ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕಿನ್ಯ : ಜೀವನದಲ್ಲಿ ಸ್ವಾವಲಂಬಿಯಾಗಿ ತನ್ನ ಕಾಲ ಮೇಲೆ ನಿಂತು ಉತ್ತಮ ಸಾಧನೆ ಮಾಡಬೇಕು, ಫಲಾನುಭವಿಗಳು ತಮ್ಮ ಮೂರು ತಿಂಗಳ ತರಬೇತಿ ಅವಧಿಯಲ್ಲಿ ಕೇವಲ ಅಡಿಪಾಯವನ್ನು ಮಾತ್ರಾ ಅರ್ಥ ಮಾಡಿಕೊಂಡಿರುತ್ತಾರೆ. ಆದರೆ ಅದರಲ್ಲಿ ಕಟ್ಟಡ ಕಟ್ಟುವ ವಿನ್ಯಾಸಗೊಳಿಸುವ ಕಲೆಯನ್ನು ತನ್ನ ಸ್ವ ಸಾಮರ್ಥ್ಯದಿಂದಲೇ ಭರಿಸಿಕೊಳ್ಳಬೇಕು ಎಂದು ಸಿ.ಡಿ.ಟಿ.ಪಿ ಕೆ.ಪಿ.ಟಿ ಸಂಯೋಜಕಿ ಹಾಗೂ ಪ್ರಾಂಶುಪಾಲರಾದ ಸುಶೀಲ ಅಭಿಪ್ರಾಯಪಟ್ಟರು.
ಅವರು ಕೇಶವ ಶಿಶುಮಂದಿರ ಕಿನ್ಯ ಹಾಗೂ ಸಿ.ಡಿ.ಟಿ.ಪಿ. ಕೆಪಿಟಿ ಇದರ ಜಂಟಿ ಆಶ್ರಯದಲ್ಲಿ ನಡೆದ ಮೂರು ತಿಂಗಳ ಉಚಿತ ಫ್ಯಾಶನ್ ಡಿಸೈನ್ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೆ.ಪಿ.ಟಿ. ಸಿ.ಡಿ.ಟಿ.ಪಿ ಆಂತರಿಕ ಸಂಯೋಜಕ ಸುಶಾಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ತರಬೇತಿಯ ಪ್ರಯೋಜನ, ಯಾವ ರೀತಿ ಸ್ವದ್ಯೋಗವನ್ನು ಜೀವನದಲ್ಲಿ ಅಳವಡಿಸಬಹುದು ಎಂದು ಮಾರ್ಗದರ್ಶನ ನೀಡಿದರು.
ಮುಖ್ಯ ಅತಿಥಿಗಳಾಗಿ ಸಿಡಿಟಿಪಿ ಕೆಪಿಟಿಯ ಸುಧೀರ್, ಕೇಶವ ಶಿಶುಮಂದಿರದ ಕಾರ್ಯದರ್ಶಿ ಚೇತನ್ ಪಿಲಿಕೂರು, ತರಬೇತಿ ಶಿಕ್ಷಕಿ ಕಾಂಚನ ಸೋಮೇಶ್ವರ ಉಪಸ್ಥಿತರಿದ್ದರು.
ಈ ಸಂದರ್ಭ 26 ಫಲಾನುಭವಿಗಳಿಗೆ ಅರ್ಹತಾ ಪತ್ರವನ್ನು ವಿತರಿಸಲಾಯಿತು.
ಶಿಬಿರಾರ್ಥಿಗಳು ತಮ್ಮ ಅನುಭವನ್ನು ಹಂಚಿಕೊಂಡರು. ರಾಜೇಶ್ವರಿ ಪಿಲಿಕೂರು ಪ್ರಾರ್ಥನೆಗೈದರು. ನಯನಾ ಕನಕ ಮುಗೇರ್ ಸ್ವಾಗತಿಸಿದರು. ಭಗಿನಿ ರಕ್ಷಿತಾ ವಂದಿಸಿದರು. ಭಗಿನಿ ರೂಪಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.


