ಉಳ್ಳಾಲ: ಸಮಾಜ ಸೇವೆಗಾಗಿ ಖ್ಯಾತಿ ಪಡೆದ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಳ್ಳಾಲ ಬೈಲ್ನ ನವೋದಯ ಫ್ರೆಂಡ್ಸ್ ಸರ್ಕಲ್ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು.

ಶಿಕ್ಷಕರ ದಿನಾಚರಣೆಯ ಅಂಗವಾಗಿ ತಮ್ಮ ಪರಿಸರದ ಹಿರಿಯ ನಿವೃತ್ತ ಶಿಕ್ಷಕರಾದ ರಾಜಕುಮಾರ್ ಮಾಸ್ಟರ್, ಯಶೋಧ ಟಿ.ವಿ., ಶ್ರೀಮತಿ ಪ್ರಮೀಳಾ ಕುಮಾರಿ ಕೆ., ಪ್ರಕಾಶ್ ವಿ. ನಾಯಕ್ ಹಾಗೂ ಶ್ರೀಮತಿ ಅನುಸೂಯ ಗಾಂವ್ ಕರ್ ಅವರ ಮನೆಗಳಿಗೆ ತೆರಳಿದ ನವೋದಯ ಫ್ರೆಂಡ್ಸ್ ಸರ್ಕಲ್ನ ಸದಸ್ಯರು ಗುರುವಂದನೆ ಸಲ್ಲಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ನವೋದಯ ಫ್ರೆಂಡ್ಸ್ ಸರ್ಕಲ್ನ ಉಪಾಧ್ಯಕ್ಷ ರೋಹಿತ್ ಉಳ್ಳಾಲ್ ಅವರು ಶಿಕ್ಷಕರ ಪರಿಚಯವನ್ನು ನೀಡಿ ಅಭಿನಂದನೆ ಸಲ್ಲಿಸಿದರು.
ಗೌರವ ಸ್ವೀಕರಿಸಿದ ನಿವೃತ್ತ ಶಿಕ್ಷಕರು ಮಾತನಾಡಿ, ತಮ್ಮ ಸೇವೆಯನ್ನು ಗುರುತಿಸಿ ಗೌರವ ಹಾಗೂ ಪ್ರೀತಿ ತೋರಿದ ನವೋದಯ ಫ್ರೆಂಡ್ಸ್ ಸರ್ಕಲ್ನ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ನವೋದಯ ಫ್ರೆಂಡ್ಸ್ ಸರ್ಕಲ್ನ ಅಧ್ಯಕ್ಷ ಪ್ರವೀಣ್ ಉಳ್ಳಾಲ ಬೈಲ್, ಗೌರವಾಧ್ಯಕ್ಷ ಪದ್ಮನಾಭ ಧರ್ಮನಗರ, ಸದಸ್ಯರಾದ ನಾಗೇಶ್, ಮಹೇಶ್ ಯು.ಬಿ., ಸಬಿನೇಶ್ ಉಳ್ಳಾಲಬೈಲ್, ಕಿಟ್ಟಣ್ಣ ಆಚಾರ್ಯ, ಅಭಿಷೇಕ್, ನರೇಶ್, ಸಂದೀಪ್, ಮಹೇಶ್ ಗಟ್ಟಿ, ಚೇತನ್, ಸುನಿಲ್ ಕುಮಾರ್, ರೂಪೇಶ್ ಭಟ್ಟನಗರ, ರೂಪೇಶ್, ತಾರಾನಾಥ್, ವಿದ್ಯಾಧರ್ ಶೆಟ್ಟಿ, ಜಯಾನಂದ್ ಮತ್ತಿತರರು ಉಪಸ್ಥಿತರಿದ್ದರು.

