ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮುಡಿಪು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಇದರ “ಸಂಸ್ಥಾಪನಾ ದಿನಾಚಾರಣೆಯನ್ನು ಸೈಕಲ್ ಜಾಥಾದ ಮುಖಾಂತರ ಶನಿವಾರ ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ಸೈಕಲ್ ಜಾಥಾವನ್ನು ಮುಖ್ಯೋಪಾಧ್ಯಾಯರಾದ ಕೆ. ರವೀಂದ್ರ ರೈಯವರು ಉದ್ಘಾಟಿಸಿ ಸಂಸ್ಥಾಪನಾ ದಿನಾಚರಣೆಯಾದ ಇಂದು ಸ್ಕೌಟ್ಸ್ ಚಳುವಳಿಯ ಮುಖ್ಯ ಧ್ಯೇಯವಾದ ಸೇವೆ, ನಿಷ್ಠೆ, ಒಗ್ಗಟ್ಟು ಮುಂತಾದ ಗಣಗಳನ್ನು ಪ್ರತಿಯೊಬ್ಬರು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಭವ್ಯ ಪ್ರಜೆಯಾಗಿ ಬಾಳಬೇಕು ಎಂದರು. ಸೈಕಲ್ ಜಾಥಾವು ಹರೇಕಳದಿಂದ ಹೊರಟು ನ್ಯೂಪಡ್ಪು, ಗ್ರಾಮಚಾವಡಿ ಮಾರ್ಗವಾಗಿ ಹೊರಟು ಪುನಃ ಹರೇಕಳದಲ್ಲಿ ಪೂರ್ಣಗೊಳಿಸಲಾಯಿತು.
ಪ್ರಾಸ್ತಾವಿಕವಾಗಿ ದಿನದ ಮಹತ್ವದ ಬಗ್ಗೆ ಸ್ಕೌಟ್ ಮಾಸ್ಟರ್ ತ್ಯಾಗಂ ಹರೇಕಳ ಅವರು ಮಾಹಿತಿ ನೀಡಿದರು ಹಾಗೂ ಶಿಕ್ಷಕರುಗಳಾದ ಉಷಾಲತ, ರವಿಶಂಕರ್, ಕೃಷ್ಣಶಾಸ್ತ್ರಿ, ವಸಂತ್, ಮೋಹಿನಿ, ಕುಮುದ, ಶಿವಕುಮಾರ್, ನೂತನ, ಮೋಹನ್ ಹಾಗೂ ದುರ್ಗಾಪ್ರಸಾದ್ ಉಪಸ್ಥಿತರಿದ್ದರು.
ಸಂಘಟನಾ ಕಾರ್ಯದರ್ಶಿಗಳಾದ ದಳದ ಲೀಡರ್‍ಳಾದ ನಿತೀಶ್ ಕುಮಾರ್ ಹಾಗೂ ಲಕ್ಷ್ಮೀತ ರವರು ಉಪಸ್ಥಿತರಿದ್ದರು.


