ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಕಾರಿನಲ್ಲಿ ಬಂದ ತಂಡವೊಂದು ಆಟವಾಡಿ ಮನೆಗೆ ವಾಪಸ್ಸಾಗುತ್ತಿದ್ದ ವಿದ್ಯಾರ್ಥಿಗೆ ಮಾರಕಾಸ್ತ್ರಗಳಿಂದ ಹೊಡೆದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ದೇರಳಕಟ್ಟೆ-ಅಡ್ಕರೆ ತಿರುವು ರಸ್ತೆಯಲ್ಲಿ ನಿನ್ನೆ ಸಂಜೆ ವೇಳೆ ನಡೆದಿದೆ.
ಅಡ್ಕರೆಪಡ್ಪು ನಿವಾಸಿ ಇಬ್ರಾಹಿಂ(18) ಹಲ್ಲೆಗೊಳಗಾದ ವಿದ್ಯಾರ್ಥಿ. ದೇರಳಕಟ್ಟೆಯ ಗ್ರೀನ್ ವ್ಯೂ ಟ್ಯಟೋರಿಯಲ್ ನ ವಿದ್ಯಾರ್ಥಿಯಾಗಿರುವ ಇಬ್ರಾಹಿಂ ದೇರಳಕಟ್ಟೆಯ ಗ್ರೌಂಡಿನಲ್ಲಿ ಕ್ರಿಕೆಟ್ ಆಟವಾಡಿ ಮನೆಗೆ ವಾಪಸ್ಸಾಗಲೆಂದು ಅಡ್ಕರೆ ತಿರುವು ಬಳಿ ನಿಂತಿದ್ದಾಗ ಕಾರಿನಲ್ಲ ಬಂದ ನಾಲ್ವರ ತಂಡ ಮಾರಕಾಸ್ತ್ರಗಳಿಂದ ಇಬ್ರಾಹಿಂ ಕಾಲು ಮತ್ತು ಸೊಂಟದ ಭಾಗಕ್ಕೆ ಗಂಭೀರವಾಗಿ ಹಲ್ಲೆ ನಡೆಸಿದೆ. ಇದೇ ಸಂದರ್ಭ ಇಬ್ರಾಹಿಂ ಜತೆಗೆ ಆಟವಾಡಿದ್ದ ಇಬ್ಬರು ಬಾಲಕರಿಗೂ , ಒಂದು ವಾರದ ಒಳಗೆ ನಿಮ್ಮನ್ನು ಮುಗಿಸದೇ ಬಿಡುವುದಿಲ್ಲ’ ಎಂದು ತಂಡ ಜೀವಬೆದರಿಕೆಯೊಡ್ಡಿದೆ ಎನ್ನಲಾಗಿದೆ. ಕಾರಿನಲ್ಲಿ ತಲವಾರು, ದೊಣ್ಣೆ ಸಹಿತ ಮಾರಕಾಸ್ತ್ರಗಳಿದ್ದು, ದುಷ್ಕøತ್ಯ ನಡೆಸಲೆಂದೇ ತಂಡ ಹೊಂಚು ಹಾಕಿ ಬಂದಿತ್ತೆನ್ನಲಾಗಿದೆ.
ತಂಡ ಬಂದಿದ್ದ ಕಾರಿನ ನೋಂದಣಿ ಸಂಖ್ಯೆ ಕೆ.ಎ.19 ಎಂಬಿ 9403 ಎಂಬುದಾಗಿದ್ದು, ಹಲ್ಲೆ ವೇಳೆ ರವೂಫ್ ಎಂಬಾತ ಭಾಗಿಯಾಗಿದ್ದನೆಂದು ಚಿಕಿತ್ಸೆ ಪಡೆಯುತ್ತಿರುವ ಇಬ್ರಾಹಿಂ ತಿಳಿಸಿದ್ದಾರೆ. ಇಬ್ರಾಹಿಂ ಕುಟುಂಬ ಆರ್ಥಿಕವಾಗಿ ಹಿಂದುಳಿದಿದ್ದು, ತಾಯಿ ಬೀಡಿ ಕಟ್ಟಿ ಕುಟುಂಬ ನಿರ್ವಹಣೆ ನಡೆಸುತ್ತಿದ್ದಾರೆ.
ಪ್ರತಿಭಟನೆ ಸೇಡು:
ಚುನಾವಣೆ ಪೂರ್ವ ತುಳುನಾಡು ರಕ್ಷಣಾ ವೇದಿಕೆ ನೇತೃತ್ವದಲ್ಲಿ ದೇರಳಕಟ್ಟೆ-ಅಡ್ಕರೆಪಡ್ಪು ಸಂಪರ್ಕಿಸುವ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆಗೆ ಕಾಂಗ್ರೆಸ್ ಕಾರ್ಯಕರ್ತರು ತಡೆಯೊಡ್ಡಿದ್ದರು. ಅಲ್ಲದೆ ಈ ವೇಳೆ ಪ್ರತಿಭಟನಾ ನಿರತರ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿತ್ತು. ಪ್ರತಿಭಟನೆಯಲ್ಲಿ ಇಬ್ರಾಹಿಂ ಭಾಗಿಯಾಗಿದ್ದನೆಂಬ ಸೇಡಿಗೆ ರವೂಫ್ ಮತ್ತು ತಂಡ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.


