ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ಮಾನವೀಯ ನೆಲೆಯಲ್ಲಿ ಶುಶ್ರೂಷಕಿಯರು ಸಲ್ಲಿಸುವ ಸೇವೆಯಿಂದ ಎಲ್ಲರ ಬದುಕು ನೆಮ್ಮದಿಯಿಂದ ಕೂಡಿರುತ್ತದೆ. ಅವರನ್ನು ಬದುಕಿನ ಬೆನ್ನುಮೂಳೆ ಎಂದು ಪರಿಗಣಿಸಬೇಕಿದೆ ಎಂದು ಯೇನೆಪೋಯ ವಿಶ್ವವಿದ್ಯಾಲಯದ ಕುಲಾಧಿಪತಿ ಯೇನೆಪೋಯ ಅಬ್ದುಲ್ಲ ಕುಂಞÂ ಅಭಿಪ್ರಾಯಪಟ್ಟರು.
ಅವರು ಶನಿವಾರ ದೇರಳಕಟ್ಟೆಯ ಯೇನೆಪೋಯ ವಿಶ್ವವಿದ್ಯಾಲಯದ ಅಂಗ ಸಂಸ್ಥೆ ಯೇನೆಪೋಯ ಶುಶ್ರೂಷಾ ಕಾಲೇಜು ಹಾಗೂ ಸೊಸೈಟಿ ಆಫ್ ಮಿಡ್ವೈವ್ಸ್ ಇಂಡಿಯಾ ಜಂಟಿ ಆಶ್ರಯದಲ್ಲಿ ಯೇನೆಪೋಯ ಒಳಾಂಗಣ ಆಡಿಟೋರಿಯಂನಲ್ಲಿ ಎರಡು ದಿನ ನಡೆಯಲಿರುವ 12ನೆಯ ಭಾರತ ಶುಶ್ರೂಷಕಿಯರ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ತಾಯಿಯ ಗರ್ಭಾವಸ್ಥೆಯಿಂದ ಮೊದಲ್ಗೊಂಡು ಮಗುವಿನ ಜನನ ಆರೈಕೆ ಬೆಳವಣಿಗೆ ಎಲ್ಲ ಬಗೆಯಲ್ಲೂ ನಮ್ಮ ಬದುಕಿನುದ್ದಕ್ಕೂ ಅವರ ಸೇವೆ ಲಭಿಸುವುದರಿಂದ ಹಾಗೂ ವೃತ್ತಿಯುದ್ದಕ್ಕೂ ಮಾನವೀಯ ಸೇವೆಗೈಯ್ಯುವುದರಿಂದ ಸಮಾಜದಲ್ಲಿ ಶ್ರೇಷ್ಠ ಸ್ಥಾನದಲ್ಲಿ ಶುಶ್ರೂಷಕಿಯರು ನಿಲ್ಲುತ್ತಾರೆ. ಅವರಿಗೆ ಸಲ್ಲಬೇಕಾದ ಗೌರವ ಅಪಾರ ಎಂದರು.
ಸೊಸೈಟಿ ಆಫ್ ಮಿಡ್ವೈವ್ಸ್ ಇಂಡಿಯಾ (ಸೋಮಿ) ಅಧ್ಯಕ್ಷೆ ಡಾ. ಬಂದನಾ ದಾಸ್ ಮಾತನಾಡಿ ಮಹಿಳೆ ಗರ್ಭಿಣಿಯಾದಂದಿನಿಂದ ಮಗುವಿನ ಬೆಳವಣಿಗೆ ತನಕ ಆರೈಕೆ ಸವಾಲಾಗಿದ್ದು ಎಲ್ಲೂ ಕೂಡಾ ನಿರ್ಲಕ್ಷ್ಯ ತಾಳಬಾರದು. ದೇಶದಲ್ಲಿ ನಿರ್ಲಕ್ಷ್ಯದಿಂದಲೇ ದಿನವೊಂದರಲ್ಲಿ 10 ಸಾವಿರಕ್ಕೂ ಅಧಿಕ ಮಹಿಳೆಯರು ಸಾವು, ನೋವಿಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಕಾಳಜಿ ವಹಿಸಿ ಕರ್ತವ್ಯ ನಿಭಾಯಿಸುವುದು ಶುಶ್ರೂಷಕಿಯರ ಆದ್ಯ ಕರ್ತವ್ಯ ಎಂದರು.
ಸಮ್ಮೇಳನದಲ್ಲಿ ತಾಯಿ ಹಾಗೂ ನವಜಾತ ಶಿಶುವಿನ ತ್ವಚೆ ಸ್ಥಿತಿ, ನಾಳೆಗಾಗಿ ಶುಶ್ರೂಷಿಕಿಯರು ತೊಡಗಿಸಿಕೊಂಡ ಬಗೆ, ಸಿದ್ಧತೆ ಕುರಿತು ಚರ್ಚಿಸಲಾಯಿತು. ಬಳಿಕ ವೈe್ಞÁನಿಕ ಪ್ರಬಂಧ ಹಾಗೂ ಫೋಸ್ಟರ್ ಮಂಡಿಸಲಾಯಿತು. ಸಮ್ಮೇಳನದಲ್ಲಿ ದೇಶ ವಿದೇಶದಿಂದ ಆಗಮಿಸಿದ ಸುಮಾರು 250 ಪ್ರತಿನಿಧಿಗಳು ಭಾಗವಹಿಸಿದ್ದರು.
ಯೇನೆಪೋಯ ವಿವಿ ಉಪ ಕುಲಪತಿ ಡಾ. ವಿಜಯ್ ಕುಮಾರ್ ಅಭಿನಂದನಾ ಭಾಷಣ ಮಾಡಿದರು. ಇದೇ ಸಂದರ್ಭ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.
ಕಾರ್ಯದರ್ಶಿ ಲೆಫ್ಟಿನೆಂಟ್ ಕರ್ನಲ್ ಮನೋನ್ಮನಿ ವೆಂಕಟ್ , ಡಾ. ಡೆಬ್ರ ಬಿಖ್ ಉಪಸ್ಥಿತರಿದ್ದರು.
ಸೋಮಿ ಸ್ಥಾಪಕಾಧ್ಯಕ್ಷೆ ಡಾ. ಪ್ರಸನ್ನಮ್ಮ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಮ್ಮೇಳನಾ ಸಂಘಟನಾ ಅಧ್ಯಕ್ಷೆ, ಯೇನೆಪೋಯ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಡಾ. ಆಶಾ ಪಿ. ಶೆಟ್ಟಿ ಸ್ವಾಗತಿಸಿದರು. ಪೆÇ್ರಫೆಸರ್ ಉಮಾರಾಣಿ ಜೆ ವಂದಿಸಿದರು. ಜೋಸ್ಮಿತಾ ಮರಿಯಾ ಡಿಸೋಜ ಹಾಗೂ ಸಾಯ್ಯೇದ್ ಇಮ್ರಾನ್ ಕಾರ್ಯಕ್ರಮ ನಿರೂಪಿಸಿದರು.





