ತೊಕ್ಕೊಟ್ಟು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದಿಂದ ಕುತ್ತಾರು ಬಾಲಸಂರಕ್ಷಣಾ ಕೇಂದ್ರದಲ್ಲಿ ಭಗತ್ ಸಿಂಗ್ ಜನ್ಮದಿನಾಚರಣೆ.

ತೊಕ್ಕೊಟ್ಟುವಿನ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ಕುತ್ತಾರು ಬಾಲಸಂರಕ್ಷಣಾ ಕೇಂದ್ರದಲ್ಲಿ ಕ್ರಾಂತಿವೀರ ಭಗತ್ ಸಿಂಗ್ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಪನ್ಯಾಸಕಿ ಸುಮಲತಾ ಕೊಣಾಜೆ ಅವರು ಭಗತ್ ಸಿಂಗ್ ರ ಕ್ರಾಂತಿಕಾರಿ ಹೋರಾಟಗಳ ಘಟನೆಯೇ ಅವಿಸ್ಮರಣೀಯ. ಅವರ ಬಗ್ಗೆ ಹೆಚ್ಚಿನ ಕಾರ್ಯಕ್ರಮ ಗಳು ನಡೆಯದೇ ಇರುವುದು ವಿಷಾದನೀಯ. ಭಗತ್ ಸಿಂಗ್ ಪ್ರತಿಷ್ಠಾನ ಇಂತಹ ಕಾರ್ಯಕ್ರಮ ಗಳ ಮೂಲಕ ಅವರ ಬಗ್ಗೆ ತಿಳಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟು, ತನ್ನ 23 ನೇ ವಯಸ್ಸಿನಲ್ಲಿಯೇ ಭಾರತಾಂಭೆಯ ದಾಸ್ಯಮುಕ್ತಿಗಾಗಿ ಪ್ರಾಣ ಬಲಿದಾನಗೈದವರು. ಆಟ ಆಡುವ 12 ನೇ ವಯಸ್ಸಿನಲ್ಲಿಯೇ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ದುಮುಕಿದವರು. ಅವರ ವಿಚಾರಗಳನ್ನು ಅರಿಯಬೇಕೆಂಬ ನಿಟ್ಟಿನಲ್ಲಿ 12 ವರುಷದ ಒಳಗಿನ ವಿದ್ಯಾರ್ಥಿಗಳಿಗೆ ಕ್ರಾಂತಿ ಜ್ಯೋತಿ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿದ್ದೇವೆ. ನೀರೀಕ್ಷೆಗೂ ಮೀರಿ ಮಕ್ಕಳು ಭಾಗವಹಿಸಿ ಉತ್ತರವನ್ನು ಕಳುಹಿಸಿದ್ದಾರೆ ಎಂದರು.
ಭಗತ್ ಸಿಂಗ್ ಕುರಿತಾಗಿ ವಿದ್ಯಾರ್ಥಿಗಳಿಗೆ ವಾಟ್ಸಪ್ ಮೂಲಕ ಏರ್ಪಡಿಸಿದ್ದ "ಕ್ರಾಂತಿ ಜ್ಯೋತಿ" ರಸಪ್ರಶ್ನಾ ಸ್ಫರ್ಧೆಯಲ್ಲಿ ವಿಜೇತರಾದ ಹತ್ತು ಜನ ಅದೃಷ್ಟಶಾಲಿಗಳಿಗೆ ಬಹುಮಾನ ವಿತರಿಸಲಾಯಿತು.
ಗೌರವಾಧ್ಯಕ್ಷರಾದ ರಾಕೇಶ್ ಬೈಪಾಸ್,ಗೌರವ ಸಲಹೆಗಾರರು ನಿವೃತ್ತ ಮುಖ್ಯ ಶಿಕ್ಷಕರಾದ ಆನಂದ ಕೆ.ಅಸೈಗೋಳಿ, ಕೋಶಾಧಿಕಾರಿ ಪ್ರಸಾದ್ ಕೊಂಡಾಣ,ಗುರುವAದನೆ ಸಂಚಾಲಕರಾದ ಮೋಹನ್ ಸಾಲಿಯನ್,ಪ್ರಮುಖರಾದ ಶಿವಾಜಿ ಕುತ್ತಾರು,ನವೀನ್ ಎ.ಕೆ.,ಸತೀಶ್ ಪೂಜಾರಿ,ಶರತ್ ಭಂಡಾರಿ,ರಾಮಚ0ದ್ರ ಶೆಟ್ಟಿ,ಸೂರಜ್ ಗಟ್ಟಿ,ಪ್ರಭಾಕರ ಮಡ್ಯಾರ್,ಪ್ರತೀಕ್ ನಡಾರ್, ಬಾಲಸಂರಕ್ಷಣಾ ಕೇಂದ್ರದ ಮೇಲ್ವಿಚಾರಕಿ ಮಮತಾ, ಕಬಡ್ಡಿ ಕ್ರೀಡಾಪಟು ಶಿಲ್ಪಾ ಮೊದಲಾದವರು ಉಪಸ್ಥಿತರಿದ್ದರು.
ಭಗತ್ ಸಿಂಗ್ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷರಾದ ದಾಮೋದರ್ ನಡಾರ್ ಬಹುಮಾನ ವಿಜೇತರ ಹೆಸರು ವಾಚಿಸಿದರು.ದೀಕ್ಷಿತ್ ನಿಸರ್ಗ ಕಾರ್ಯಕ್ರಮ ನಿರೂಪಿಸಿದರು.

