ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ತುಳು ಭಾಷೆಗೆ ಸಂವಿಧಾನದಲ್ಲಿ ಮಾನ್ಯತೆ ಸಿಗದೇ ಇರುವುದು ಬೇಸರದ ವಿಷಯ. ಪ್ರಸ್ತುತ ದಿನಗಳಲ್ಲಿ ತುಳು ಭಾಷೆಯಲ್ಲಿ ಸಾಹಿತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದು, ತುಳು ಸಂಸ್ಕøತಿಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಪಂಚದ ಮೂಲೆಗಳಲ್ಲಿ ತುಳುವರು ಒಟ್ಟಾಗಿ ಕೂಟಗಳನ್ನು ನಡೆಸುತ್ತಿದ್ದು, ಆದರೂ ಭಾಷೆಗೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಎಂ. ಜಾನಕಿ ಬ್ರಹ್ಮಾವರ ಅಭಿಪ್ರಾಯಪಟ್ಟರು.
ಅವರು ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ತುಳು e್ಞÁತಿ ಪದಕೋಶ(ತುಳು, ಕನ್ನಡ, ಕೊಡವ, ಮಲಯಾಳಂ, ತಮಿಳು, ತೆಲುಗು)ದ ಪ್ರಥಮ ಹಂತದ ಕೃತಿಯ ಸಾಂಕೇತಿಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ತುಳು ಭಾಷೆಯ ಗಟ್ಟಿತನ ತೋರಿಸಲು ವಿಶ್ವವಿದ್ಯಾಲಯ, ಅಕಾಡೆಮಿ ಶ್ರಮಿಸಿದರೆ ಸಾಲದು. ತುಳು ಭಾಷೆಯ ಸೊಗಡು ಇನ್ನಷ್ಟು ಅರಿತುಕೊಳ್ಳಲು ತುಳು ಸಾಹಿತ್ಯಗಳನ್ನು ಓದುವ ಕಾರ್ಯ ನಡೆಯಬೇಕಿದೆ.
ಕಳೆದ 18ವರ್ಷಗಳ ಸತತ ಪರಿಶ್ರಮದ ಮೂಲಕ ತುಳು ಭಾಷೆಯಲ್ಲಿ 6 ಸಂಪುಟದ ಬೃಹತ್ ಗಾತ್ರದ ತುಳು ನಿಘಂಟು ರಚಿಸಲಾಗಿದ್ದು ಇನ್ನೂ ಒಂದು ಸಂಪುಟಕ್ಕಾಗುವ ಭಾಷೆಗಳು ಉಳಿದುಕೊಂಡಿದೆ. ಆ ನಿಗಂಟಿನಲ್ಲಿ ಸಿಗುವ ಶಬ್ಧದ ಆಧಾರದಲ್ಲಿ ಸುಮಾರು 20ಕಾದಂಬರಿಗಳನ್ನು ಬರೆಯುವ ಉಲ್ಲಾಸ ಮೂಡಿದೆ. ತುಳು ಭಾಷಾ ಶಬ್ಧಗಳ ಸಾರ ಮಹತ್ವ ಅರಿಯಬೇಕಾದರೆ ಪ್ರತಿಯೊಬ್ಬರಲ್ಲಿ ತುಳು ಭಾಷೆಯ ಮೇಲಿನ ಅಭಿಮಾನ ಜಾಗೃತವಾಗಬೇಕು ಎಂದು ಹೇಳಿದರು.
ಯಾವುದೇ ಭಾಷೆಯಲ್ಲಿ ಮನಸ್ಸಿಗೆ ಹತ್ತಿರವಾದ ಮನಸ್ಸನ್ನು ಬೆಸೆಯುವ ಪ್ರೀತಿಯ ಶಬ್ಧಗಳು ಇದ್ದಾಗ ಭಾಷೆ ಬಹಳ ಬೇಗ ಬೆಳೆಯುತ್ತದೆ. ಅಂತಹ ಶಕ್ತಿ ತುಳು ಭಾಷೆಯಲ್ಲಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಾ„ಪತಿ ಡಾ.ಎಂ. ಶಾಂತಾರಾಮ ಶೆಟ್ಟಿ ಅಭಿಪ್ರಾಯಪಟ್ಟರು.
ತುಳು ಭಾಷಾ ಅಭಿವೃದ್ಧಿಗೆ ತುಳು ಸಾಹಿತ್ಯ ಅಕಾಡೆಮಿಯ ಇದುವರೆಗಿನ ಸಾಧನೆ ಶ್ಲಾಘನೀಯ. ಪ್ರಸ್ತುತ ಮಹಿಳಾ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ತಂಡ ತುಳು e್ಞÁತಿಪದಕೋಶದ ಯೋಜನೆ ಕೈಗೆತ್ತಿಕೊಂಡಿರುವುದು ಸಂತಸದ ವಿಷಯವಾಗಿದ್ದು ಆ ಯೋಜನೆ ಯಶಸ್ವಿಯಾಗಲು ನಿಟ್ಟೆ ವಿವಿ ಸದಾ ಸಹಕಾರ ನೀಡಲಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕುಲಪತಿ ಎಸ್. ರಮಾನಂದ ಶೆಟ್ಟಿ ಹೇಳಿದರು.
ಕಿಟ್ಟೆಲ್ ನಿಘಂಟು, ತಮಿಳು ನಿಘಂಟು, ಮಲಯಾಳಂ ನಿಘಂಟು, ಶಬ್ದ ತಾರಾವಳಿ ಹಾಗೂ ಇತರ ಕೆಲವು ಶಬ್ದಕೋಶದಲ್ಲಿ ಸಾಂದರ್ಭಿಕವಾಗಿ ತುಳುಶಬ್ಧಗಳನ್ನು ಉಲ್ಲೇಖಿಸಲಾಗಿದ್ದು ಭಾಷೆಯ ಬಳಕೆಯ ಆರಂಭ ದಿನಗಳಿಂದಲೂ ಒಂದೇ ಮೂಲಾಂತರದಿಂದ ಭಾಷೆಗಳು ಹರಡಿಹೋಗಿದೆ ಎಂಬುದನ್ನು ಕೆಲವು ಭಾಷೆಗಳ ಶಬ್ಧಗಳ ಮೂಲಕ ತಿಳಿದುಕೊಳ್ಳಲು ಸಾಧ್ಯ ಎಂದು ತುಳು ಭಾಷಾ ವಿದ್ವಾಂಸ ಡಾ. ಪದ್ಮನಾಭ ಕೇಕುಣ್ಣಾಯ ಅವರು ಕೃತಿಯ ಸ್ಥೂಲಚಿತ್ರಣ ನೀಡಿ ಹೇಳಿದರು.
ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಕಮಲಾಕ್ಷ ಕೆ. ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕ್ಷೇಮ ಡೀನ್ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ, ಅಕಾಡೆಮಿ ರಿಜಿಸ್ಟಾ ್ರರ್ ಚಂದ್ರಹಾಸ್ ರೈ, ನಿಟ್ಟೆ ವಿವಿ ಕುಲಸಚಿವ ಡಾ.ಎಂ.ಎಸ್. ಮೂಡಿತ್ತಾಯ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕಿ ಡಾ. ಸಾಯಿಗೀತಾ ಕಾರ್ಯಕ್ರಮ ನಿರೂಪಿಸಿದರು.




