ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತಲಪಾಡಿ: ಬಾರ್‍ನಲ್ಲಿ ಕುಡಿದು ಹೊರಬಂದು ನಿಂತಿದ್ದ ವ್ಯಕ್ತಿಗೆ ಅಪರಿಚಿತ ತಂಡವೊಂದು ರೀಪಿನಿಂದ ಹೊಡೆದು ಕೊಲೆಗೆ ಯತ್ನಿಸಿರುವ ಘಟನೆ ತಲಪಾಡಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ತಲಪಾಡಿ ನಿವಾಸಿ ಫ್ರಾನ್ಸಿಸ್ ಡಿಸೋಜಾ ಎಂಬವರು ಬಾರ್ ನಿಂದ ಕುಡಿದು ಬಂದು ರಸ್ತೆಬದಿಯಲ್ಲಿ ನಿಂತಿದ್ದರು. ಈ ವೇಳೆ ಬಾರಿನ ಒಳಗಡೆಯಿಂದ ಬಂದ ಸುಮಾರು 6 ಜನರ ತಂಡ ಅವಾಚ್ಯ ಶಬ್ದಗಳಿಂದ ನಿಂದಿಸಿ ಓರ್ವ ರೀಪಿನಿಂದ ಸಿಕ್ಕ ಸಿಕ್ಕಲ್ಲಿಗೆ ಹೊಡೆಯಲು ಆರಂಭಿಸಿದ್ದಾನೆ. ಬಳಿಕ ಇತರರು ಸೇರಿಕೊಂಡು ಕೈ ಮತ್ತು ಕಾಲುಗಳಲ್ಲಿ ತುಳಿದು ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಫ್ರಾನ್ಸಿಸ್ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈಯಕ್ತಿಕ ದ್ವೇಷದಿಂದ ಘಟನೆ ನಡೆದಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


