ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ವಿದ್ಯಾರ್ಥಿಗಳಲ್ಲಿ ಜ್ಞಾನಾರ್ಜನೆಗೆ ಸುಪ್ತ ಪ್ರತಿಭೆ ಜಾಗೃತವಾಗಬೇಕಿದೆ. ಅದಕ್ಕಾಗಿ ಕ್ರೀಡೆ ಸಹಕಾರಿ ಎಂದು ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಮೊಕ್ತೇಸರ ವೇದಮೂರ್ತಿ ಅನಂತ ಪದ್ಮನಾಭ ಆಸ್ರಣ್ಣ ಹೇಳಿದ್ದಾರೆ.
ಅವರು ತೊಕ್ಕೊಟ್ಟು ಚೆಂಬುಗುಡ್ಡೆಯ ಶ್ರೀ ಉಮಾಮಹೇಶ್ವರೀ ಕಬಡ್ಡಿ ಅಕಾಡೆಮಿ(ಸುಕ) ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಗ್ರಾಮಾಂತರ ಕಬಡ್ಡಿ ಎಸೋಶಿಯೇಶನ್ ಸಹಭಾಗಿತ್ವದಲ್ಲಿ ಶನಿವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ವಿಭಾಗದ ಬಾಲಕ ಬಾಲಕಿಯರ ಕಬಡ್ಡಿ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಸಾಧನೆಗೆ ಕಬ್ಬಡ್ಡಿ ಸ್ಫೂರ್ತಿ. ಆರೋಗ್ಯದ ವಿಚಾರದಲ್ಲಿಯೂ ಪುಷ್ಠಿದಾಯಕವಾಗಿದ್ದು, ವಿದ್ಯೆ ಜತೆಗೆ ಕ್ರೀಡೆ ಅಗತ್ಯ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಮಾತನಾಡಿ ಜಗತ್ತಿನಲ್ಲಿ ವಿಶ್ವಾಸ ಮೂಡುವಲ್ಲಿ ಧರ್ಮ ಜಾತಿ ಮತಬೇಧ ಮರೆತು ಆಡುವ ಹಾಗೂ ನೋಡುವಂತ ಕ್ರೀಡೆ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಅದಕ್ಕಾಗಿ ಕ್ರೀಡೆಗೆ ಎಲ್ಲೆಡೆಯಿಂದ ಪ್ರೋತ್ಸಾಹ ಅಗತ್ಯ ಎಂದು ನುಡಿದರು.
ಬ್ರಹ್ಮಶ್ರೀ ಬಿಲ್ಲವ ಯುವ ವೇದಿಕೆ ಕೇಂದ್ರ ಸಮಿತಿ ಗೌರವಾಧ್ಯಕ್ಷ ಕೆ.ಟಿ. ಸುವರ್ಣ, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲï, ಸುಕ ಗೌರವ ಸಲಹೆಗಾರ ಚಂದ್ರಹಾಸ ಅಡ್ಯಂತಾಯ, ಅಕಾಡೆಮಿ ಚೇರ್‍ಮೆನ್ ಎ. ಜೆ. ಶೇಖರ್, ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಅಕಾಡೆಮಿ ಗೌರವಾಧ್ಯಕ್ಷ , ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ, ಉಪಾಧ್ಯಕ್ಷ ಅನಿಲ್‍ದಾಸ್ ಹಾಗೂ ಗೋಪಾಲ್ ಕುತ್ತಾರು, ಅಂತರಾಷ್ಟ್ರೀಯ ವೈಟ್‍ಲಿಫ್ಟರ್ ಗೀತಾ ಬಾಯಿ, ಅಂತರಾಷ್ಟ್ರೀಯ ಕಬಡ್ಡಿ ಆಟಗಾರ ಉದಯ ಚೌಟ, ನಗರಸಭೆಯ ಸದಸ್ಯ ಬಾಜಿಲ್ ಡಿಸೋಜ, ದಕ್ಷಿಣ ಕನ್ನಡ ಅಮೆಚೂರು ಕಬಡ್ಡಿ ಎಸೋಸಿಯೇಶನ್‍ನ ಕಾರ್ಯಾಧ್ಯಕ್ಷ ರತನ್ ಶೆಟ್ಟಿ, ಸುಕ ಗೌರವ ಸಲಹೆಗಾರ ರಘುರಾಮ ಶೆಟ್ಟಿ, ಮಂಗಳೂರು ಒನ್ ಸ್ಕೂಲ್‍ನ ಪ್ರಾಂಶುಪಾಲೆ ನವ್ಯಾ, ದಕ್ಷಿಣ ಕನ್ನಡ ಕಬಡ್ಡಿ ಅಮೆಚೂರು ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಪೂಜಾರಿ ಉಪಸ್ಥಿತರಿದ್ದರು.
ಸುಕ ಸಂಘಟನಾ ಕಾರ್ಯದರ್ಶಿ ಗಣೇಶ್ ಕಾಪಿಕಾಡ್ ಸ್ವಾಗತಿಸಿದರು. ಶ್ರೀ ಉಮಾಮಹೇಶ್ವರೀ ಕಬಡ್ಡಿ ಅಕಾಡೆಮಿ(ಸುಕ) ಸ್ಥಾಪಕಾಧ್ಯಕ್ಷ ಗೋಪಿನಾಥ್ ಕಾಪಿಕಾಡ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರವೀಣ್ ಎಸ್. ಕುಂಪಲ ಕಾರ್ಯಕ್ರಮ ನಿರೂಪಿಸಿದರು. ಸುಕ ಕೋಶಾ„ಕಾರಿ ದೇವದಾಸ ಶ್ರೀಯಾನ್ ವಂದಿಸಿದರು.







