ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಮಂಗಳೂರು, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಛೇರಿ, ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು ದಕ್ಷಿಣ ವಲಯ ಮತ್ತು ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕುಸ್ತಿ ಪಂದ್ಯಾಟದ ಸಮಾರೋಪ ಸಮಾರಂಭ ಮಂಗಳೂರಿನ ಮಂಗಳ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ಇದರ ಸಹಾಯಕ ನಿರ್ದೇಶಕರಾದ ಪ್ರದೀಪ್ ಡಿಸೋಜಾ ಅವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್ ಆರ್ ಈಶ್ವರ್, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳು ವಿಷ್ಣು ನಾರಾಯಣ ಹೆಬ್ಬಾರ್ , ಪರಿಸರವಾದಿ ಕೃಷ್ಣಪ್ಪ , ಸೂರಜ್ ಆಳ್ವ, ಶಾಲಾ ಮುಖ್ಯ ಶಿಕ್ಷಕಿ ಮೋಹಿನಿ, ಪಂದ್ಯಾಟದ ಸಂಯೋಜಕರು ತ್ಯಾಗಮ್ ಹರೇಕಳ, ಶಿಕ್ಷಕರುಗಳಾದ ಶಿವಕುಮಾರ್, ಕೃಷ್ಣಶಾಸ್ತ್ರೀ, ಸ್ಮಿತಾ, ದಿವ್ಯ ಶ್ರೀ, ಯಶಸ್ವಿನಿ, ಭವ್ಯ, ಮೋಹನ್ ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕುಸ್ತಿ ಪಂದ್ಯಾಟದ ವಿಜೇತರಿಗೆ ಬಹುಮಾನ ನೀಡಲಾಯಿತು ಮತ್ತು ಸಮಗ್ರ ಪ್ರಶಸ್ತಿ ವಿಜೇತರಿಗೆ ಟ್ರೋಫಿ ಹತ್ತಾಂತರಿಸಲಾಯಿತು.
14 ವರ್ಷ ಬಾಲಕರ ವಿಭಾಗ ಮತ್ತು 17 ವರ್ಷ ಗ್ರಿಕೋ ರೋಮನ್ ವಿಭಾಗದಲ್ಲಿ ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯು ಸಮಗ್ರ ಪ್ರಶಸ್ತಿಯನ್ನು , 14 ವರ್ಷ ಮತ್ತು 17 ವರ್ಷ ಬಾಲಕಿಯರ ವಿಭಾಗದಲ್ಲಿ ನವಚೇತನ ನೀರುಮಾರ್ಗ ಶಾಲೆಯವರು, ಹಾಗೂ 17 ವರ್ಷ ಬಾಲಕರ ವಿಭಾಗದಲ್ಲಿ ಅನಂದಾಶ್ರಮ ಪ್ರೌಢಶಾಲೆ ಕೋಟೆಕಾರ್ ಶಾಲೆಯು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮಕ್ಕಳ ವಿವರ
14 ವರ್ಷದೊಳಗಿನ ಬಾಲಕರ ಫಲಿತಾಂಶ
35 ಕೆಜಿ ವಿಭಾಗ ವರದೇ ಗೌಡ ಸಂತ ಜೋಸಪರ ಆಂಗ್ಲ ಮಾಧ್ಯಮ ಶಾಲೆ ಅಡ್ಯಾರ್ ಪದವು, 38ಕೆಜಿ ಭುವನ್ ಕೆನರಾ ಆಂಗ್ಲ ಮಾಧ್ಯಮ ಶಾಲೆ ಉರ್ವ, 41 ಕೆಜಿ ಆಯುಷ್ ರಾಜ್ ಸ. ಪ್ರೌಢಶಾಲೆ ಬೊಕ್ಕಪಟ್ನ , 44 ಕೆಜಿ ಸುಕ್ರಿತ್ ಕೆನರಾ ಆಂಗ್ಲ ಮಾಧ್ಯಮ ಶಾಲೆ ಮಂಗಳೂರು, 48 ಕೆಜಿ ಮೊಹಮ್ಮದ್ ಅನೀಕ್ ರಾಮಕೃಷ್ಣ ಪ್ರೌಢಶಾಲೆ ಹರೇಕಳ, 52 ಕೆಜಿ ಮಂಜುನಾಥ ಸ. ಪ್ರೌಢಶಾಲೆ ಬೈಕಂಪಾಡಿ, 57 ಕೆಜಿ ದಿಲೀಪ್ ರಾಜ್ ಆನಂದಾಶ್ರಮ ಪ್ರೌಢಶಾಲೆ ಕೋಟೆಕಾರ್, 62 ಕೆಜಿ ಪ್ರಥ್ವಿನ್ ರಾಮಕೃಷ್ಣ ಹರೇಕಳ, 68 ಕೆಜಿ ಮೊಹಮ್ಮದ್ ಶಾಹಿಮ್ ಸ್ವಾಲಿ ರಾಮಕೃಷ್ಣ ಹರೇಕಳ, 75 ಕೆಜಿ ವೇದಾಂತ್ ವ್ಯಾಸ ಮಹರ್ಷಿ ಮೂಲ್ಕಿ
17 ವರ್ಷ ಬಾಲಕರ ವಿಭಾಗ- 45ಕೆಜಿ ಮನೋಜ್ ಶಿವಜೆಪ್ಪ ಸ. ಅಭ್ಯಾಸಿ ಪ್ರೌಢಶಾಲೆ ಬೊಕ್ಕಪಟ್ನ, 48 ಕೆಜಿ ಪೃಥ್ವಿ ಕೇರಳ ಸಮಾಜ ಪಾಂಡೇಶ್ವರ , 51 ಕೆಜಿ ರಮೇಶ್ ಬೆನಕಟ್ಟಿ ಸರಕಾರಿ ಪ್ರೌಢಶಾಲೆ ಬೈಕಂಪಾಡಿ, 55 ಕೆಜಿ ತನ್ಮಯ್ ಸುವರ್ಣ ಸಂತ ಅನ್ಸ್ ಮಂಗಳೂರು, 60 ಕೆಜಿ ಮೊಹಮ್ಮದ್ ಆದಿಲ್ ಸ. ಪ್ರೌಢಶಾಲೆ ಸಾಲೆತ್ತೂರು , 65 ಕೆಜಿ ಮೊಹಮ್ಮದ್ ಮನ್ ಸೂಕ್ ಕ್ವಲಿರಿಯಾ ಆಂಗ್ಲ ಮಾಧ್ಯಮ ಸುರತ್ಕಲ್, 71 ಕೆಜಿ ಸೌಬನ್ ಶಾಹುಲ್ ಮಹಾಲಿಂಗೇಶ್ವರ ಪ್ರೌಢಶಾಲೆ ಸುರತ್ಕಲ್, 80 ಕೆಜಿ ಮೊಹಮ್ಮದ್ ಮೆಹಸೂಕ್ ಹಿದಾಯತ್ ಆಂಗ್ಲ ಮಾಧ್ಯಮ ಸೂರಿಂಜೆ,
92 ಕೆಜಿ ಅಶೋಕ್ ವಿದ್ಯದಾಯಿನಿ ಸುರತ್ಕಲ್,
110 ಕೆಜಿ ನೈತಿಕ್ ಸೈಂಟ್ ಜೋಸೆಫ್ ಕುಲಶೇಖರ
17 ವರ್ಷ ಬಾಲಕರ ಗ್ರಿಕೋ ರೋಮನ್ ವಿಭಾಗದಲ್ಲಿ 45 ಕೆಜಿ ವಿಭಾಗದಲ್ಲಿ ಗಣೇಶ್ ಪಾದುವ ಪ್ರೌಢಶಾಲೆ ನಂತೂರು ,
48 ಕೆಜಿ ಶ್ಲೋಕ್ ಪದುವ ಪ್ರೌಢಶಾಲೆ ನಂತೂರು, 51 ಕೆಜಿ ಸುದೀಪ್ ಶಿವಪ್ಪ ರಾಮಕೃಷ್ಣ ಹರೇಕಳ, 55 ಕೆಜಿ ಅಬ್ದುಲ್ ಸಝಿಲ್ ರಾಮಕೃಷ್ಣ ಹರೇಕಳ
60 ಕೆಜಿ ಮಹಮ್ಮದ್ ತಬ್ ಶೀರ್ ರಾಮಕೃಷ್ಣ ಹರೇಕಳ ,
65 ಕೆಜಿ ಮೊಹಮ್ಮದ್ ಅಮೀನ್ ರಾಮಕೃಷ್ಣ ಹರೇಕಳ, 80 ಕೆಜಿ ಮೊಹಮ್ಮದ್ ಮುನಾಫ್ ರಾಮಕೃಷ್ಣ ಹರೇಕಳ , 92 ಕೆಜಿ ಜ್ಞಾನೇಶ್ ಶೆಟ್ಟಿ ಆನಂದಶ್ರಮ ಕೋಟೆಕಾರ್
14 ವರ್ಷ ವಯೋಮಿತಿಯೊಳಗಿನ ಬಾಲಕಿಯರ ವಿಭಾಗ 30 ಕೆಜಿ ಆಧ್ಯ ನವಚೇತನ ನೀರುಮಾರ್ಗ , 33 ಕೆಜಿ ವೈಷ್ಣವಿ ನವಚೇತನ ನೀರುಮಾರ್ಗ, 36 ಕೆಜಿ ಸನ್ವಿತಾ ತಾರಾನಾಥ ಕುಂದರ್ ವ್ಯಾಸ ಮಹರ್ಷಿ ವಿದ್ಯಾ ಪೀಠ ಮೂಲ್ಕಿ , 39 ಕೆಜಿ ಚಿತ್ರಶ್ರೀ ನವಚೇತನ ನೀರುಮಾರ್ಗ , 42 ಕೆಜಿ ದಿವ್ಯ ಬೆಸಂಟ್ ಪ್ರೌಢಶಾಲೆ ಮಂಗಳೂರು
46 ಕೆಜಿ ಅನುಷ್ಕ ನವಚೇತನ ನೀರುಮಾರ್ಗ ,50 ಕೆಜಿ ನಿತ್ಯ ಮಂಗಳಜ್ಯೋತಿ ವಾಮಂಜೂರು 54 ಕೆಜಿ ಸಾನ್ವಿ ನವಚೇತನ ನೀರುಮಾರ್ಗ 58 ಕೆಜಿ ಗೀತಿಕಾ ನವಚೇತನ ನೀರುಮಾರ್ಗ , 62 ಕೆಜಿ ಲಿಶಾ ಸನನ್ ಮಿನೆಜಸ್
17 ವರ್ಷ ವಯೋಮಿತಿಯೊಳಗಿನ ಬಾಲಕಿಯರ ವಿಭಾಗ , 40 ಕೆಜಿ ಮಿಥಾಲಿ ನವಚೇತನ ನೀರುಮಾರ್ಗ , 43 ಕೆಜಿ ಭೂಮಿಕಾ ವಿದ್ಯಾದಾಯಿನಿ ಸುರತ್ಕಲ್, 46 ಕೆಜಿ ವರ್ಷ ನವಚೇತನ ನೀರುಮಾರ್ಗ, 49 ಕೆಜಿ ಜಾನ್ವಿ ನವಚೇತನ ನೀರುಮಾರ್ಗ, 53 ಕೆಜಿ ಜೀವಿಕ ಲೇಡಿಹಿಲ್ ಮಂಗಳೂರು , 57 ಕೆಜಿ ಜ್ಯೋತಿ ಹನುಮಕ ಬೆಸೆಂಟ್ ರಾಷ್ಟ್ರೀಯ ಪ್ರೌಢಶಾಲೆ ಮಂಗಳೂರು, 61 ಕೆಜಿ ನವ್ಯ ಎಂ ನವಚೇತನ ನೀರುಮಾರ್ಗ, 65 ಕೆಜಿ ಗಾನವಿ ನವಚೇತನ ನೀರುಮಾರ್ಗ ,73 ಕೆಜಿ ದಿಯಾ ನವಚೇತನ ನೀರುಮಾರ್ಗ
ಇವರುಗಳು ಆಯ್ಕೆಯಾದರು.

