ಬೆಂಗಳೂರು: ಇದೇ ನವೆಂಬರ್ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಲಿದ್ದು, ಬಹುನಿರೀಕ್ಷಿತ ಪಿಂಕ್ ಲೈನ್ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಈ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಅವರು ಮಾಹಿತಿ ನೀಡಿದ್ದಾರೆ. ಇಂದು (ಅಕ್ಟೋಬರ್ 28) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ನವೆಂಬರ್ 15ರಂದು ಬೆಂಗಳೂರಿಗೆ ಪ್ರಧಾನಿಗಳು ಆಗಮಿಸಲಿದ್ದು, ಪಿಂಕ್ ಮೆಟ್ರೋ ರೈಲು ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಇದೇ ವೇಳೆ ರಾಜ್ಯ ಸರ್ಕಾರವು ಬರ ಪರಿಹಾರ ನಿಧಿ ಬಿಡುಗಡೆ ಕುರಿತು ಪ್ರಧಾನಿಯವರೊಂದಿಗೆ ಚರ್ಚಿಸಲು ಸರ್ವಪಕ್ಷ ನಿಯೋಗದ ಭೇಟಿಗೆ ಸಮಯಾವಕಾಶ ಕೇಳುತ್ತೇನೆ ಎಂದು ಹೇಳಿದ್ದಾರೆ.

ಪಿಂಕ್ ಮೆಟ್ರೋ ರೈಲು ಉದ್ಘಾಟನೆ
ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 15ರಂದು ಬೆಂಗಳೂರಿಗೆ ಆಗಮಿಸಲಿದ್ದು, ಬಹುನಿರೀಕ್ಷಿತ ಪಿಂಕ್ ಲೈನ್ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಇದರೊಂದಿಗೆ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗ ಪಿಂಕ್ ಮೆಟ್ರೋ ಸಂಚಾರಕ್ಕೆ ಕೌಂಡ್ ಡೌನ್ ಶುರುವಾಗಿದೆ. ಪಿಂಕ್ ಮೆಟ್ರೋ ಮಾರ್ಗ ಕಾಳೇನ ಅಗ್ರಹಾರ ದಿಂದ ನಾಗವಾರದವರೆಗೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗವೂ ಒಟ್ಟು ಉದ್ದ ಸುಮಾರು 21.25 ಕಿ.ಮೀ ಇದ್ದು, ಒಟ್ಟು 18 ನಿಲ್ದಾಣಗಳಿದೆ.
ಸದ್ಯ 7.5 ಕಿ.ಮೀ. ಎತ್ತರಿಸಿದ ಮಾರ್ಗ ಉದ್ಘಾಟನೆಗೆ ಸಿದ್ಧವಾಗಿದ್ದು, ಈ ಎಲಿವೇಟೆಡ್ ಮೆಟ್ರೋ ಮಾರ್ಗವನ್ನು ಪ್ರಧಾನಿಗಳು ಉದ್ಘಾಟನೆ ಮಾಡಲಿದ್ದಾರೆ. ಉಳಿದ 13.76 ಕಿ.ಮೀ. ಸುರಂಗ ಮಾರ್ಗ ಕಾಮಗಾರಿಯಲಿದ್ದು, ಈ ಮಾರ್ಗ ಮುಂದಿ ವರ್ಷ ಉದ್ಘಾಟನೆ ಆಗುವ ಸಾಧ್ಯತೆ ಇದೆ. ಡೈರಿ ಸರ್ಕಲ್ನಿಂದ ನಾಗವಾರ, ಶಿವಾಜಿನಗರ ಹಾಗೂ ಕಂಟೋನ್ಮೆಂಟ್ ಮೂಲಕ ನಾಗವಾರ ವರೆಗೂ ಸಂಪರ್ಕ ಕಲ್ಪಿಸಲಿದೆ.
ದೇಶದ 2ನೇ ಅತೀ ಉದ್ದ ಮೆಟ್ರೋ ಮಾರ್ಗ
ಪಿಂಕ್ ಲೈನ್ ಉದ್ಘಾಟನೆ ಮೂಲಕ ನಮ್ಮ ಮೆಟ್ರೋ ಸಂಚಾರದ ಒಟ್ಟು ಕಾರ್ಯಾಚರಣೆಯ ಉದ್ದ 100 km ದಾಟಲಿದೆ. ಸದ್ಯ 96.1 ಕಿಮೀ ಮೆಟ್ರೋ ಮಾರ್ಗ ಇದ್ದು, ಪಿಂಕ್ ಮೆಟ್ರೋ ಮಾರ್ಗ ಉದ್ಘಾಟನೆ ಮೂಲಕ ಮೆಟ್ರೋ ಜಾಲ 100 ಕಿಮೀ ವಿಸ್ತರಣೆಯಾಗಲಿದೆ. ಇದರೊಂದೊಗೆ ದೆಹಲಿ ಬಿಟ್ಟರೆ ದೇಶದ 2ನೇ ಅತೀ ಉದ್ದ ಮೆಟ್ರೋ ಮಾರ್ಗ ಎಂಬ ಹೆಗ್ಗಳಿಕೆಗೆ ನಮ್ಮ ಮೆಟ್ರೋ ಪಾತ್ರವಾಗಲಿದೆ.

