಿಗಳನ್ನು ಉದ್ಘಾಟಿಸಿದರು. ಲಯನ್ಸ್ ಜಿಲ್ಲೆ 317ಡಿ ಜಿಲ್ಲಾ ರಾಜ್ಯಪಾಲರಾದ ಕವಿತಾ ಎಸ್. ಶಾಸ್ತ್ರಿ ಸಾಂಸ್ಕ ೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸಂಸದೀಯ ಕಾರ್ಯದರ್ಶಿ ಪುತ್ತೂರು ಶಾಸಕಿ ಕೆ. ಶಕುಂತಲಾ ಶೆಟ್ಟಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ಟೊಲೀನ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಮಹಮ್ಮದ್ ಹನೀಫ್, ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕೆ.ಎಸ್.ಆರ್.ಪಿ. 7ನೆಯ ಬೆಟಾಲಿಯನ್ ಕಮಾಂಡೆಂಟ್ ಜನಾರ್ದನ್ ಆರ್, ಮಹಿಳಾ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸುಂದರ ಪೂಜಾರಿ, ಉಳ್ಳಾಲ ನಗರಸಭೆ ಉಪಾಧ್ಯಕ್ಷೆ ಚಿತ್ರಾ ಚಂದ್ರಕಾಂತ್, ಉಳ್ಳಾಲ ನಗರ ಸಭೆ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್, ತುಳು ಸಾಹಿತ್ಯ ಅಕಾಡೆಮಿಯ ಚಂದ್ರಹಾಸ್ ರೈ, ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷಿ ್ಮಗಟ್ಟಿ, ಜಿಲ್ಲಾ ವಾರ್ತಾ„ಕಾರಿ ಖಾದರ್ ಶಾ, e್ಞÁನೇಶ್, ಎ.ಎ. ಹೈದರ್ ಪರ್ತಿಪ್ಪಾಡಿ, ಪಾಂಡುರಂಗ, ಸುನಂದಾ, ಡಾ. ಪುಷ್ಪಲತಾ, ತೋನ್ಸೆ ಪುಷ್ಕಳ್ ಕುಮಾರ್, ಆನಂದ ಕೆ. ಅಸೈಗೋಳಿ ಹಾಗೂ ಸುವಾಸಿನಿ ಬಬ್ಬುಕಟ್ಟೆ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಪೂರ್ಣಕುಂಭ, ಕೀಲು ಕುದುರೆ, ಕರಗ ಕುಣಿತ, ಗೊಂಬೆಗಳು, ಬ್ಯಾಂಡ್ ಸೆಟ್, ಚೆಂಡೆ, ಕಂಗೀಲು, ಡೊಳ್ಳು ಕುಣಿತ, ಕೊಂಬು ಪಟಕುಣಿತ, ವೀರಗಾಸೆ, ಅಬ್ಬಕ್ಕ ಟ್ಯಾಬ್ಲೋ, ಸುಗ್ಗಿ ಕುಣಿತ, ಯಕ್ಷಗಾನ, ದಫ್, ಕನ್ನಡ ನಾಡಿನ ಕಣ್ಮಣಿಗಳು, ಕೆ.ಎಸ್.ಆರ್.ಪಿ. ಯಿಂದ ಬ್ಯಾಂಡ್ ಸೆಟ್, ಹಾಲಕ್ಕಿ ಕುಣಿತ, ಬಣ್ಣದ ಕೊಡೆ, ತಾಲೀಮು ಒಳಗೊಂಡಂತೆ ಮಹಿಳೆಯರಿಂದ ವಿಶೇಷ ಆಕರ್ಷಕ ಸಾಂಸ್ಕ ೃತಿಕ ಮೆರವಣಿಗೆ ಮಹಿಳಾ ಸ್ವಾಭಿಮಾನ ಜಾಥಾ ತೊಕ್ಕೊಟ್ಟು ಕಾಪಿಕಾಡು ಗಟ್ಟಿ ಸಮಾಜಭವನದಿಂದ ತೊಕ್ಕೊಟ್ಟು-ಕಲ್ಲಾಪು ಮಾರ್ಗವಾಗಿ ಯುನಿಟಿ ಸಭಾಂಗಣ ತನಕ ಸಾಗಿತು.
ಉತ್ಸವ ಸಮಿತಿ ಕಾರ್ಯಾಧ್ಯಕ್ಷ ದಿನಕರ್ ಉಳ್ಳಾಲ್ ಸ್ವಾಗತಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಬ್ಬಕ್ಕ ಉತ್ಸವ ಪ್ರಯುಕ್ತ ನಡೆದ ಸಾಂಸ್ಕ ೃತಿಕ ಹಾಗೂ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರ ಹೆಸರನ್ನು ತಾರಾನಾಥ ರೈ ಹಾಗೂ ಪಿ.ಡಿ.ಶೆಟ್ಟಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರೂಪಿಸಿದರು. ಉತ್ಸವ ಸಮಿತಿಯ ಅಬ್ದುಲ್ ಅಜೀಝ್ ಹಕ್ ವಂದಿಸಿದರು.



























