ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ತಿಸುತ್ತಿದ್ದ ಮೂವರು ಆರೋಪಿಗಳನ್ನು ಕೊಣಾಜೆ ಪೊಲೀಸರು ಪಟ್ಟೋರಿ ಎಂಬಲ್ಲಿ ಸೋಮವಾರ ಬಂಧಿಸಿದ್ದಾರೆ.
ಮೂಡಬಿದಿರೆ ಅಲಾಂಗರು ನಿವಾಸಿ ರೋಶನ್ ನಿಕೇಶ್ ಮಿನೆಜಸ್(24), ಪಟ್ಟೋರಿ ಮನೆ ನಿವಾಸಿ ಸಿಂಪಲ್ ಕುಮಾರ್ ಹಾಗೂ ಚಿಕ್ಕಮಗಳೂರು ಕೊಪ್ಪದ ಪ್ರಕಾಶ್ ಡಿ’ಸೋಜ ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ.
ಬಂಧಿತರಿಂದ ಒಂದು ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಮನೆಯಲ್ಲಿ ಗಾಂಜಾವನ್ನು ದಾಸ್ತನಿರಿಸಿದ ಮಾಹಿತಿ ಪಡೆದ ಕೊಣಾಜೆ ಪೊಲೀಸರು ಸಿಂಪಲ್ ಕುಮಾರನ ಮನೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.


