Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಗ್ರಾಮ

ಉಳ್ಳಾಲ:ಮತ್ತೆ ತಲವಾರು ದಾಳಿ

UllalaVaniBy UllalaVaniApril 30, 2016Updated:May 4, 2016No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ಬೈಕಿನಲ್ಲಿ ಹೋಗುತ್ತಿದ್ದ ಯುವಕನಿಗೆ ಆರು ಜನ ದುಷ್ಕರ್ಮಿಗಳ ತಂಡ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿರುವ ಘಟನೆ ತೊಕ್ಕೊಟ್ಟು ಟಿ.ಸಿ.ರೋಡ್ ಮಸೀದಿ ಬಳಿ ಶುಕ್ರವಾರ ಸಂಜೆ ಸಂಭವಿಸಿದೆ.

ಟಿ.ಸಿ.ರೋಡ್ ನಿವಾಸಿ ಧನರಾಜ್ (20) ಕೊಲೆ ಯತ್ನಕ್ಕೀಡಾದವರು. ಖಾಸಗಿ ಚಿಟ್ ಫಂಡಿನ ಹಣ ಸಂಗ್ರಹಿಸುವ ಕೆಲಸ ನಿರ್ವಹಿಸುತ್ತಿರುವ ಇವರು ತನ್ನ ಮನೆಯಿಂದ ತೊಕ್ಕೊಟ್ಟು ಕಡೆಗೆ ಸ್ಕೂಟರಿನಲ್ಲಿ ಸಂಚರಿಸುತ್ತಿದ್ದ ಸಂದರ್ಭ ಟಿ.ಸಿ.ರೋಡ್ ಸಮೀಪದ ಮಸೀದಿ ಬಳಿ 6 ಮಂದಿ ಅಪರಿಚಿತ ದುಷ್ಕರ್ಮಿಗಳ ತಂಡ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿತ್ತು. ಪವಾಡಸದೃಶವಾಗಿ ಧನರಾಜ್ ಅವರು ಬ್ಯಾಗ್ ಧರಿಸಿದ್ದರಿಂದಾಗಿ ದುಷ್ಕರ್ಮಿಗಳು ಬೀಸಿದ ತಲವಾರು ಏಟು ಮೊದಲು ಬ್ಯಾಗಿಗೆ ತಗಲಿ ಬಳಿಕ ಬೆನ್ನಿಗೆ ತಾಗಿತ್ತು. ಇದರಿಂದ ಧನರಾಜ್ ಪ್ರಾಣಾಪಾಯದಿಂದ ಪಾರಾಗಿದ್ದು, ತೊಕ್ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

29ullal329ullal4ದಾಳಿ ಮೇಲೆ ದಾಳಿ:

ಎ.12 ರಂದು ಅಮಾಯಕ ಮೊಗವೀರ ಮೀನುಗಾರ ರಾಜು ಕೋಟ್ಯಾನ್ ಅವರ ಹತ್ಯೆ ನಡೆದಿತ್ತು. ಘಟನೆ ಸಂಬಂಧಿಸಿ ಉಳ್ಳಾಲದಲ್ಲಿ ಪ್ರಕ್ಷುಬ್ಧ ವಾತಾವರಣ  ಉಂಟಾಗಿತ್ತು.  ಪ್ರಕರಣಕ್ಕೆ ಸಂಬಂಧಿಸಿದ ಐದು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರ ನೆರವಿನೊಂದಿಗೆ ಉಳ್ಳಾಲ ಪೊಲೀಸರು ಬಂಧಿಸಿದ್ದರು. ಇದಕ್ಕೆ ಪ್ರತೀಕಾರವಾಗಿ ಎ.24 ರಂದು ನಸುಕಿನ ಜಾವ ಮೀನುಗಾರಿಕೆಗೆಂದು ಮಂಗಳೂರಿನ ಧಕ್ಕೆಗೆ ಬೈಕಿನಲ್ಲಿ ತೆರಳುತ್ತಿದ್ದ ಇಕ್ಬಾಲ್ ನಫ್ಸಾನ್ (28) ಎಂಬವರ ಮೇಲೆ ದುಷ್ಕರ್ಮಿಗಳ ತಂಡ ತಲವಾರು ದಾಳಿ ನಡೆಸಿತ್ತು. ಗಂಭೀರ ಗಾಯಗೊಂಡ ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಲಾಗಿದೆ.

ಎ.26ರಂದು ಮತ್ತೆ ಕ್ಯಾಟರಿಂಗ್ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಮೂರು ಮಂದಿಯ ಗುಂಪಿಗೆ ದುಷ್ಕರ್ಮಿಗಳು ತೊಕ್ಕೊಟ್ಟು ಒಳಪೇಟೆಯಲ್ಲಿ ತಲವಾರು ದಾಳಿ ನಡೆಸಿದ್ದರು. ಇದರಲ್ಲಿ ಪಿಲಾರು ನಿವಾಸಿ ಸಫ್ವಾನ್ ಎಂಬವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ. ಈ ಸಂಬಂಧ ಆರು ಮಂದಿ ಆರೋಪಿಗಳನ್ನು ನಿನ್ನೆ ಬಂಧಿಸಲಾಗಿತ್ತು.

ಎ.28ರಂದು ಮತ್ತೆ ಕಲ್ಲಾಪು ಬಳಿ ಕಲ್ಲಾಪು ಪಟ್ಲ ನಿವಾಸಿ ಸಫ್ವಾನ್(28) ಎಂಬವರ ಮೇಲೆ ತಲವಾರು ದಾಳಿ ನಡೆದಿದೆ. ಇದು ವೈಯಕ್ತಿಕ ಕಾರಣ ಎಂದು ಹೇಳಲಾಗುತ್ತಿದ್ದರೂ, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ತೊಕ್ಕೊಟ್ಟು ಟಿ.ಸಿ.ರೋಡು ಸಮೀಪ ಶುಕ್ರವಾರ ಮತ್ತೆ ಅಮಾಯಕನ ಮೇಲೆ ದಾಳಿ ನಡೆದಿದೆ. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರೂ, ದುಷ್ಕರ್ಮಿಗಳು ಮಾತ್ರ ಪೊಲೀಸರಿಗೆ ಸವಾಲಾಗಿ ನಿಂತು ಕೃತ್ಯಗಳನ್ನು ಎಸಗುತ್ತಲೇ ಅಮಾಯಕರ ಮೇಲೆ ನಿರಂತರವಾಗಿ ದಾಳಿ ಮುಂದುವರಿಸುತ್ತಲೇ ಇದ್ದಾರೆ. ಇದರಿಂದ  ಜನರಲ್ಲಿ ಭೀತಿಯ ವಾತಾವರಣ ಮನೆಮಾಡಿದೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಹಿದಾಯತ್ ನಗರದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

August 15, 2026

ಮನಸ್ಸು ಶಾಂತವಾಗಿದ್ದಾಗ ಮಾತ್ರ ಏಕಾಗ್ರತೆ ಸಾಧ್ಯ: ಡಾ. ಸರ್ಫ್ರಾಜ್ ಜೆ. ಹಾಸಿಮ್

August 14, 2026

ಕಳೆದುಕೊಂಡ ಹಣ ವಾರಸುದಾರರಿಗೆ ಹಸ್ತಾಂತರ

August 13, 2026
Leave A Reply

Advertise
ಸಂಪರ್ಕಿಸಿ

ಸ್ತನ್ಯಪಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಅಗತ್ಯವಿದೆ : ರೋಟರಿ ಡೌನ್‌ಟೌನ್ ಕ್ಲಬ್ ಅಧ್ಯಕ್ಷ ಉಮೇಶ್‌ ಗಟ್ಟಿ

August 8, 2026

ಹಣ ಇಲ್ಲದಿದ್ದರೆ ಯಾರೂ ಸಾಯಬಾರದು – ಸಂವಿಧಾನದ ಪರಿಚ್ಛೇದ 21ರ ಬೆಳಕಿನಲ್ಲಿ ತುರ್ತಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ಕೂಡಲೇ ಸ್ಪಂದಿಸುವ ಅಗತ್ಯ ಇದೆ.

August 1, 2026

ತಂದೆಯ ಸಾವು; ವಿಧವೆ ತಾಯಿಯ ಜವಾಬ್ದಾರಿ ಹೊತ್ತಿದ್ದ ಯುವತಿ ಈಗ ಐಸಿಯುನಲ್ಲಿ….! ಸುಮಾರು ₹20 ಲಕ್ಷ ಚಿಕಿತ್ಸಾ ವೆಚ್ಚ; ಆರೋಗ್ಯ ಸಚಿವ ಯು.ಟಿ.ಖಾದರ್‌ ಸಹಕಾರ ಅಗತ್ಯ

July 31, 2026

ಸಾವಿರ ವರ್ಷ ಕಳೆದರೂ ಕೊರೋನಾ ವೈರಸ್ ಇರುತ್ತೆ- ಭಯ ಬೇಡ ಎಚ್ಚರವಿರಲಿ: ಆರೋಗ್ಯ ಸಚಿವ ಯು.ಟಿ. ಖಾದರ್

July 22, 2026
suddi

ಹಿದಾಯತ್ ನಗರದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

By UllalaVaniAugust 15, 20260

ಕೋಟೆಕಾರ್: ಹಿದಾಯತ್ ನಗರ ಅಲ್ ಹಿದಾಯ ಜುಮಾ ಮಸ್ಜಿದ್, ಇಹ್ಸಾನುಲ್ ವಹ್ಹಾಬ್ ಅಲ್ ಮದ್ರಸತುಲ್ ಹಿದಾಯ, ಕೆಎಂಜೆ, ಎಸ್‌ವೈಎಸ್ ಹಾಗೂ…

ಮನಸ್ಸು ಶಾಂತವಾಗಿದ್ದಾಗ ಮಾತ್ರ ಏಕಾಗ್ರತೆ ಸಾಧ್ಯ: ಡಾ. ಸರ್ಫ್ರಾಜ್ ಜೆ. ಹಾಸಿಮ್

August 14, 2026

ಮೂಡಾ ವ್ಯಾಪ್ತಿಯ ಕೊಟ್ಟಾರ ಆಸ್ತಿ ಖರೀದಿ ಪ್ರಕ್ರಿಯೆ: ಮೂಲ ದಾಖಲೆಗಳ ಕುರಿತು ಪ್ರಶ್ನೆಗಳ ಸರಮಾಲೆ

August 14, 2026

ಉಳ್ಳಾಲವಾಣಿ ಲೋಗೋ ಉಪಯೋಗಿಸಿ ಸಂಸ್ಥೆಯ ಹೆಸರಿನಲ್ಲಿ ಎಡಿಟ್‌ ಮಾಡಿದ ಫೋಟೋ ಶೇರ್ — ಕಾನೂನು ಕ್ರಮದ ಎಚ್ಚರಿಕೆ

August 14, 2026
1 2 3 … 2,059 Next
Automatic YouTube Gallery

ಉಳ್ಳಾಲದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ | ನೇರ ಪ್ರಸಾರ | 2026 | ತೊಕ್ಕೊಟ್ಟು

ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಸಹಭಾಗಿತ್ವದಲ್ಲಿ, ತಾಲೂಕು ತಹಶಿಲ್ದಾರ್ ನೇತೃತ್ವದಲ್ಲಿ ಉಳ್ಳಾಲ ತಾಲೂಕು ಆಡಳಿತದಿಂದ
80ನೇ ಸ್ವಾತಂತ್ರ‍್ಯೋತ್ಸವ ಆಚರಣೆ

ಸ್ಥಳ: ತೊಕ್ಕೊಟ್ಟು ಒವರ್‌ಬ್ರಿಡ್ಜ್ ಫ್ಲಾö್ಯ ಗ್ ಪೋಲ್

ಉಳ್ಳಾಲ ಅಬ್ಬಕ್ಕ ವೃತ್ತದಿಂದ ತೊಕ್ಕೊಟ್ಟು ಒವರ್ ...
ಬ್ರಿಡ್ಜ್ ವರೆಗೆ ವಿದ್ಯಾರ್ಥಿಗಳ ಪಥಚಂಚಲನShow More
ಉಳ್ಳಾಲದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ | ನೇರ ಪ್ರಸಾರ | 2026 | ತೊಕ್ಕೊಟ್ಟು
Now Playing
ಉಳ್ಳಾಲದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ | ನೇರ ಪ್ರಸಾರ | 2026 | ತೊಕ್ಕೊಟ್ಟು
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ...
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಸಹಭಾಗಿತ್ವದಲ್ಲಿ, ತಾಲೂಕು ತಹಶಿಲ್ದಾರ್ ನೇತೃತ್ವದಲ್ಲಿ ಉಳ್ಳಾಲ ತಾಲೂಕು ಆಡಳಿತದಿಂದ
80ನೇ ಸ್ವಾತಂತ್ರ‍್ಯೋತ್ಸವ ಆಚರಣೆ

ಸ್ಥಳ: ತೊಕ್ಕೊಟ್ಟು ಒವರ್‌ಬ್ರಿಡ್ಜ್ ಫ್ಲಾö್ಯ ಗ್ ಪೋಲ್

ಉಳ್ಳಾಲ ಅಬ್ಬಕ್ಕ ವೃತ್ತದಿಂದ ತೊಕ್ಕೊಟ್ಟು ಒವರ್ ...
ಬ್ರಿಡ್ಜ್ ವರೆಗೆ ವಿದ್ಯಾರ್ಥಿಗಳ ಪಥಚಂಚಲನShow More
ಕೊಣಾಜೆ ಮೈದಾನದಲ್ಲಿ ಗುರು-ಗಾಂಧಿ ಸಂವಾದ ಶತಮಾನೋತ್ಸವ -ನೇರ ಪ್ರಸಾರ
Now Playing
ಕೊಣಾಜೆ ಮೈದಾನದಲ್ಲಿ ಗುರು-ಗಾಂಧಿ ಸಂವಾದ ಶತಮಾನೋತ್ಸವ -ನೇರ ಪ್ರಸಾರ
ಕೊಣಾಜೆ ಮೈದಾನದಲ್ಲಿ ಗುರು-ಗಾಂಧಿ ಸಂವಾದ ಶತಮಾನೋತ್ಸವ -ನೇರ ಪ್ರಸಾರ
ಕೊಣಾಜೆ ಮೈದಾನದಲ್ಲಿ ಗುರು-ಗಾಂಧಿ ಸಂವಾದ ಶತಮಾನೋತ್ಸವ -ನೇರ ಪ್ರಸಾರ
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version