ಉಳ್ಳಾಲ:ಕುಂಪಲ ಶಿವಪುರದ ಶ್ರೀ ದುರ್ಗಾಪರಮೇಶ್ವರ ಕ್ಷೇತ್ರದಲ್ಲಿ ಅ.11ರಿಂದ ಅ.20ರ ವರೆಗೆ ಶರವನ್ನವರಾತ್ರಿ ಮಹೋತ್ಸವವು ನಡೆಯಲಿದ್ದು . ಈ ಪ್ರಯುಕ್ತ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ದೀಪ ಪ್ರಜ್ವಲನೆ,ವಿವಿಧ ಭಜನಾ ಮಂಡಳಿಯಿಂದ ಭಜನೆ ಸಂಕೀರ್ತನೆ ಮಧ್ಯಾಹ್ನ ಹಾಗೂ ರಾತ್ರಿ ಅನ್ನದಾನ ಸೇವೆ ನಡೆಯಲಿದೆ.

ಅ16.ರಂದು ಸಂಜೆ 6.00ಗಂಟೆಗೆ ದುರ್ಗಾ ನಮಸ್ಕಾರ ಪೂಜೆ ಜರಗಲಿದೆ.

ಅ18. ರಂದು ಬೆಳಿಗ್ಗೆ 10.00 ಗಂಟೆಗೆ ಮಹಾ ಚಂಡಿಕಾ ಯಾಗ ಪ್ರಾರಂಭ ಬೆಳಿಗ್ಗೆ 11.ಗಂಟೆಗೆ ಮಡಿಲು ತಂಡ ಪಡಿಲು ಇವರಿಂದ ಕುವರಿ ಪೂಜೆ , 12.30ಕ್ಕೆ ಪೂರ್ಣಾಹುತಿ ಪೂಜೆ ಅನ್ನಸಂತರ್ಪಣೆ ನಡೆಯಲಿದೆ
ದಿನಾಂಕ 20.ರಂದು ಮಧ್ಯಾಹ್ನ 12ಗಂಟೆಗೆ ಸಾಮೂಹಿಕ ಹೂವಿನ ಪೂಜೆ ನಡೆಯಲಿದೆ. ರಾತ್ರಿ 7.30ಕ್ಕೆ ಶ್ರೀ ದುರ್ಗಾಪರಮೇಶ್ವರ ದೇವರಿಗೆ ರಂಗಪೂಜೆ ಜರಗಲಿದೆ ಎಂದು ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಭವಾನಿ ಶಂಕರ ಶಾಂತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

