ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೆಸಿರೋಡ್: ದೇಶದಲ್ಲಿ ಪ್ರಜಾಪ್ರಭುತ್ವ ಸಿಕ್ಕಿದರೂ ಈಗಲೂ ತುಂಬಾ ಜನ ಬಡತನದಿಂದ ಇದ್ದು, ಈ ನಿಟ್ಟಿನಲ್ಲಿ ನೆಮ್ಮದಿ ಶಾಂತಿ ಐಕ್ಯತೆಯ ವಾತಾವರಣ ನಿರ್ಮಿಸಲು ಎಲ್ಲರೂ ಒಗ್ಗೂಡಿ ಶ್ರಮಿಸಬೇಕಾಗಿದೆ ಎಂದು ಕಾಂಗ್ರೆಸ್ನ ಉಳ್ಳಾಲ ಅಲ್ಪಸಂಖ್ಯಾತ ವಿಭಾಗದ ಕಾರ್ಯದರ್ಶಿ ಇಬ್ರಾಹಿಂ ಕೆಸಿರೋಡ್ ಹೇಳಿದರು.
ಅವರು ಎಸ್,ಎಸ್,ಎಫ್ ಕೆ,ಸಿ.ರೋಡ್ ಯುನಿಟ್ ವತಿಯಿಂದ 25ನೇ ವರ್ಷದ ಅಂಗವಾಗಿ ತಲಪಾಡಿ ಪಟ್ನಾ ಹಿರಿಯ ಪ್ರಾಥಮಿಕ ಶಾಲೆಗೆ ವಾಟÀರ್ ಕೂಲರನ್ನು ಗಣರಾಜೋತ್ಸವದ ಸಂದರ್ಭದಲ್ಲಿ ವಿತರಿಸಿದರು.
ಎಸ್,ಎಸ್,ಎಫ್ ಉಳ್ಳಾಲ ವಿಭಾಗದ ಉಪಾಧ್ಯಕ್ಷ ಮುಸ್ತಾಫ ಝಹರಿ ದುಆ ನೆರವೇರಿಸಿದರು. ಎಸ್,ಎಸ್,ಎಫ್ ಉಳ್ಳಾಲ ವಿಭಾಗದ ಉಪಾಧ್ಯಕ್ಷ ಮುಸ್ತಾಫ ಉಳ್ಳಾಲ್ ಮುಖ್ಯ ಭಾಷಣಗೈದರು. ಶಾಲೆಯ ಮುಖ್ಯೋಪದ್ಯಾಯÀ ಶ್ಯಾಮಲಾ.ಬಿ,ತಲಪಾಡಿ ಪಂಚಾಯತ್ ಸದಸ್ಯರಾದ ಹಸೈನಾರ್,ಇಸ್ಮಾಯಿಲ್ ಖಾದರ್, ಶಾಲಾಬಿವೃದ್ದಿ ಸಮಿತಿಯ ಉಪಾಧ್ಯಕ್ಷ ಇಸ್ಮಾಯಿಲ್, ತಲಪಾಡಿ ವಲಯ ಅಲ್ಪಸಂಖ್ಯಾತ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಸಲಾಂ, ಎಸ್.ಎಸ್.ಎಫ್ ಕೆಸಿರೋಡ್ ಯುನಿಟ್ ಅಧ್ಯಕ್ಷ ಸಬೀರ್,ಉಪಾಧ್ಯಕ್ಷ ಅಲ್ತಾಫ್, ರಿಯಾಝ್, ಸದಸ್ಯರಾದ ಇಸ್ಮಾಯಿಲ್ ಬಿ.ಎಚ್ , ತಲಪಾಡಿ ಸೆಕ್ಟರ್ ಕಾರ್ಯದರ್ಶಿ ಶಿಹಾಬುದ್ದೀನ್ ,ಕೆಸಿರೋಡ್ ಯುನಿಟ್ ಸದಸ್ಯರಾದ ಖಲೀಲ್ ಗುಡ್ಡೆ, ಶಾಹಿದ್ ಪಿ,ಜಿ , ನಾಸೀರ್ ಪಿ,ಜಿ ಉಪಸ್ಥಿತರಿದ್ದರು.
ತಲಪಾಡಿ ಸೆಕ್ಟರ್ ಅಧ್ಯಕ್ಷ ಹಕೀಂ ಪೂಮಣ್ಣು ಸ್ವಾಗತಿಸಿದರು, ಕಾರ್ಯದರ್ಶಿ ಅನ್ವೀಝ್ ಕೆಸಿರೋಡ್ ವಂದಿಸಿದರು.


