ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ವಿದ್ಯಾರ್ಥಿಗಳೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡಿದಾಗ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಹೆತ್ತವರು ಕೇವಲ ಸಂಪತ್ತನ್ನು ಗಳಿಸುವ ಬದಲಿಗೆ ಮಕ್ಕಳನ್ನೇ ಸಂಪತ್ತನ್ನಾಗಿ ಬೆಳೆಸಿದಾಗ ಮುಂದಿನ ದಿನಗಳಲ್ಲಿ ಸದೃಡವಾದ ಸಮಾಜ ನಿರ್ಮಾಣ ಸಾಧ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಅಭಿಪ್ರಾಯಪಟ್ಟರು.
ಅವರು ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಬೈ ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ತಾಳ್ತಜೆ ವಸಂತ ಕುಮಾರ್ ವಹಿಸಿದ್ದರು.
ಈ ಸಂದರ್ಭದಲ್ಲಿ ಬದ್ರಿಯಾ ಕೇಂದ್ರ ಜುಮ್ಮಾ ಮಸೀದಿ ದೇರಳಕಟ್ಟೆ ಇದರ ಧರ್ಮಗುರು ಅಬ್ದುಲ್ ನಾಸೀರ್ ಫೈಝಲ್, ಸಾಮಾಜಿಕ ಮುಂದಾಳು ಟಿ.ಎಸ್. ಅಬ್ದುಲ್ಲಾ, ಸಂಸ್ಥೆಯ ಕೋಶಾಧಿಕಾರಿ ರತ್ನಾವತಿ ಶೆಟ್ಟಿ, ಶಾಲಾ ವಿದ್ಯಾರ್ಥಿ ನಾಯಕ ಚಂದನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಸಂಸ್ಥೆಯ ಆಡಳಿತ ನಿರ್ದೇಶಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ನಯೀಮ್ ಹಮೀದ್ ವರದಿ ವಾಚಿಸಿದರು. ಸಂಸ್ಥೆಯ ಕಾರ್ಯದರ್ಶಿ ಸೌಮ್ಯ ಆರ್. ಶೆಟ್ಟಿ ವಂದಿಸಿದರು. ಶಿಕ್ಷಕ ರವಿ ಕುಮಾರ್ ಕೋಡಿ ಕಾರ್ಯಕ್ರಮ ನಿರ್ವಹಿಸಿದರು.
ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ನಡೆದ ರತ್ನೋತ್ಸವ -2015 ರಲ್ಲಿ ಕವಿನೆನಪು-ಕಾವ್ಯ ನೃತ್ಯ ಕಾರ್ಯಕ್ರಮ ನಡೆಯಿತು.
ಮಂಗಳೂರು ಸರಕಾರಿ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕಿ ಮಂಜುಳ ಶೆಟ್ಟಿಯವರು ಕನ್ನಡ ಕವಿ ಶ್ರೇಷ್ಟರಾದ ಬೇಂದ್ರೆ-ಕುವೆಂಪು-ಕಯ್ಯಾರ ರವರ ಬಗ್ಗೆ ವಿಷಯ ಮಂಡನೆ ಮಾಡಿದರು.
ಡಾ. ಸುಶೀಲ ವಿದ್ಯಾರಣ್ಯ ಕಾವ್ಯ ಗಾಯನ ಮಾಡಿದರು. ವಿದ್ಯಾ ಶ್ರೀ ರಾಧಕೃಷ್ಣ ಬಳಗದವರು ಕಾವ್ಯ ನೃತ್ಯ ಮಾಡಿದರು.
ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ನಡೆದ ರತ್ನೋತ್ಸವ -2015 ರಲ್ಲಿ ಕವಿನೆನಪು- ಯಕ್ಷ ನೃತ್ಯ ಗಾಯನ ಕಾರ್ಯಕ್ರಮ ನಡೆಯಿತು.
ಲೇಖಕ ಭಾಸ್ಕರ್ ರೈ ಕುಕ್ಕುವಳ್ಳಿ ಯಕ್ಷ ಕವಿ ಶ್ರೇಷ್ಠರಾದ ಪಾರ್ತಿ ಸುಬ್ಬ- ಮುದ್ದಣ್ಣ- ಕೆ.ಪಿ. ವೆಂಕಪ್ಪ ಶೆಟ್ಟಿ ರವರ ಬಗ್ಗೆ ವಿಷಯ ಮಂಡನೆ ಮಾಡಿದರು. ತೋನ್ಸೆ ಪುಷ್ಕಳ ಕುಮಾರ್ ಯಕ್ಷಗಾಯನ ಮಾಡಿದರು. ರಾಕೇಶ್ ರೈ ಅಡ್ಕ ಶಿಷ್ಯ ವೃಂದ ಯಕ್ಷ ನೃತ್ಯ ಮಾಡಿದರು.
ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ನಡೆದ ನಾಡು ನುಡಿ ವೈಭವದ ರತ್ನೋತ್ಸವ -2015 ಕರಾವಳಿ ಕರ್ನಾಟಕದ ಸಾಹಿತ್ಯ ಸಾಂಸ್ಕøತಿಕ ಸಮ್ಮೇಳದ ಸಮಾರೋಪ ಸಮಾರಂಭ ಸಮ್ಮೇಳನಾಧ್ಯಕ್ಷ ಮುಂಬೈ ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ತಾಳ್ತಜೆ ವಸಂತ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ ಮಾತನಾಡಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡದ ಕಲರವ ನಿಜವಾಗಿಯೂ ಆಶ್ಚರ್ಯ, ಮತ್ತು ಸಂತೋಷದ ವಿಷಯವಾಗಿದ್ದು, ಈ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿಯಾಗಿದೆ. ವಿದ್ಯಾರ್ಥಿಗಳಲ್ಲಿ ಎಳವೆಯಲ್ಲಿಯೇ ಸಾಹಿತ್ಯಾಭಿಮಾನ ಬೆಳೆದಾಗ ಅವರಲ್ಲಿ ಮತ್ತಷ್ಟು ಜ್ಞಾನ ವಿಕಾಸವಾಗಲು ಸಾಧ್ಯ. ಒಂದು ಕಾಲದಲ್ಲಿ ಏನು ಮೂಲಭೂತ ಸೌಕರ್ಯವಿಲ್ಲದ ಅಭಿವೃದ್ಧಿ ಹೊಂದುತ್ತಿರುವ ದೇರಳಕಟ್ಟೆ ಈಗ ಶಿಕ್ಷಣ ಕಾಶಿಯಾಗಿ ಬೆಳೆಯುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಲೇಖಕ ಭಾಸ್ಕರ್ ರೈ ಕುಕ್ಕುವಳ್ಳಿ, ಉಳ್ಳಾಲ ಚಿರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಬದ್ರಿಯಾ ಕೇಂದ್ರ ಜುಮ್ಮಾ ಮಸೀದಿ ದೇರಳಕಟ್ಟೆ ಇದರ ಅಧ್ಯಕ್ಷ ಕೆ. ಅಬೂಬಕ್ಕರ್ ನಾಟೆಕಲ್, ಸಂಸ್ಥೆಯ ಉಪಾಧ್ಯಕ್ಷ ಮೋಹನ್ದಾಸ್ ಶೆಟ್ಟಿ, ಕೋಶಾಧಿಕಾರಿ ರತ್ನಾವತಿ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯಿನಿ ನಯೀಮ್ ಹಮೀದ್ ಉಪಸ್ಥಿತರಿದ್ದರು.
ಸಂಸ್ಥೆಯ ಆಡಳಿತ ನಿರ್ದೇಶಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿ ಸೌಮ್ಯ ಆರ್. ಶೆಟ್ಟಿ ವಂದಿಸಿದರು. ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.





