ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕಿನ್ಯಾ: ಕಿನ್ಯಾ ಗ್ರಾಮ ಪಂಚಾಯತ್ ಸಾಲ ಮನ್ನಾ ತಿಳುವಳಿಕೆ ಪತ್ರ ವಿತರಣಾ ಕಾರ್ಯ ಕ್ರಮ ದಲ್ಲಿ ಕಿನ್ಯಾ ಗ್ರಾಮದಲ್ಲಿ 103 ಫಲಾನುಭವಿಗಳಿಗೆ ತಿಳುವಳಿಕೆ ಪತ್ರವನ್ನು ಪಂಚಾಯತ್ ಅದ್ಯಕ್ಷರಾದ ಶ್ರೀಮತಿ ಮಾಲಿನಿ ಮತ್ತು ಉಪಾದ್ಯಕ್ಷರಾದ ಸಿರಾಜ್ ಕಿನ್ಯಾರವರು ವಿತರಿಸಿದರು.
ಬಳಿಕ ಮಾತನಾಡಿದ ಉಪಾದ್ಯಕ್ಷರಾದ ಸಿರಾಜ್ ಕಿನ್ಯಾ, ಕರ್ನಾಟಕ ರಾಜ್ಯ ಸರಕಾರವು ಆಶ್ರಯ ಯೋಜನೆಯಲ್ಲಿ ಯಾರೆಲ್ಲಾ ಸಾಲ ಪಡೆದಿದ್ದಾರೋ ಅದನ್ನೆಲ್ಲಾ ಮನ್ನಾ ಮಾಡುವ ಮೂಲಕ ತಿಳುವಳಿಕೆ ಪತ್ರವನ್ನು ಸರಕಾರದ ಆದೇಶದ ಮೂಲಕ ಸಾರ್ವಜನಿಕರಿಗೆ ತಳುಪಿಸಿದ್ದೇವೆಂದು ತಿಳಿಸಿದರು.
ಪಂಚಾಯತ್ ಸದಸ್ಯರಾದ ಮೊಹಮ್ಮದ್,ಮಹಾಬಲ ಪೂಂಜ, ಶ್ರೀಮತಿ ಮೈಮೂನಾ,ಪಂಚಾಯತ್ ಅಬಿವೃದ್ದಿ ಅಧಿಕಾರಿ ಕುಮಾರಿ ಪೂರ್ಣಿಮಾ,ಕಾರ್ಯದರ್ಶಿ ಶ್ರೀಮತಿ ಸುರೇಖಾ ,ಗುಮಾಸ್ತರಾದ ಅಶ್ರಫ್,ಸಿಬ್ಬಂದಿ ಚೇತನ್,ಕವಿತಾ,ದಿವ್ಯಾ ಉಪಸ್ಥಿತರಿದ್ದರು.





