ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ತೊಕ್ಕೊಟ್ಟು ಜಂಕ್ಷನ್ನಲ್ಲಿ ಲಾರಿಯೊಂದು ಕೆಟ್ಟು ನಿಂತ ಪರಿಣಾಮ ರಾಷ್ಟ್ರೀಯ ಹೆದ್ದಾರಿ66 ಸುಮಾರು ಮೂರು ಗಂಟೆಗಳ ಕಾಲ ಸಂಪೂರ್ಣ ಅಸ್ತವ್ಯಸ್ತಗೊಂಡಿತು.
ಕೇರಳ ಕಡೆ ಸಂಚರಿಸುತ್ತಿದ್ದ ಲಾರಿ ತೊಕ್ಕೊಟ್ಟು ಜಂಕ್ಷನ್ನಲ್ಲಿ ಕೆಟ್ಟು ನಿಂತಿದ್ದು, ತೊಕ್ಕೊಟ್ಟಿನಿಂದ ಪಂಪ್ವೆಲ್ವರೆಗೆ ವಾಹನಗಳು ಸರತಿಯಲ್ಲಿ ನಿಂತರೆ, ಇನ್ನೊಂದೆಡೆ ತೊಕ್ಕೊಟ್ಟಿನಿಂದ ಕೊಲ್ಯದವರೆಗೆ ವಾಹನಗಳು ಸರತಿಯಲ್ಲಿ ಕಂಡು ಬಂತು.ತೊಕ್ಕೊಟ್ಟು ಬಸ್ ನಿಲ್ದಾಣಗಳಲ್ಲಿ ಬಸ್ ಸರಿಯಾದ ಸಮಯಕ್ಕೆ ಸಿಗದ ಹಿನ್ನಲೆಯಲ್ಲಿ ಪ್ರಯಾಣಿಕರು ಪರದಾಡುವಂತಾಯಿತು. ಸಂಚಾರ ಅಸ್ತವ್ಯಸ್ತದಿಂದ ಆ್ಯಂಬುಲೆನ್ಸ್ಗಳು ಪರದಾಡುವಂತಾಯಿತು.
ತೊಕ್ಕೊಟ್ಟು ಜಂಕ್ಷನ್ನಲ್ಲಿ ಫ್ಲೈಓವರ್ ಕಾಮಗಾರಿ ನಡೆಯುತ್ತಿರವುದು ಸಂಚಾರ ಅಸ್ತವ್ಯಸ್ತಕ್ಕೆ ಕಾರಣವಾಗುತ್ತಿದ್ದು, ಸೋಮವಾರ ಹಬ್ಬದ ನಿಮಿತ್ತ ಸಂಚಾರ ದಟ್ಟಣೆಯಿಂದಲೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತಕ್ಕೆ ಕಾರಣವಾಯಿತು.




