ಬ್ಯಾಂಕ್ ಆಫ್ ಬರೋಡ ಪ್ರವರ್ತಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಹಾಗೂ ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಹಾಗೂ ಸಣ್ಣ ಕೈಗಾರಿಕ ಸಂಘದ ಮಹಿಳಾ ವಿಭಾಗ ಯೆಯ್ಯಾಡಿ ಇವರ ಜಂಟಿ ಆಶ್ರಯದಲ್ಲಿ 3 ತಿಂಗಳ ಟೈಲರಿಂಗ್ ತರಬೇತಿಯ ಸಮಾರೋಪ ಸಮಾರಂಭ ಜಿಲ್ಲಾ ಸಣ್ಣ ಕೈಗಾರಿಕ ಸಂಘದ ಸಭಾಂಗಣದಲ್ಲಿ ನಡೆಯಿತು.

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಆಡಳಿತ ಮಂಡಳಿ ಸದಸ್ಯರಾದ ರವೀಂದ್ರ ಬಲ್ಲಾಳ್ ತರಬೇತಿ ಪಡೆದ ಮಹಿಳೆಯರ ಆಸಕ್ತಿಯನ್ನು ಪ್ರಶಂಸಿಸಿ “ಟೈಲರಿಂಗ್ ಎಂಬುದು ಯಾವಾಗಲೂ ಬೇಡಿಕೆಯಲ್ಲಿ ಇರುವ ಉದ್ಯೋಗವಾಗಿದ್ದು ಮಹಿಳೆಯರು ಮನೆಯಲ್ಲಿ ಸ್ವ ಉದ್ಯೋಗ ಮಾಡಿ ಸಂಪಾದನೆ ಮಾಡಬಹುದು, ಕೌಶಲ್ಯ ಮಹಿಳೆಯರಿಗೆ ತನ್ನ ಕುಟುಂಬದಲ್ಲಿ ಸ್ವಂತ ಗುರುತನ್ನು ನೀಡಿ ಮಾನಸಿಕ ಶಕ್ತಿ ನೀಡಬಲ್ಲದು” ಎಂದರು.ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀ ಜೀವನ್ ಕೊಲ್ಯ ಮಾತಾಡುತ ಮಹಿಳೆಯರು ತಮ್ಮ ಆಸಕ್ತಿಯಿಂದ ವಿನೂತನ ರೀತಿಯ ವಸ್ತ್ರ ವಿನ್ಯಾಸ ಮಾಡಿ ಸ್ವ ಉದ್ಯೋಗ ಮಾಡಲು ಇರುವ ಬೇರೆ ಬೇರೆ ಅವಕಾಶಗಳ ಬಗ್ಗೆ ತಿಳಿಸಿ ಅದನ್ನು ಸದ್ಬಳಕೆ ಮಾಡಲು ಕರೆನೀಡಿದರು. ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾದ ಜ್ಯೋತಿರಾಜ್ ಮಾತಾಡುತ ತರಬೇತಿ ನಂತರ ಯಾವ ರೀತಿ ಉದ್ಯೋಗ ಮಾಡಲು ಸಾಧ್ಯವಿದೆ, ಕೌಶಲ್ಯ ಕಲಿತು ಅದನ್ನು ಮರೆಯದೇ ಗುಂಪು ಚಟುವಟಿಕೆ ಮಾಡುವ ಬಗ್ಗೆ ತಿಳಿಸಿದರು. ಜಿಲ್ಲಾ ಸಣ್ಣ ಕೈಗಾರಿಕ ಸಂಘದ ಅಧ್ಯಕ್ಷರಾದ ಕುಸುಮಾ ದೇವಾಡಿಗ, ಮಹಿಳಾ ವಿಭಾಗದ ಅಧ್ಯಕ್ಷರಾದ ದುರ್ಗಾ P ನಾಯಕ್ , ಸಂಪನ್ಮೂಲ ವ್ಯಕ್ತಿ ವಾಣಿಶ್ರೀ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸ್ವ ಉದ್ಯೋಗ ತರಬೇತಿ ಪಡೆದ ಮಹಿಳೆಯರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ರೀಟಾ d ಸೋಜಾ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ, ಜಯಲಕ್ಷ್ಮೀ ಧನ್ಯವಾದಗೈದರು. ಯೆಯ್ಯಾಡಿ ಹಾಗೂ ಸುತ್ತಮುತ್ತಲ ಗ್ರಾಮದ ಸುಮಾರು 25 ಮಹಿಳೆಯರು ತರಬೇತಿಯಲ್ಲಿ ಯಶಸ್ವಿಯಾಗಿ ಭಾಗವಹಿಸಿ ಪ್ರಮಾಣಪತ್ರ ಪಡೆದರು.

