ಮಕ್ಕಳಲ್ಲಿ ಧಾರ್ಮಿಕ ಹಾಗೂ ನೈತಿಕ ಮೌಲ್ಯ ಬೆಳೆಸುವ ಮಹತ್ವದ ಹೆಜ್ಜೆಧರ್ಮವೆಂದರೆ ಕೇವಲ ಆಚರಣೆಗಳಲ್ಲ…ಧರ್ಮವೆಂದರೆ ನೀತಿ, ಸಂಸ್ಕಾರ, ಮಾನವೀಯತೆ ಮತ್ತು ಉತ್ತಮ ಬದುಕಿನ ಮಾರ್ಗದರ್ಶನ.ಇಂತಹ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕಬಕದಲ್ಲಿ ಧರ್ಮಶಿಕ್ಷಣದ ಉದ್ಘಾಟನಾ ಸಮಾರಂಭ ಇಂದು ಕಬಕ ಶ್ರೀ ಮಹಾದೇವಿ ಕಲಾಮಂದಿರದಲ್ಲಿ ನಡೆಯಿತು.ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಶ್ರೀ ವಿದ್ಯಾಶಂಕರ ಭಾರತೀ ಸನ್ನಿಧಾನಂಗಳ ಮಾರ್ಗದರ್ಶನದಲ್ಲಿ,ಧರ್ಮ ಶಿಕ್ಷಣ ಗ್ರಾಮ ಸಮಿತಿ, ಕಬಕ ವತಿಯಿಂದ ಈ ಧರ್ಮಶಿಕ್ಷಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಬಕದ ಶ್ರೀ ಮಹಾದೇವಿ ಕಲಾ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧರ್ಮಶಿಕ್ಷಣದ ಅಗತ್ಯತೆ, ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ಮಹತ್ವ ಹಾಗೂ ಭಾರತೀಯ ಸಂಸ್ಕೃತಿ–ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕುರಿತು ವಿಶೇಷವಾಗಿ ಒತ್ತು ನೀಡಲಾಯಿತು.ಕಾರ್ಯಕ್ರಮಕ್ಕೆ ಗೌರವಾಧ್ಯಕ್ಷರಾಗಿ ಶ್ರೀ ಸತೀಶ್ ರಾವ್,ಉದ್ಘಾಟಕರಾಗಿ ಶ್ರೀಮತಿ ಶಾರದಾ ಸುಬ್ರಹ್ಮಣ್ಯ ಭೈಪದವುಮುಖ್ಯ ಅತಿಥಿಗಳಾಗಿ ಧರ್ಮಭ್ಯೋದಯ ಧರ್ಮಶಿಕ್ಷಣ ಕ್ಷೇತ್ರದ ತಾಲೂಕು ಸಮಿತಿ ಸಂಚಾಲಕರು ಸುಬ್ರಹ್ಮಣ್ಯ ನಟ್ಟೋಜ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಭೋರ್ಕರ್, ಶ್ರೀ ಮಹಾದೇವಿ ಧರ್ಮ ಸೇವಾ ವಿಶ್ವಸ್ಥ ಮಂಡಳಿ ಕಬಕ ಇದರ ಅಧ್ಯಕ್ಷರು ವಿ. ಚಂದ್ರಶೇಖರ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಾಲೂಕು ಸಮಿತಿಯ ಹಲವು ಗಣ್ಯರು, ಧರ್ಮ ಶಿಕ್ಷಣ ನೀಡುವ ಶಿಕ್ಷರಾದ ಅಕ್ಷತಾ ಬೈಪಾದವು, ಉಷಾ ದೇವಸ್ಯ, ಮೋಹಿನಿ ಜೇಡರಕೊಡಿ, ರುಕ್ಮಯ ಗೌಡ ಪೋಳ್ಯ, ಕವಿತಾ ಕಬಕ ಬೈಲು, ಸುನಿತಾ ಅಡ್ಯಾಲು, ಜತ್ತಪ್ಪ ಗೌಡ ಅಡ್ಯಾಲು, ನೇಹಾ ಕಲ್ಲಂದ, ರೇಷ್ಮಾ ನೆಕ್ಕರೆ, ಸರಸ್ವತಿ ವಡ್ಯ ಹಾಗೂ ಕಬಕ ಮತ್ತು ಕುಳ ಗ್ರಾಮದ ಹಿಂದೂ ಭಾಂದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಧರ್ಮ ಶಿಕ್ಷಣ ಗ್ರಾಮ ಸಮಿತಿ ಅಧ್ಯಕ್ಷರಾದ ಧರ್ನಪ್ಪ ಸೀಗೆತ್ತಾಡಿ ಸ್ವಾಗತಿಸಿದರು, ಕವಿತಾ ಗಣೇಶ್ ಕಬಕ ಬೈಲು ಕಾರ್ಯಕ್ರಮ ನಿರೂಪಿಸಿದರು, ಧರ್ಮ ಶಿಕ್ಷಣ ಗ್ರಾಮ ಸಮಿತಿಯ ಸಂಚಾಲಕರು ಜಯರಾಮ್ ನೆಕ್ಕರೆ ವಂದಿಸಿದರು


