ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಶಿಕ್ಷಕರ ಮತ್ತು ಶಿಕ್ಷಕೇತರರ ಕ್ಷೇಮಾಭಿವೃದ್ಧಿಗೆ ಕಾರ್ಯಾಚರಿಸುತ್ತಿರುವ ಮಂಗಳೂರು ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘವು 4, 46,26,200 ಮುನ್ನಡೆಯುತ್ತಿದೆ ಎಂದು ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ ಎಂ ಕೆ ಮಂಜನಾಡಿ ಅವರು ತಿಳಿಸಿದರು.

ಅವರು ಇತ್ತೀಚೆಗೆ ನಡೆದ ಶಿಕ್ಷಕರ ಸಹಕಾರಿ ಸಂಘದ 37ನೇ ಮಹಾಸಬೆಯಲ್ಲಿ ಮಾತನಾಡುತ್ತಾ ನಮ್ಮ ಸಹಕಾರಿ ಸಂಘವು ಕೇವಲ ಶಿಕ್ಷಕ ಮತ್ತು ಶಿಕ್ಷಕೇತರರ ಬಂಧುಗಳಿಗೆ ಸದಸ್ಯತನ ಹೊಂದಲು ಮೀಸಲಿದ್ದು ವಿಸ್ತರಿಸಲು ಅವಕಾಶ ಕಡಿಮೆ ಇದ್ದರೂ ಈ ವರ್ಗಗಳ ಹೃದಯ ತುಂಬಿದ ಸಹಕಾರವಿದೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಬಂಧುಗಳ ಸಹಕಾರದಿಂದ ಕಳೆದ 36 ವರ್ಷಗಳಲ್ಲಿ ಉತ್ತಮ ಸೇವೆಯನ್ನು ನೀಡುತ್ತಾ ಬಂದಿರುತ್ತದೆ . ಮುಂದಿನ ದಿನಗಳಲ್ಲಿ ಸದಸ್ಯರ ಸಹಕಾರದಿಂದ ಗತವೈಭವ ಮರುಕಳಿಸಲಿದೆ. ಮುಂದಿನ ಹಣಕಾಸು ವರ್ಷದಲ್ಲಿ ಉಡುಪಿ ಜಿಲ್ಲೆಯ ಮೂಡಬಿದ್ರೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಶಾಖೆಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು.

ರೂಪಾಯಿ 4, 46,26,200 ಪಾಲು ಬಂಡವಾಳ, ವರ್ಷಾಂತಿಯಕ್ಕೆ ಸಂಘದ ಒಟ್ಟು ವ್ಯವಹಾರ 76, 64, 36,216 ಹೊಂದಿದ್ದು ರೂಪಾಯಿ 32,76,61,325 ಹೊರ ಬಾಕಿರುತ್ತದೆ. 2017ರಲ್ಲಿ ಪ್ರಾರಂಭವಾದ ಶಿಕ್ಷಕ್ ಸುರಕ್ಷಿತ್ ಯೋಜನೆಯಿಂದ ಸದಸ್ಯರಿಗೆ ಹೆಚ್ಚಿನ ಅನುಕೂಲವಾಗಿದ್ದು ಇದರಿಂದಾಗಿ ನಿಧನ ಹೊಂದಿದ ಸದಸ್ಯರಿಗೆ 4, 33,000 ಪರಿಹಾರ ಮೊತ್ತವನ್ನು ನೀಡಲಾಗಿದೆ. ಪ್ರಸ್ತುತ ಯೋಜನೆಯಲ್ಲಿ ರೂಪಾಯಿ 74,40, 326, 880 ಸಂಗ್ರಹವಾಗಿರುತ್ತದೆ ಎಂದು ತಿಳಿಸಿದರು.
ಸದಸ್ಯರಾದ ಶ್ರೀಮತಿ ರತ್ನಾವತಿ ಜಿ ಬೈಕಾಡಿಯ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಸಭೆಯಲ್ಲಿ 2025 -26ನೇ ಸಾಲಿನ ವರದಿ, ಲೆಕ್ಕಪತ್ರ ಮಂಡನೆ. ಅಂದಾಜು ಆಯವ್ಯಯ ಮಂಡನೆ ಇತ್ಯಾದಿಗಳನ್ನು ಕಾರ್ಯಸೂಚಿಯಂತೆ ನೆರವೇರಿಸಲಾಯಿತು. ಸಂಘದ ಅಭಿವೃದ್ಧಿಗಾಗಿ ಸದಸ್ಯರು ನೀಡಿದ ಸಲಹೆಗಳನ್ನು ಸ್ವೀಕರಿಸಲಾಯಿತು.
ನಿವೃತ್ತಿ ಶಿಕ್ಷಕರಾದ ಸ್ಟ್ಯಾನಿ ಫ್ರಾನ್ಸಿಸ್ ಬ್ಯಾರೆಟ್ಟು ರವರು ತನ್ನ ಖಾಸಗಿ ಟ್ರಸ್ಟ್ ನಿಂದ ನೀಡುವ ವಿದ್ಯಾರ್ಥಿವೇತನವನ್ನು ಉಭಯ ಜಿಲ್ಲೆಗಳಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ.ಯು.ಸಿ.ಯಲ್ಲಿ ಗರಿಷ್ಠ ಅಂಕಗಳಿಸಿದ ಸಂಘದ ಸದಸ್ಯರ 33 ಮಂದಿ ಮಕ್ಕಳಿಗೆ ವಿತರಿಸಲಾಯಿತು.
ಸಂಘದ ನಿರ್ದೇಶಕರುಗಳಾದ ಪ್ರಭಾಕರ್ ಶೆಟ್ಟಿ, ಪಿ ಅಂಬರೀಶ್, ಹಿಲ್ದಾ ಕ್ಲೇಮೆಂಸಿಯಾ ಪಿಂಟೋ, ಪಿ ಪುಟ್ಟಸ್ವಾಮಿ, ತಿಪ್ಪೋ ಜಿ ಎಂ ವೈ, ರೀಟಾ ಡೇಸ, ಚಂದ್ರಶೇಖರ್, ವನಿತಾ ಸುರೇಶ್, ಮಾರ್ಕ ಮೆಡೋನ್ಸ, ಉಸ್ಮಾನ್ ಜಿ, ರವಿಕಲಾ ಶೆಟ್ಟಿ, ರೂಪಾಕ್ಷ ಎಂ, ವಾಸುದೇವ ರಾವ್, ರಘುನಾಥ ಭಟ್, ಎಂ ಎಸ್ ಮಹೇಶ್, ವಾಣಿ, ಗೀತಾ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಶರ್ಮಿಳಾ ಕೆ 2025- 26 ನೇ ವರದಿ ಮತ್ತು ತಿಳುವಳಿಕೆ ಪತ್ರಗಳನ್ನು ವಾಚಿಸಿದರು.
ಉಪಾಧ್ಯಕ್ಷ ರಾದ ಉದಯಶಂಕರ್ ನಾಯಕ್ ಧನ್ಯವಾದ ಹೇಳಿದರು. ನಿರ್ದೇಶಕರಾದ ವಾಸುದೇವರವರು ಕಾರ್ಯಕ್ರಮ ನಿರೂಪಿಸಿದರು.

