ಉಳ್ಳಾಲ: ಕಿನ್ಯ ಮತ್ತು ತಲಪಾಡಿ ಗ್ರಾಮಗಳಿಗೆ ಎಇಆರ್ ಒ ಆಗಿ ಕರ್ತವ್ಯಕ್ಕೆ ನೇಮಿಸಿದಾಗ ಪರಿಚಯವೇ ಇಲ್ಲದ ಊರಲ್ಲಿ ಸವಾಲೆನಿಸಿದ್ದ ಕೆಲಸ ಬಿಎಲ್ ಎಗಳ ಸಹಕಾರ, ಬಿಎಲ್ಒಗಳ ಪ್ರಾಮಾಣಿಕ ಪ್ರಯತ್ನದಿಂದ ನಿಗದಿತ ಸಮಯದಲ್ಲೇ ಎಸ್ಐಆರ್ ಪ್ರಕ್ರಿಯೆ ಮುಗಿಸಲು ಸಾಧ್ಯವಾಗಿದೆ ಎಇಆರ್ ಒ, ಮಂಗಳೂರು ವಿವಿ ಕಾಲೇಜು ಕಂಪ್ಯೂಟರ್ ಸೈನ್ಸ್ ವಿಭಾಗ ಸಹಪ್ರಾಧ್ಯಾಪಕಿ ಡಾ.ಭಾರತಿ ಪಿಲಾರ್ ಹೇಳಿದರು.

ತಲಪಾಡಿ ಗ್ರಾಮದ ವ್ಯಾಪ್ತಿಯಲ್ಲಿ ಎಸ್ಐಆರ್ ಪ್ರಕ್ರಿಯೆ ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ನಿರ್ವಹಿಸಿದ ಬಿಎಲ್ಒ, ಬಿಎಲ್ಎಗಳಿಗೆ ತಲಪಾಡಿ ಸೋಶಿಯಲ್ ಟೀಮ್ (ಟ್ವೆಂಟಿ) ವತಿಯಿಂದ ಗ್ರಾ.ಪಂ. ಸಮೀಪದ ಖಾಸಗಿ ಅತಿಥಿ ಗೃಹದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಎಲ್ಲಿ ಮಾನವೀಯತೆ ಇದೆಯೋ, ನೊಂದವರ ಕಣ್ಣೀರು ಒರೆಸುವ ಕಾರ್ಯ ನಡೆಯುತ್ತದೆಯೋ ಅಲ್ಲಿ ನಾಗರಿಕ ಸಮಾಜ ಜೀವಂತ ಇರುತ್ತದೆ.
ಇಂದಿನ ಕಾಲಘಟ್ಟದಲ್ಲಿ ಸಮಾಜದಲ್ಲಿ ಮಾನವೀಯ ಸೇವೆ ನೀಡುವಂಥ ಸಾಮಾಜಿಕ ಸಂಘಟನೆಗಳ ಅವಶ್ಯಕತೆ ಇದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಉದ್ಯಮಿ ಇಬ್ರಾಹಿಂ ಹುಸೈನ್ ಮಾತನಾಡಿ, ಎಸ್ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿ ಸಹಿತ ಬಿಎಲ್ ಒ, ಬಿಎಲ್ ಎಗಳು ಅತ್ಯಂತ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವ ಮೂಲಕ ಪ್ರತಿಯೊಬ್ಬರ ಮತದ ಹಕ್ಕು ಉಳಿಸಿದ್ದಾರೆಂದು ಹೇಳಿದರು.
ಈ ಸಂದರ್ಭ ಬಿಎಲ್ಒಗಳಾದ ಪ್ರಫುಲ್ಲ ಕೆ, ಮಿಸ್ರಿಯಾ, ಪ್ರತಿಮಾ ಕೆ, ಶ್ರೀಧರ್ ನಾಯಕ್ ಎಸ್.ಎಚ್., ಲತಾ, ಶೋಭಾ ಟೀಚರ್, ಸುನಿತಾ ಟೀಚರ್, ವನಿತಾ, ಬಿಎಲ್ ಎ ಶರ್ಮಿಳಾ ರಾಣಿ, ಸಾಧನಾ ರಾವ್, ಸುನಂದ, ಜಯಪ್ರಕಾಶ್ ತಚ್ಚಣಿ, ನೀಟ್ ಸಾಧಕಿ ಹಾದಿಯ ಮರಿಯಂ ಸಂಶೀರ್ ಹಾಗೂ ಬಿಎಲ್ಎಗಳನ್ನು ಸನ್ಮಾನಿಸಲಾಯಿತು. ಮಾನವೀಯ ಸೇವೆಯಾಗಿ ರೋಗಿಗಳ ಚಿಕಿತ್ಸೆಗೆ ಧನಸಹಾಯ ವಿತರಿಸಲಾಯಿತು.
ಈ ಸಂದರ್ಭ ತಲಪಾಡಿ ಗ್ರಾ.ಪಂ. ಆಡಳಿತಾಧಿಕಾರಿ ಅಮ್ಜದ್ ಖಾನ್, ಸೋಶಿಯಲ್ ಟೀಮ್ ಅಧ್ಯಕ್ಷ ಮಹಮ್ಮದ್ ಸಂಶೀರ್, ಸಾಮಾಜಿಕ ಕಾರ್ಯಕರ್ತ ಅಬ್ಬಾಸ್ ಉಚ್ಚಿಲ್, ಉಚ್ಚಿಲ 407 ಜುಮಾ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಕೊಪ್ಪಳ, ಸೋಶಿಯಲ್ ಅಚೀವ್ ಮೆಂಟ್ ಅಧ್ಯಕ್ಷ ಶೇಖ್ ಮಹಮ್ಮದ್, ಡೈಮಂಡ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಸಂಶುದ್ದೀನ್ ಉಚ್ಚಿಲ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸಲಾಂ ಉಚ್ಚಿಲ್, ಉದ್ಯಮಿ
ಮಹಮ್ಮದ್ ಆಸಿಫ್ ಕೆ.ಸಿ.ನಗರ, ತಲಪಾಡಿ ಗ್ರಾ.ಪಂ. ನಿಕಟಪೂರ್ವ ಸದಸ್ಯ ಹಸೈನಾರ್,
ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ
ಯಾಕೂಬ್ ಪಿಲಿಕೂರು, ಯೂತ್ ಮುಸ್ಲಿಂ ಲೀಗ್ ರಾಜ್ಯ ಉಪಾಧ್ಯಕ್ಷ ಶಬೀರ್ ತಲಪಾಡಿ
ಸಾಮಾಜಿಕ ಕಾರ್ಯಕರ್ತ ಸೋಶಿಯಲ್ ಫಾರೂಕ್ ಕಾರ್ಯಕ್ರಮ ನಿರೂಪಿಸಿದರು.

