ಉಳ್ಳಾಲ: ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾ ಮಂಗಳೂರು ಮಂಡಲದ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ ಹಾಗೂ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ನರಿಂಗಾನ ಮೊಂಟೆಪದವು ಸೇವಾ ಭಾರತಿ ದಿವ್ಯಾಂಗ ವಸತಿ ಶಾಲೆಯ ವಠಾರದಲ್ಲಿ ಸ್ವಚ್ಛತಾ ಕಾರ್ಯ ಹಾಗೂ ದಿವ್ಯಾಂಗ ಮಕ್ಕಳಿಗೆ ಉಪಹಾರ ವಿತರಿಸುವ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಮಾತನಾಡಿದ ಮಂಡಲ ಅಧ್ಯಕ್ಷ ಜಗದೀಶ ಅಳ್ವ, ನರೇಂದ್ರ ಮೋದಿಯವರ ವಿಕಸಿತ ಭಾರತದ ಕನಸು ನನಸಾಗಲು ನಾವೆಲ್ಲರೂ ಒಂದಾಗಿ ಸೇರಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ರೈತ ಮೋರ್ಚಾ ಮಂಡಲ ಅಧ್ಯಕ್ಷ ಪದ್ಮನಾಭ ಗಟ್ಟಿ ಮಾತನಾಡಿ, ನಾವೆಲ್ಲರೂ ಮಾಡುವ ಸಣ್ಣ-ಸಣ್ಣ ಸೇವಾ ಕಾರ್ಯಗಳ ಪುಣ್ಯದ ಫಲವಾಗಿ ನರೇಂದ್ರ ಮೋದಿಯವರ ಆಯುಷ್ಯ ಹಾಗೂ ಆರೋಗ್ಯ ವೃದ್ಧಿಯಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ರೈತ ಮೋರ್ಚಾ ಉಪಾಧ್ಯಕ್ಷ ಸತೀಶ್ ಆಚಾರ್ಯ, ಸುರೇಂದ್ರ ಜಪ್ಪಿನಮೊಗರು, ರೈತ ಮೋರ್ಚಾ ಮಂಡಲ ಉಪಾಧ್ಯಕ್ಷರಾದ ದಿಲೀಪ್ ರೈ ಪಜೀರ್, ಚಂದ್ರಶೇಖರ ಮರಿಕ್ಕಲ, ಕೃಷ್ಣಪ್ಪ, ಮಂಡಲ ಕಾರ್ಯದರ್ಶಿ ರಮೇಶ್ ಬೆದ್ರೊಳಿಕೆ, ರಾಮಚಂದ್ರ ಶೆಟ್ಟಿ, ರವಿ ಪ್ರಶಾಂತ್ ಶೆಟ್ಟಿ, ರಂಜನ್, ಜಯಾನಂದ ಶೆಟ್ಟಿ, ಲೋಕನಾಥ, ಕೇಶವ ಕೋಟ್ಯಾನ್, ಉದಯ ಕುಮಾರ್, ಪ್ರೇಮಾನಂದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ರೈತ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ರವಿ ರೈ ಪಜೀರ್ ಸ್ವಾಗತಿಸಿದರು. ರಾಜೇಶ್ ಬಂಗ ವಂದಿಸಿದರು.

