Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಉಳ್ಳಾಲ

ನೇತ್ರಾವತಿಗಿಲ್ಲ ದಾರಿದೀಪದ ನೆರಳು

UllalaVaniBy UllalaVaniMarch 4, 2016Updated:March 4, 2016No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ವಜ್ರ ಗುಜರನ್, ಮಾಡೂರು
ಉಳ್ಳಾಲ: ಅಂದು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನಗಳು ಹೋಗುವುದೇ ಕಷ್ಟದಾಯಕ. ಆದರೆ ವಿಳಂಬವಾದರೂ ಕುಂದಾಪುರ -ತಲಪಾಡಿ ಹೆದ್ದಾರಿ ಅಗಲೀಕರಣ ಕಾಮಗಾರಿಯ ಕೊನೆ ಹಂತದಲ್ಲಿ ಅತಿ ಉದ್ದನೆಯ ನೂತನ ನೇತ್ರಾವತಿ ಸೇತುವೆ ಕೆಲಸ ಪೂರ್ಣಗೊಂಡು ಇದೀಗ ಸುಗಮ ಸಂಚಾರಕ್ಕೆ ಯೋಗ್ಯವಾಗಿದೆ. ಆದರೆ ರಾತ್ರಿ ಸಮಯದಲ್ಲಿ ಹಳೇಯ ಮತ್ತು ನೂತನ ಸೇತುವೆಯುದ್ದಕ್ಕೂ ದಾರಿದೀಪಗಳು ಇಲ್ಲದೇ ಇರುವುದರಿಂದ ದುರ್ಘಟನೆಗಳು ಸಂಭವಿಸುವ ಭೀತಿಯ ವಾತಾವರಣ ವಾಹನ ಸವಾರರಲ್ಲಿ ಹಾಗೂ ಪಾದಚಾರಿಗಳಲ್ಲಿ ಮನೆ ಮಾಡಿದೆ.

ಬ್ರಿಟೀಷ್ ಕಾಲದಿಂದ ಹಳೇಯ ಸೇತುವೆ ಆರಂಭಗೊಂಡಿದೆ. ಅದರ ದಾರಿಯುದ್ಧಕ್ಕೂ ಒಂದು ಸಮಯದಲ್ಲಿ ಸೋಡಿಯಂ ದಾರಿದೀಪಗಳನ್ನು ಅಳವಡಿಸಲಾಗಿತ್ತು. ಆದರೆ ನೂತನ ಸೇತುವೆ ಶುಭಾರಂಭಗೊಂಡ ನಂತರದ ದಿನಗಳಲ್ಲಿ ಒಂದು ಕಿ.ಮೀ ಅಂತರದ ಎರಡು ಸೇತುವೆಯೂ ರಾತ್ರಿ ಸಂದರ್ಭ ಕಗ್ಗತ್ತಲಲ್ಲಿ ಮುಳುಗುತ್ತಿದೆ.

ಪಾದಚಾರಿಗಳಲ್ಲಿ ಭೀತಿ :

ಹಳೇಯ ಸೇತುವೆಯಲ್ಲಿ ಪಾದಚಾರಿಗಳಿಗೆ ಹೋಗಲು ಫುಟ್‍ಪಾತ್ ಇದೆ. ಅದರಲ್ಲಿ ನಸುಕಿನ ಜಾವ ಮತ್ತು ಸಂಜೆ ವೇಳೆ ವಾಕಿಂಗ್ ಮತ್ತು ಪಾದಚಾರಿಗಳು ಹೋಗುವವರಿದ್ದಾರೆ. ಆದರೆ ದಾರಿದೀಪಗಳು ಇಲ್ಲದೇ ಇರುವುದರಿಂದ ಭೀತಿಯಿಂದಲೇ ವಾಕಿಂಗ್ ಹೋಗುವವರು , ಪಾದಚಾರಿಗಳು ನಡೆದು ಮುಂದೆ ಸಾಗಬೇಕಿದೆ. ವಾಹನದಲ್ಲಿ ಆಗಂತುಕರು ಸುಲಿಗೆ ಮಾಡಿದರೂ ಕಗ್ಗತ್ತಲಲ್ಲಿ ದುಷ್ಕøತ್ಯಗಳು ಮರೆಯಾಗುವ ವಾತಾವರಣ ಇದೆ.

ವೀಕೆಂಡ್ ಪಾರ್ಟಿ ತಾಣ:

ನಗರ ಮತ್ತು ಗ್ರಾಮೀಣ ಭಾಗದ ಮಧ್ಯದಲ್ಲಿ ಇರುವ ಸೇತುವೆಯಲ್ಲಿ ಶನಿವಾರದ ದಿನ ವೀಕೆಂಡ್ ಪಾರ್ಟಿಗಳು ನಡೆಯುವುದುಂಟು. ನಗರದ ವೈದ್ಯಕೀಯ , ಪದವಿ ಕಾಲೇಜು ವಿದ್ಯಾರ್ಥಿಗಳು, ದೇರಳಕಟ್ಟೆ ಭಾಗದ ವೈದ್ಯಕೀಯ ವಿದ್ಯಾರ್ಥಿ, ವೈದ್ಯರು ಅಲ್ಲದೆ ಕೇರಳದ ಪ್ರವಾಸಿಗರು ಇಲ್ಲೇ ರಾತ್ರಿ ಹೊತ್ತಿನಲ್ಲಿ ದ್ವಿಚಕ್ರ, ಚತುಶ್ಚಕ್ರ ವಾಹನಗಳನ್ನು ನಿಲ್ಲಿಸಿ ನದಿ ಕಿನಾರೆಯ ನೋಟ ಸವಿಯುತ್ತಾ ಮತ್ತು ಏರಿಸುವ ಪಾರ್ಟಿಗಳು ನಡೆಯುತ್ತಲೇ ಇರುತ್ತವೆ. ದಾರಿದೀಪಗಳು ಇಲ್ಲದೇ ಇರುವುದು ಇಂತಹ ಪಾರ್ಟಿಗಳಿಗೆ ಎಡೆ ಮಾಡಿಕೊಟ್ಟಂತಾಗಿದೆ.
ದುರ್ಘಟನೆಗಳಿಗೆ ದಾರಿ: ಸೇತುವೆ ಮಧ್ಯದಲ್ಲಿ ಪಾರ್ಟಿ, ಪ್ರವಾಸಿಗರು ನದಿ ವೀಕ್ಷಣೆಗೆ ನಿಲ್ಲುವ ಸಂದರ್ಭ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುತ್ತಾರೆ. ಇದರಿಂದ ನೂತನ ಸೇತುವೆಯಲ್ಲಿ ಮಂಗಳೂರಿನಿಂದ ಬರುವ ವಾಹನಗಳು ಅಮಿತ ವೇಗದಿಂದ ಇದ್ದಲ್ಲಿ, ದಾರಿದೀಪಗಳಿಲ್ಲದೆ ನಿಂತಿರುವ ಕಾರುಗಳಿಗೆ ಅಪಘಾತವಾಗುವ ದುರ್ಘಟನೆಗಳು ನಡೆದಿದೆ. ಈ ಹಿಂದೆ ನಿಂತ ಟ್ಯಾಂಕರ್ ಹಿಂದೆ ಬೈಕ್ ಡಿಕ್ಕಿ ಹೊಡೆದು ಯುವಕನೋರ್ವ ಸಾವನ್ನಪ್ಪಿದ್ದರೆ, ನಿಂತಿದ್ದ ಕಾರಿಗೆ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿ ಬೈಕ್ ಸವಾರರು ಗಂಭೀರ ಗಾಯಗೊಂಡಿರುವ ಪ್ರಸಂಗವೂ ಇಲ್ಲಿ ಜರಗಿದೆ.

gggg

nethravathi-3
ದಾರಿದೀಪದ ಜತೆಗೆ ಬೇಕಿದೆ ಸಿ.ಸಿ.ಟಿ ವಿ:

ಆತ್ಮಹತ್ಯೆ ಹಾಗೂ ಅಪರಾಧ ಕೃತ್ಯಗಳಿಗೂ ನೇತ್ರಾವತಿಯ ಎರಡು ಸೇತುವೆಗಳು ಬಳಕೆಯಾಗುತ್ತಿರುವುದು ವಿಪರ್ಯಾಸ. ಸಹಸ್ರಾರು ಸಂಖ್ಯೆ ಜನರು ಸೇತುವೆಯಿಂದ ಉಪಯೋಗ ಪಡೆದುಕೊಂಡರೆ, ಇನ್ನು ಕೆಲ ಮಂದಿ ಅದನ್ನು ದುರುಪಯೋಗ ಪಡಿಸಿರುವ ಘಟನೆಗಳು ಇವೆ. ನೊಂದ ಮನಸ್ಸುಗಳು ಸೇತುವೆಯಿಂದ ನದಿಗೆ ಹಾರಿರುವ ಪ್ರಕರಣಗಳು ನೂರಾರು ಇದೆ. ಅದೇ ರೀತಿ ಕೊಲೆ ನಡೆಸಿ ಶವಗಳನ್ನು ಎಸೆದಿರುವ ಘಟನೆಗಳು ಇನ್ನೂ ಜೀವಂತವಾಗಿದೆ. ಬೆಂಗಳೂರು ಮೂಲದ ಐ.ಟಿ. ಉದ್ಯೋಗಿ ಮಂಗಳೂರಿನ ಇಸ್ಕಾನ್‍ನ ಅನುಯಾಯಿಯ ಶವವನ್ನು ಸೇತುವೆಯಿಂದ ಎಸೆದಿರುವ ಪ್ರಕರಣ ಪೊಲೀಸರ ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿತ್ತು. ಆದರೆ ಈವರೆಗೂ ಪ್ರಕರಣದ ಆರೋಪಿಗಳ ತನಿಖೆಯಾಗಿಲ್ಲ. ಆದರೆ ಒಂದು ಹಂತದಲ್ಲಿ ಸೇತುವೆಯ ಉದ್ದಕ್ಕೂ ದಾರಿದೀಪ ಮತ್ತು ಸಿ.ಸಿ.ಟಿವಿಯನ್ನು ಅಳವಡಿಸುತ್ತಿದ್ದಲ್ಲಿ ಆರೋಪಿಗಳ ಸುಳಿವು ಪತ್ತೆ ಮಾಡಲು ಸಹಕಾರಿಯಾಗುತಿತ್ತು.

ಜಿಲ್ಲಾಧಿಕಾರಿಗೆ ದೂರು:

ಹಲವು ಸಮಯದಿಂದ ದುರಸ್ತಿಯಲ್ಲಿರುವ ಹಳೇಯ ಸೇತುವೆಯ ದಾರಿದೀಪಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಮತ್ತು ಸೇತುವೆಗಳಲ್ಲಿ ನಡೆಯುವ ಅಪರಾಧ ಚಟುವಟಿಕೆಗಳನ್ನು ತಡೆಯೊಡ್ಡುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಹಾಗೂ ಉಳ್ಳಾಲ ನಗರಸಭೆ ಸದಸ್ಯ ಮಹಮ್ಮದ್ ಮುಕ್ಕಚ್ಚೇರಿ ಅವರು ಜಿಲ್ಲಾಧಿಕಾರಿ, ಮಹಾನಗರಪಾಲಿಕೆ ಮಹಾಪೌರರು, ಪೌರಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ಬೇಡಿಕೆ:

ಹಳೇಯ ಸೇತುವೆಯಲ್ಲಿ ನಾದುರಸ್ತಿಯಲ್ಲಿರುವ ದಾರಿದೀಪಗಳ ದುರಸ್ತಿ ಶೀಘ್ರವೇ ಆಗಬೇಕಿದೆ. ಸೇತುವೆಯಲ್ಲಿ ಪೊಲೀಸರ ಔಟ್‍ಪೋಸ್ಟ್ ನಿರ್ಮಾಣ ಆದಲ್ಲಿ ಅಪರಾಧ ಕೃತ್ಯಗಳನ್ನು ನಿಯಂತ್ರಿಸಬಹುದು. ನೂತನ ಸೇತುವೆಯಲ್ಲಿ ಹೊಸ ದಾರಿದೀಪಗಳನ್ನು ಅಳವಡಿಸಬೇಕಿದೆ. ರಾತ್ರಿ ವೇಳೆ ಸೇತುವೆ ಮಧ್ಯದಲ್ಲಿ ವಾಹನಗಳನ್ನು ನಿಲ್ಲಿಸದಂತೆ ಪೊಲೀಸರು ನಿಗಾ ವಹಿಸಬೇಕು. ನೂತನ ಸೇತುವೆಯಲ್ಲೂ ಸೈಕಲ್ ಪಾಥ್ ಮತ್ತು ಪಾದಚಾರಿಗಳಿಗೆ ತೆರಳುವ ಅನುಕೂಲ ಮಾಡಬೇಕು.

` ರಾ.ಹೆ.66ರ ನೇತ್ರಾವತಿ ಸೇತುವೆ ಈ ಮೊದಲು ಒಂದು ಇತ್ತು. ಈಗ ಇನ್ನೊಂದು ನಿರ್ಮಾಣ ಆಗಿದೆ. ಸೇತುವೆ ರಾ.ಹೆ.ಯಾದ ಮಂಗಳೂರು ಮತ್ತು ಕೇರಳವನ್ನು ಜೋಡಿಸುವ ರಸ್ತೆಯಾಗಿದೆ. ಹೆದ್ದಾರಿಯಲ್ಲಿ ಹಗಲು ರಾತ್ರಿ ಹಲವು ಬಸ್ಸುಗಳು , ಘನ ವಾಹನಗಗಳು ನಿತ್ಯ ಸಂಚರಿಸುತ್ತದೆ. ಸರಕು ಸಾಗಾಟದ ಕೇಂದ್ರ ಬಿಂದುವಾಗಿದೆ. ಸೇತುವೆ ಮೇಲೆ ಈ ಹಿಂದೆ ರಾತ್ರಿ ಸಮಯದಲ್ಲಿ ಸುಮಾರು ಸೋಡಿಯಂ ದಾರಿ ದೀಪಗಳು ಉರಿಯುತ್ತಿತ್ತು. ಸಾರ್ವಜನಿಕರಿಗೆ ನಿರ್ಭೀತಿಯಿಂದ ಸಂಚರಿಸಲು ಅನುಕೂಲವಾಗಿತ್ತು. ಈ ಮಧ್ಯೆ ಕೆಲ ವಾಹನಗಳು ಕೆಟ್ಟು ನಿಲ್ಲುತ್ತದೆ. ಅಲ್ಲದೆ ರಾತ್ರಿ ಹೊತ್ತು ವಾಹನಗಳಿಗೆ ತಡೆಯೊಡ್ಡಿ ಅಹಿತಕರ ಘಟನೆಗಳು ಮತ್ತು ಸುಲಿಗೆ ನಡೆದ ವದಂತಿಗಳು ಇದೆ. ಕೃತ್ಯಗಳಿಗೆ ಕತ್ತಲೆ ವಾತಾವರಣ ಪೂರಕವಾಗಿದೆ. ಒಂದು ಕಾಲದಲ್ಲಿ ಬಹಳ ಸಾರ್ವಜನಿಕ ಒತ್ತಡದಿಂದ ದಾರಿದೀಪ ಸೇತುವೆಗೆ ಒದಗಿಬಂದಿತ್ತು. ಈಗ ಹಲವು ಸಮಯಗಳಿಂದ ದಾರಿದೀಪದ ವ್ಯವಸ್ಥೆ ಹಾಳಾಗಿದೆ. ನಿತ್ಯ ಸಂಚರಿಸುವವರಿಗೆ ಅನಾನುಕೂಲವಾಗಿದೆ’ .
ಮಹಮ್ಮದ್ ಮುಕ್ಕಚ್ಚೇರಿ
ಸಾಮಾಜಿಕ ಕಾರ್ಯಕರ್ತ
ನಗರಸಭೆ ಸದಸ್ಯ

ರಾಷ್ಟ್ರೀಯ ಹೆದ್ದಾರಿಯನ್ನು ದುರಸ್ತಿ ಮಾಡುವ ಸಂದರ್ಭದಲ್ಲಿ ಸೇತುವೆಗೆ ಆಳಪಡಿಸಿದ್ದ ಸೋಡಿಯಂ ವಿದ್ಯುತ್ ಕಂಬದ ವೈಯರ್‍ಗಳಿಗೆ ಸಂಪೂರ್ಣ ಹಾನಿಯಾಗಿದೆ.

20 ವರ್ಷಗಳ ಹಿಂದಿನ ವಯರನ್ನು ಈವರೆಗೆ ಬದಲಾವಣೆ ನಡೆಸಿಲ್ಲ. ಈಗಾಗಲೇ ಹಳೆ ಸೇತುವೆ ಕಾಮಗಾರಿ ಕೈಗೊಳ್ಳಲಾಗಿದೆ. ಮುಂದಿನ 15 ದಿನಗಳಲ್ಲಿ ದಾರಿದೀಪದ ದುರಸ್ತಿಯನ್ನು ನಡೆಸುತ್ತೇವೆ. ಆದರೆ ಹೊಸ ಸೇತುವೆಗೆ ದಾರಿದೀಪಗಳನ್ನು ಅಳವಡಿಸುವ ಯಾವುದೇ ಯೋಜನೆಯಿಲ್ಲ .
ಯಶವಂತ ಕಾಮತ್
ಸಹಾಯಕ ಕಾರ್ಯನಿರ್ವಾಹಣಾ ಅಧಿಕಾರಿ

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಉಳ್ಳಾಲದಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಆಗಿದೆಯಾ ! -ಮುನೀರ್ ಕಾಟಿಪಳ್ಳ

March 6, 2026

ಉಳ್ಳಾಲ: ಅರಣ್ಯಾಧಿಕಾರಿ ಮನೆಯಿಂದ ಬೈಕ್ ಸಮೇತ 181ಗ್ರಾಂ ಚಿನ್ನ, ಹತ್ತೂವರೆ ಲಕ್ಷ ನಗದು ಕಳವು…!!

March 5, 2026

ಹರೇಕಳ ಆಲಡ್ಕ ಜಮಾಅತಿನ ಎರಡು ಮದ್ರಸಕ್ಕೆ ಶೇ.100 ಫಲಿತಾಂಶ

March 5, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
All News

ಮೂರು ದಿನಗಳ ದ.ಕ ಜಿಲ್ಲಾ ಭೇಟಿಯಲ್ಲಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ಧರ್ಮಸ್ಥಳದ ಸೌಜನ್ಯಾ , ಮಂಜನಾಡಿಯ ಅಶ್ವಿನಿ ಪ್ರಕರಣ ಕಾಣದಾಯಿತೇ ?

By UllalaVaniMarch 7, 20260

ಉಳ್ಳಾಲವಾಣಿ ವಾರ್ತೆಮಂಗಳೂರು: ಇಡೀ ರಾಜ್ಯವನ್ನೇ ಗೊಂದಲಕಾರಿಯನ್ನಾಗಿಸಿದ ಜಿಲ್ಲೆಯ ಸೌಜನ್ಯಾ ಹತ್ಯೆ ಪ್ರಕರಣ, ತನ್ನ ಎರಡೂ ಮಕ್ಕಳನ್ನು, ಕಾಲುಗಳನ್ನು ಕಳೆದುಕೊಂಡು, ಅವೈಜ್ಞಾನಿಕ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ದೇರಳಕಟ್ಟೆ: ನಿಟ್ಟೆ ಉಷಾ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್‌ನಲ್ಲಿ ‘ಸಮನ್ವಯ 2K26’ ವಾರ್ಷಿಕೋತ್ಸವ

March 7, 2026

ಉಳ್ಳಾಲದಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಆಗಿದೆಯಾ ! -ಮುನೀರ್ ಕಾಟಿಪಳ್ಳ

March 6, 2026

ಉಳ್ಳಾಲ: ಅರಣ್ಯಾಧಿಕಾರಿ ಮನೆಯಿಂದ ಬೈಕ್ ಸಮೇತ 181ಗ್ರಾಂ ಚಿನ್ನ, ಹತ್ತೂವರೆ ಲಕ್ಷ ನಗದು ಕಳವು…!!

March 5, 2026
1 2 3 … 1,825 Next
Automatic YouTube Gallery

|| Exclusive Audio ||ಸರ್ವಿಸ್ ರಸ್ತೆಯ ಪಕ್ಕದಲ್ಲಿ ಅಪಾಯಕಾರಿ ರೀತಿಯಲ್ಲಿ ನೇತಾಡುತ್ತಿರುವ ವಾಯರ್‌ಗಳು..!

ತೊಕ್ಕೊಟ್ಟು ಸರ್ವಿಸ್ ರಸ್ತೆಯ ಪಕ್ಕದಲ್ಲಿ ಅಪಾಯಕಾರಿ ರೀತಿಯಲ್ಲಿ ನೇತಾಡುತ್ತಿರುವ ವಾಯರ್‌ಗಳು..!

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with ...
Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #Thokkottu #Audio
Show More
|| Exclusive Audio ||ಸರ್ವಿಸ್ ರಸ್ತೆಯ ಪಕ್ಕದಲ್ಲಿ ಅಪಾಯಕಾರಿ ರೀತಿಯಲ್ಲಿ ನೇತಾಡುತ್ತಿರುವ ವಾಯರ್‌ಗಳು..!
Now Playing
|| Exclusive Audio ||ಸರ್ವಿಸ್ ರಸ್ತೆಯ ಪಕ್ಕದಲ್ಲಿ ಅಪಾಯಕಾರಿ ರೀತಿಯಲ್ಲಿ ನೇತಾಡುತ್ತಿರುವ ವಾಯರ್‌ಗಳು..!
ತೊಕ್ಕೊಟ್ಟು ಸರ್ವಿಸ್ ರಸ್ತೆಯ ಪಕ್ಕದಲ್ಲಿ ಅಪಾಯಕಾರಿ ರೀತಿಯಲ್ಲಿ ನೇತಾಡುತ್ತಿರುವ ...
ತೊಕ್ಕೊಟ್ಟು ಸರ್ವಿಸ್ ರಸ್ತೆಯ ಪಕ್ಕದಲ್ಲಿ ಅಪಾಯಕಾರಿ ರೀತಿಯಲ್ಲಿ ನೇತಾಡುತ್ತಿರುವ ವಾಯರ್‌ಗಳು..!

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with ...
Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #Thokkottu #Audio
Show More
ಅನ್ವಿತ್ ಎಲೆಕ್ಟ್ರಾನಿಕ್ಸ್ & ಫರ್ನಿಚರ್ ಮಳಿಗೆಯಲ್ಲಿ `ಲಕ್ಷ್ಮೀ ಪೂಜೆ' ಸಂಪನ್ನ
Now Playing
ಅನ್ವಿತ್ ಎಲೆಕ್ಟ್ರಾನಿಕ್ಸ್ & ಫರ್ನಿಚರ್ ಮಳಿಗೆಯಲ್ಲಿ `ಲಕ್ಷ್ಮೀ ಪೂಜೆ' ಸಂಪನ್ನ
ತೊಕ್ಕೊಟ್ಟು ಒಳಪೇಟೆಯಲ್ಲಿ ಉದ್ಘಾಟನೆಗೆ ಸಿದ್ದಗೊಂಡಿರುವ ಅನ್ವಿತ್ ...
ತೊಕ್ಕೊಟ್ಟು ಒಳಪೇಟೆಯಲ್ಲಿ ಉದ್ಘಾಟನೆಗೆ ಸಿದ್ದಗೊಂಡಿರುವ ಅನ್ವಿತ್ ಎಲೆಕ್ಟ್ರಾನಿಕ್ಸ್ & ಫರ್ನಿಚರ್ ಮಳಿಗೆಯಲ್ಲಿ `ಲಕ್ಷ್ಮೀ ಪೂಜೆ' ಸಂಪನ್ನ

ದೀಪಪ್ರಜ್ವಲನೆಗೈದ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #laxmipuja #anvitheletronics&furniture
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d