ಉಳ್ಳಾಲ: ಎಸ್ಐಆರ್ ವಿರುದ್ಧ ಯುವ ಕಾಂಗ್ರೆಸ್ನಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಉಳ್ಳಾಲ, ಯುವ ಕಾಂಗ್ರೆಸ್ ಸಮಿತಿ ಮಂಗಳೂರು ವಿಧಾನಸಭಾ ಕ್ಷೇತ್ರ ಇದರ ಆಶ್ರಯದಲ್ಲಿ ಜನತಂತ್ರ ರಕ್ಷಣೆಗಾಗಿ, ಎಸ್ ಐಆರ್ ವಿರುದ್ಧ ಹಾಗೂ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ತೊಕ್ಕೊಟ್ಟು ಬಸ್ ತಂಗುದಾಣ ಬಳಿ ನಡೆಯಿತು.

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಮತಾ ಗಟ್ಟಿ ಪ್ರತಿಭಟನೆ ಯನ್ನು ಉದ್ದೇಶಿಸಿ ಮಾತನಾಡಿ, ಕೋಟ್ಯಂತರ ಮತದಾರರನ್ನು ಮತದಾರರ ಪಟ್ಟಿ ಯಿಂದ ಅಳಿಸುವ ಕಾರ್ಯಕ್ಕೆ ಚುನಾವಣಾ ಆಯೋಗ ಕೈ ಹಾಕಿದೆ. ಪದ್ಮಶ್ರೀ ಪುರಸ್ಕೃತ ಹಾಜಬ್ಬರಿಗೆ ನೋಟೀಸು ಮಾಡುವ ಸ್ಥಿತಿ ಬಂದರೆ ದೇಶದ ಯಾರನ್ನೂ ಬಿಡಲಾರರು ಎಂಬ ಸ್ಥಿತಿ ಒದಗಿದೆ.ಇಡೀ ದೇಶದ ಪ್ರಜೆಗಳಿಗಾಗಿ ಮಾಡುತ್ತಿರುವ ಪ್ರತಿಭಟನೆ ಇದಾಗಿದೆ.ಚುನಾವಣಾ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ಕೊಡಲೇ ನೀಡಬೇಕು ಎಂದು ಆಗ್ರಹಿಸಿದರು.
ನಮ್ಮ ದೇಶದಲ್ಲಿ ಆಗುವ ಮತಗಳ್ಳತನ, ಅನ್ಯಾಯದಿಂದ ಬೇಸತ್ತ ದೇಶದ ಜನರು ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಟಿ ಎನ್ ಶೇಷನ್ ಚುನಾವಣಾ ಅಧಿಕಾರಿ ಆಗಿದ್ದ ಸಂದರ್ಭದಲ್ಲಿ ಮತದಾರರ ಪಟ್ಟಿ ಕ್ರಮ ಬದ್ಧ ಆಗಿತ್ತು. ಈಗ ಸರ್ಕಾರ ಮತದಾರರ ಪಟ್ಟಿ, ಮತದಾನ ದ ವಿಚಾರದಲ್ಲಿ ನೂರಾರು ಕಾನೂನು ಜಾರಿ ಮಾಡಿ ಹಾಳು ಮಾಡಿದೆ ಎಂದು ಆರೋಪಿಸಿದರು.
ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಮಾತನಾಡಿ, ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್ ಮೇಲೆ ಕಣ್ಣಿಟ್ಟಿದೆ. ಇದಕ್ಕಾಗಿ ಎಸ್ ಐಆರ್ ಜಾರಿ ಮಾಡಿ ಮತದಾನ ಕಸಿಯಲು ಶುರು ಮಾಡಿದೆ ಎಂದು ಆರೋಪಿಸಿದರು.
ಕೋಟ್ಯಂತರ ಮತದಾರರನ್ನು ಪಟ್ಟಿಯಿಂದ ಹೊರ ತೆಗೆದು ಕೇಂದ್ರ ಅನ್ಯಾಯ ಎಸಗಿದೆ.ಇದು ಬಿಜೆಪಿ ಮತ್ತು ಆರೆಸ್ಸೆಸ್ ನ ಕುತಂತ್ರ ಆಗಿದೆ. ಓಟು ಚೋರಿ ನೀತಿ ಅನುಸರಿಸುತ್ತಿರುವ ಜ್ಞಾನೇಶ್ ಕುಮಾರ್ ಅವರನ್ನು ಬಂಧಿಸಬೇಕು, ಇಲ್ಲದಿದ್ದರೆ ವಜಾ ಮಾಡಬೇಕು. ಇಲ್ಲದಿದ್ದರೆ ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
3 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಬೋಳಿಯಾರ್, ಮುಡಿಪು ಬ್ಲಾಕ್ ಅಧ್ಯಕ್ಷ ಪ್ರಶಾಂತ್ ಕಾಜವ, ಮಮತಾ ಗಟ್ಟಿಮನ್ಸೂರ್ ಮಂಚಿಲ, ರಝಿಯಾ ಇಬ್ರಾಹಿಂ,ಮುಸ್ತಫಾ ಹರೇಕಳ, ಫಿರೋಝ್ ಮಲಾರ್ ಬಾಜಿಲ್ ಡಿಸೋಜ, ನಾಸೀರ್ ಅಹ್ಮದ್ ಸಾಮಣಿಗೆ,ವಿವೇಕಾನಂದ ಎಸ್ ಸನಿಲ್, ರಝಾಕ್ ಕುಕ್ಕಾಜೆ,ಅಬ್ದುಲ್ ಸಲಾಮ್ ಉಚ್ಚಿಲ,ರಫೀಕ್ ಅಂಬ್ಲಮೊಗರು, ಆಸೀಫ್ ಸಾಮಣಿಗೆ,ನವಾಝ್ ನರಿಂಗಾನ, ಪ್ರಕಾಶ್ ಪಿಂಟೋ, ರವೂಫ್ ದೇರಳಕಟ್ಟೆ, ರಹ್ಮಾನ್ ಮುಡಿಪು, ಸತ್ತಾರ್ ಕೆಸಿರೋಡ್, ಸಮೀರ್ ಪಜೀರ್, ಪವನ್ ರಾಜ್, ಸೈಫುಲ್ಲಾ ಸೋಮೇಶ್ವರ, ಇಕ್ಸಾಲ್ ಎಚ್ ಆರ್,ದೇರಳಕಟ್ಟೆ, ಜಬ್ಬಾರ್ ಬೋಳಿಯಾರ್, ಯೂಸುಫ್ ಉಳ್ಳಾಲ,ಶಕೀಲ್ ದೇರಳಕಟ್ಟೆ, ಅಬ್ದುಲ್ ಸತ್ತಾರ್, ರಿಯಾಝ್ ಮಲಾರ್, ಝಕರಿಯಾ ಮಲಾರ್, ಸುಂದರ ಪೂಜಾರಿ, ಕಬೀರ್ ದೇರಳಕಟ್ಟೆ ನಝರ್ ನಡುಪದವು, ಸುರಯ್ಯ ಅಂಜುಮ್, ಎನ್ ಎಸ್ ಕರೀಮ್, ಫಾರೂಕ್ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು. ನವಾಝ್ ನರಿಂಗಾನ ಸ್ವಾಗತಿಸಿದರು.

