ಕೊಲೆರಾಡೋ: ಅಮೆರಿಕಾದ ಕೊಲೆರಾಡೋ ಜಿಲ್ಲೆಯ ಕುಟುಂಬ ಯೋಜನೆ ಕ್ಲಿನಿಕ್ ಮೇಲೆ ಗನ್ ಮ್ಯಾನ್ ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ 3 ಮಂದಿ ಸಾವನ್ನಪ್ಪಿದ್ದು, 9 ಜನರು ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.

ಈ ಘಟನೆಯಲ್ಲಿ ಒಬ್ಬ ಪೊಲೀಸ್ ಅಧಿಕಾರಿಯೂ ಸೇರಿದಂತೆ ಮೂವರು ಮೃತಪಟ್ಟಿದ್ದು ೧೧ ಜನ ಗಾಯಗೊಂಡಿದ್ದಾರೆ.ಸುಮಾರು 5 ಗಂಟೆಗಳ ಕಾರ್ಯಾಚರಣೆ ಬಳಿಕ ಗನ್ ಮ್ಯಾನ್ ಶರಣಾಗಿದ್ದಾನೆ
ಈ ಗುಂಡಿನ ದಾಳಿಗೆ ನಿಖರ ಕಾರಣಗಳು ಇನ್ನೂ ತಿಳಿದುಬಂದಿಲ್ಲ, ಆದರೆ ‘ಗರ್ಭಪಾತ’ ವಿರೋಧಿ ಧಾರ್ಮಿಕ ವ್ಯಕ್ತಿಯೊಬ್ಬ ಕ್ಲಿನಿಕ್ ಮೇಲೆ ದಾಳಿ ನಡೆಸಿರುವ ಸಾಧ್ಯತೆ ಇದಾಗಿದೆ ಎಂದು ಊಹಿಸಲಾಗಿದೆ.ಬಂಧೂಕು ದಾಳಿಕೋರ ಮತ್ತು ಪೊಲೀಸರ ನಡುವೆ ನಡೆದ ದಾಳಿಯಲ್ಲಿ 5 ಮಂದಿ ಪೊಲೀಸ್ ಅಧಿಕಾರಿಗಳು, ನಾಲ್ವರು ನಾಗರಿಕರು ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮುಖ್ಯ ಅಧಿಕಾರಿ ಪೀಟರ್ ಸುದ್ದಿಗಾರರ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.


