ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಎಲ್ಲರೂ ಪ್ರೀತಿ, ವಿಶ್ವಾಸದಿಂದ ಬಾಳುವ ವಾತಾವರಣವನ್ನು ಕ್ರಿಸ್ ಮಸ್ ಹಬ್ಬ ನಿರ್ಮಿಸಲಿ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು.
ತೊಕ್ಕೊಟ್ಟು ಪೆರ್ಮನ್ನೂರಿನ ಸಂತ ಸೆಬೆಸ್ತಿಯನ್ನರ ಚರ್ಚಿನ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿದರು.
ಕ್ರಿಸ್ ಮಸ್ ಹಬ್ಬ ಎಲ್ಲರೂ ಸೇರಿ ಆಚರಿಸುವಂತಹ ಹಬ್ಬವಾಗಿದ್ದು, ಅದರಲ್ಲಿ ಪಾಲ್ಗೊಳ್ಳುವ ಮೂಲಕ ಸಂತೋಷವಾಗಿದೆ. ಹಬ್ಬ ಸೌಹಾರ್ದಯುತ ವಾತಾವರಣವನ್ನು ನಿರ್ಮಿಸಲಿ ಎಂದರು.
ಈ ಸಂದರ್ಭ ಚರ್ಚಿನ ಧರ್ಮಗುರು ಫಾದರ್ ಜೆ.ಬಿ.ಸಲ್ದಾನ್ಹ, ಚಚ್ ್ ಪಾಲನಾ ಸಮಿತಿಯ ಕಾಋಯದರ್ಶಿ ಡೆಮೆಟ್ರಿಯಸ್ ಡಿಸೋಜಾ, ಉಳ್ಳಾಲ ಪುರಸಭೆ ಮಾಜಿ ಅಧ್ಯಕ್ಷ ಬಾಝಿಲ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು. ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಲೇವಸ್ ಡಿಸೋಜಾ ಸಚಿವರಿಗೆ ಕೇಕ್ ನೀಡಿ ಹಬ್ಬದ ಶುಭಾಷಯಗಳನ್ನು ಸಲ್ಲಿಸಿದರು.











