ಮಂಗಳೂರು: ಶ್ರೀನಿವಾಸ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಕಾಮರ್ಸ್ನ ಬಿಬಿಎ ವಿಭಾಗದ ಮುಖ್ಯಸ್ಥೆ ಪ್ರೊ. ಶಿಲ್ಪಾ ಕೆ. ಅವರು ಪಿಎಚ್.ಡಿ ಪದವಿ ಪಡೆದುಕೊಂಡಿದ್ದಾರೆ.

ಶ್ರೀನಿವಾಸ ವಿಶ್ವವಿದ್ಯಾಲಯಕ್ಕೆ ಅವರು ಸಲ್ಲಿಸಿದ “Customer Satisfaction Towards Online Banking Services of Commercial Banks” (ವಾಣಿಜ್ಯ ಬ್ಯಾಂಕುಗಳ ಆನ್ಲೈನ್ ಬ್ಯಾಂಕಿಂಗ್ ಸೇವೆಗಳ ಕುರಿತು ಗ್ರಾಹಕರ ತೃಪ್ತಿ) ಎಂಬ ವಿಷಯದ ಸಂಶೋಧನಾ ಮಹಾಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ.
ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕ ಡಾ. ಸಿ.ಕೆ. ಹೆಬ್ಬಾರ್ ಅವರ ಮಾರ್ಗದರ್ಶನದಲ್ಲಿ ಪ್ರೊ. ಶಿಲ್ಪಾ ಕೆ. ಅವರು ಸಂಶೋಧನೆ ನಡೆಸಿ ಮಹಾಪ್ರಬಂಧವನ್ನು ಮಂಡಿಸಿದ್ದರು.
ಪ್ರೊ. ಶಿಲ್ಪಾ ಕೆ. ಅವರು ಕುದ್ರೋಳಿಯ ಸುರೇಶ್ ಕೆ. ಹಾಗೂ ವಿಜಯಾ ಆರ್.ಕೆ. ದಂಪತಿಯ ಪುತ್ರಿ. ಅವರ ಶೈಕ್ಷಣಿಕ ಸಾಧನೆಗೆ ಕುಟುಂಬಸ್ಥರು, ಸಹೋದ್ಯೋಗಿಗಳು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.

