ಮಂಗಳೂರು: ಗಾಂಧಿ ಜಯಂತಿ ಅಂಗವಾಗಿ ಮಂಗಳೂರಿನ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (BIT)ಯ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗ ಹಾಗೂ ಎನ್ಎಸ್ಎಸ್ (NSS) ಘಟಕದ ವತಿಯಿಂದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ‘ಆಲ್ ಇಂಡಿಯಾ ಪಯಾಮ್-ಎ-ಇನ್ಸಾನಿಯತ್ ಫೋರಂ’ ಹಾಗೂ ‘ಬ್ಲಡ್ ಡೋನರ್ಸ್ ಮಂಗಳೂರು (R)’ ಸಂಸ್ಥೆಗಳ ಸಹಯೋಗದಲ್ಲಿ ಮಂಗಳೂರಿನ ರೆಡ್ ಕ್ರಾಸ್ ಶತಮಾನೋತ್ಸವ ಭವನದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.


ಶಿಬಿರದಲ್ಲಿ 10ಕ್ಕೂ ಹೆಚ್ಚು ಕಾಲೇಜುಗಳು ಭಾಗವಹಿಸಿದ್ದವು. BITಯ ಸುಮಾರು 40 ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದು, 36 ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ರಕ್ತದಾನ ಅಭಿಯಾನದಲ್ಲಿ ಭಾಗವಹಿಸಿದ್ದಕ್ಕಾಗಿ BIT ಮಂಗಳೂರು ಮೂರನೇ ಬಹುಮಾನ ಪಡೆದುಕೊಂಡಿತು.
BKC ನಿರ್ದೇಶಕ ಡಾ. ಎಸ್. ಐ. ಮಂಜೂರ್ ಬಾಷಾ ಹಾಗೂ BIT ಪ್ರಾಂಶುಪಾಲ ಡಾ. ಸಿ. ಕಮಲಕಣ್ಣನ್ ಅವರ ಮಾರ್ಗದರ್ಶನದಲ್ಲಿ ಶಿಬಿರ ನಡೆಯಿತು. ಡಾ. ಮೊಹಮ್ಮದ್ ಕಫೀಲ್ ದೆಲ್ವಿ, ಅಕ್ಷತಾ, ಡಾ. ಅಜೀಜ್ ಮುಸ್ತಫಾ ಹಾಗೂ ಝಹೀರ್ ಅವರು ಶಿಬಿರದ ಸಂಯೋಜನೆಯ ಜವಾಬ್ದಾರಿ ನಿರ್ವಹಿಸಿದರು.


