ಉಳ್ಳಾಲ: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬ ಹಾಗೂ ಪ್ರಜಾಸೇವೆಯಲ್ಲಿ 25 ವರ್ಷ ಪೂರೈಸಿದ ಸ್ಮರಣಾರ್ಥ ಹಮ್ಮಿಕೊಂಡಿರುವ ‘ಸೇವಾ ಸಂಕಲ್ಪ ಅಭಿಯಾನ’ದ ಅಂಗವಾಗಿ ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾ ಮಂಗಳೂರು ಮಂಡಲದ ವತಿಯಿಂದ ಪಜೀರ್ ಗೋವಾನಿತಾಶ್ರಮದ ಗೋಶಾಲೆಯಲ್ಲಿ ಗೋಪೂಜೆ ಹಾಗೂ ಗೋವುಗಳಿಗೆ ಮೇವು ಸಮರ್ಪಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಂಗಳೂರು ಮಂಡಲದ ಅಧ್ಯಕ್ಷ ಜಗದೀಶ ಅಳ್ವ, ರೈತ ಮೋರ್ಚಾ ಅಧ್ಯಕ್ಷ ಪದ್ಮನಾಭ ಗಟ್ಟಿ, ಮಂಡಲದ ಉಪಾಧ್ಯಕ್ಷೆ ಸುಮನ ಹರೀಶ್, ದಿಲೀಪ್ ಕುಮಾರ್ ರೈ, ಕೃಷ್ಣಪ್ಪ ಎಂ., ಪದ್ಮನಾಭ ಪಾದೆ, ರಂಜನ್, ರವಿ ಪ್ರಶಾಂತ್ ಶೆಟ್ಟಿ, ಜಯಾನಂದ ಶೆಟ್ಟಿ, ಕುಮಾರಣ್ಣ, ವರದರಾಜ್ ಮಣಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರವಿ ರೈ ಪಜೀರ್ ಪ್ರಸ್ತಾವಿಸಿದರು. ರಾಜೇಶ್ ಬಂಗ ವಂದಿಸಿದರು.

