ಉಳ್ಳಾಲ: ಸಾಮರಸ್ಯ ವೇದಿಕೆ ಉಳ್ಳಾಲ ತಾಲೂಕು ವತಿಯಿಂದ ಉಳ್ಳಾಲ ತಾಲೂಕಿನ ಬಾಳೆಪುಣಿ ಗ್ರಾಮದ ದುರ್ಗಾಲಾಪು ಸೈಟ್ನಲ್ಲಿ ಸಾಮರಸ್ಯದ ರಕ್ಷಾಬಂಧನ ಕಾರ್ಯಕ್ರಮ ನಡೆಯಿತು.

ಕಾರ್ಯಕರ್ತರು ಮನೆ ಮನೆಗೆ ತೆರಳಿ ಸ್ಥಳೀಯರಿಗೆ ರಕ್ಷೆ ಕಟ್ಟಿ, ವಸ್ತ್ರಗಳನ್ನು ವಿತರಿಸಿ ಹಾಗೂ ಸಿಹಿತಿಂಡಿ ಹಂಚುವ ಮೂಲಕ ಸಾಮರಸ್ಯದ ಸಂದೇಶ ಸಾರಿದರು.
ಈ ಸಂದರ್ಭದಲ್ಲಿ ಸಾಮರಸ್ಯ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ ಭರತ್ ಮಂಜನಾಡಿ, ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್, ಮಂಡಲದ ಉಪಾಧ್ಯಕ್ಷೆ ಸುಮನಾ ಹರೀಶ್ ಶೆಟ್ಟಿ, ಕೋಶಾಧಿಕಾರಿ ಸುಮಲತಾ ಕೊಣಾಜೆ, ಸಾಮರಸ್ಯ ವೇದಿಕೆ ಉಳ್ಳಾಲ ತಾಲೂಕು ಟೋಳಿ ಸದಸ್ಯರಾದ ಶ್ರೀಧರ್ ಪೆರಡೆ, ಜಿತೇಂದ್ರ ಪೊಟ್ಟೊಳಿಕೆ, ಪ್ರಮುಖರಾದ ಶಿವಪ್ರಸಾದ್ ದುರ್ಗಾಲಾಪು, ಪ್ರಜ್ವಲ್ ಪಾವೂರು, ಅಭಿಜಿತ್ ಪಾವೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

