ಉಳ್ಳಾಲ: ಉಳ್ಳಾಲ ನಗರಸಭಾ ಆಶ್ರಯದಲ್ಲಿ, ಉಳ್ಳಾಲ ನಗರ ಸಭೆ ಪೌರ ಸೇವಾ ನೌಕರರ ಸೇವಾ ಸಂಘದ ವತಿಯಿಂದ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ/ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಯು.ಟಿ. ಖಾದರ್ ಇವರ ಮಾರ್ಗದರ್ಶನದಲ್ಲಿ ಪೌರ ಕಾರ್ಮಿಕರ ದಿನಾಚರಣೆ, ಸಭಾ ಕಾರ್ಯಕ್ರಮ ಮತ್ತು ಪೌರಕಾರ್ಮಿಕರಿಗೆ ಸನ್ಮಾನ ಉಳ್ಳಾಲ ನಗರಸಭೆ ಸಭಾಂಗಣದಲ್ಲಿ ನಡೆಯಿತು.
ಉಳ್ಳಾಲ ನಗರಸಭಾ ಆಯುಕ್ತರು ಸಂತೋಷ್ ಎಸ್. ಡಿ. ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು.

ಉಳ್ಳಾಲ ನಗರಸಭೆಯ ಕಿರಿಯ ಅಭಿಯಂತರರು ಪೌರ ಸೇವಾ ನೌಕರರ ಸಂಘದ ಅಧ್ಯಕ್ಷರು ತುಳಸಿ ದಾಸ್ ಅಧ್ಯಕ್ಷತೆ ವಹಿಸಿದ್ದರು.
ಉಳ್ಳಾಲ ನಗರಸಭೆ ನೌಕರರ ಸಂಘದ ಅಧ್ಯಕ್ಷರು ತುಳಸಿದಾಸ್, ಹಿರಿಯ ಆರೋಗ್ಯ ನಿರೀಕ್ಷಕರು ರವಿಕೃಷ್ಣ ಡಿ., ಶ್ರೀಮತಿ ಲಿಲ್ಲಿ ನಾಯರ್ ಸೇರಿದಂತೆ ಉಳ್ಳಾಲ ನಗರಸಭೆಯ 45 ಪೌರಕಾರ್ಮಿಕರು ಹಾಗೂ 13 ಮಂದಿ ವಾಹನ ಚಾಲಕರನ್ನು ಈ ಸಂದರ್ಭದಲ್ಲಿ ಸಂಮಾನಿಸಲಾಯಿತು.
ಉಳ್ಳಾಲ ನಗರಸಭಾ ಲಕ್ಕಿಗರು ಪೌರ ಸೇವಾ ನೌಕರರ ಸಂಘದ ಕಾರ್ಯದರ್ಶಿ ವಾಸುದೇವ ಮೂರ್ತಿ ಎಂ.ಎಲ್., ಪೌರ ಸೇವಾ ನೌಕರರ ಸೇವಾ ಸಂಘದ ಉಪಾಧ್ಯಕ್ಷರು ಚೌಡಪ್ಪ, ಉಳ್ಳಾಲ ನಗರಸಭೆ ಲೇಖಾಧೀಕ್ಷರು ಶ್ರೀಮತಿ ಬಿಂದಿಯ ಡಿ, ಕಂದಾಯ ಅಧಿಕಾರಿ ನವೀನ್ ಹೆಗ್ಡೆ, ನಗರ ಸಭಾ ಸಿಬ್ಬಂದಿಗಳು ಹಾಗೂ ಉಳ್ಳಾಲ ನಗರ ಸಭೆಯ ಮಾಜಿ ಸದಸ್ಯರು ಗೀತಾಬಾಯಿ, ಅಜೀಜ್ ಹಕ್, ಭಾರತಿ, ಶ್ರೀಮತಿ ವೀಣಾ ಶಾಂತಿ ಡಿ’ಸೋಜಾ, ಶ್ರೀಮತಿ ಸಪ್ನಾ ಹರೀಶ್, ಇಸ್ಮಾಯಿಲ್, ಮೋಂತಿ ಡಿ’ಸೋಜಾ, ಅಬ್ದುಲ್ ಜಬ್ಬಾರ್, ಆಯುಬ್ ಮಂಚಿಲ, ಬಾಸಿಲ್ ಡಿ’ಸೋಜಾ ಮುಂತಾದವರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಜಿಲ್ಲಾ ಅಭಿಯಾನ ವ್ಯವಸ್ಥಾಪಕರು ಶ್ರೀಮತಿ ಐರಿನ್ ರೆಬೊಲ್ಲೋ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪೌರಕಾರ್ಮಿಕರಿಗೆ ಸ್ವಚ್ಛತೆ, ಆರೋಗ್ಯ ಮುಂತಾದ ವಿಷಯಗಳ ಕುರಿತು ಮಾಹಿತಿ ನೀಡಿದರು.
ಪೌರಕಾರ್ಮಿಕೆ ಶ್ರೀಮತಿ ಮಂಜುಳಾ ಪ್ರಾರ್ಥನೆಗೈದರು. ಸಮುದಾಯ ಸಂಘಟಕರು ರೋಹಿನಾಥ್ ಎನ್. ಸ್ವಾಗತಿಸಿದರು. ಪ್ರವೀಣ್ ಎಸ್. ಕುಂಪಲ ನಿರೂಪಿಸಿದರು. ಹಿರಿಯ ಆರೋಗ್ಯ ನಿರೀಕ್ಷಕರು ರವಿಕೃಷ್ಣ ಡಿ. ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಪೌರಸೇವಾ ನೌಕರರ ಸೇವಾ ಸಂಘದ ಸದಸ್ಯರಿಂದ ಹಾಗೂ ಅವರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

