ಉಳ್ಳಾಲ : ಕರ್ನಾಟಕ ಗಮಕ ಕಲಾ ಪರಿಷತ್ ರಾಜ್ಯ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ನಡೆಸುತ್ತಿರುವ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸುವ ನೆಲೆಯಲ್ಲಿ ತಾಲೂಕು ಘಟಕಗಳ ರಚನೆಗೆ ಗಮನ ಹರಿಸಿದೆ. ಪರಿಷತ್ತಿನ ಜಿಲ್ಲಾಧ್ಯಕ್ಷ ಮಧೂರು ಮೋಹನ್ ಕಲ್ಲೂರಾಯ ಸಮಿತಿಯ ನಿರ್ಣಯದಂತೆ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷರಾಗಿ ಸಂಗೀತ ಕಲಾವಿದ, ಹರಿದಾಸ,ಗಮಕಿ ತೋನ್ಸೆ ಪುಷ್ಕಳ ಕುಮಾರ್ ಅವರು ಆಯ್ಕೆ ಗೊಂಡರು.


ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಪಂಜಾಳ ಗಣೇಶ್ ಭಟ್ ಗೌರವಾಧ್ಯಕ್ಷರಾಗಿರುತ್ತಾರೆ. ಪ್ರಧಾನ ಕಾರ್ಯದರ್ಶಿಯಾಗಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥ ಡಾ. ಪ್ರವೀಣ ಪದ್ಯಾಣ, ಉಪಾಧ್ಯಕ್ಷರಾಗಿ ಗುಣಾಜೆ ರಾಮಚಂದ್ರ ಭಟ್, ಡಾ.ಅರುಣ್ ಉಳ್ಳಾಲ್, ಖಜಾಂಚಿಯಾಗಿ ಲೋಕನಾಥ ರೈ, ಜೊತೆ ಕಾರ್ಯದರ್ಶಿಗಳಾಗಿ ವಿಜಯಲಕ್ಷ್ಮಿ ಕಟೀಲು, ಶ್ರೀಮತಿ ಮಂಜುಳಾ ರಾವ್ ಇರಾ ನೇಮಕಗೊಂಡರು. ಕಾರ್ಯಕಾರಿ ಸಮಿತಿಗೆ ರಾಜಾರಾಮ ಹೊಳ್ಳ,
ಸದಾಶಿವ ಆಳ್ವ ತಲಪಾಡಿ, ನಾರಾಯಣ ಕಜೆ, ದೀವಿತ್ ಎಸ್ ಕೆ, ದೇವಿಪ್ರಸಾದ್ ಆಳ್ವ, ಎಡ್ವರ್ಡ್ ಲೋಬೊ, ಯಶಸ್ ಭಟ್, ವೇದಾವತಿ, ಅವರನ್ನು ಆಯ್ಕೆ ಮಾಡಲಾಯಿತು. ಘಟಕದ ಗೌರವ ಸಲಹೆಗಾರರಾಗಿ ವಿಶ್ವವಿದ್ಯಾನಿಲಯದ ಎಸ್ ವಿ ಪಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ಧನಂಜಯ ಕುಂಬಳೆ, ದೇರಳಕಟ್ಟೆ ವಿದ್ಯಾರತ್ನ ಶಿಕ್ಷಣ ಸಂಸ್ಥೆ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ತಲಪಾಡಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ. ವಿಶ್ವನಾಥ್ ಶೆಟ್ಟಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಸಮಿತಿಯ ಪ್ರಕಟಣೆ ತಿಳಿಸಿದೆ.


