ಬಾಳೆಪುಣಿ: ಬದ್ರಿಯಾ ಜುಮಾ ಮಸೀದಿ, ಬಾಳೆಪುಣಿ ಇದರ ಅಧೀನದಲ್ಲಿರುವ ನೂರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ವಿದ್ಯಾರ್ಥಿಗಳನ್ನು ಟೀಂ ಬುಖಾರ ಹಾಗೂ ಟೀಂ ಸಮರ್ಕಂದ್ ಎಂಬ ಎರಡು ತಂಡಗಳಾಗಿ ವಿಭಜಿಸಿ, ನಬಿ ದಿನದ ಅಂಗವಾಗಿ ಅದ್ದೂರಿಯ ಕಲಾ ಪ್ರತಿಭೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು.

ವಿದ್ಯಾರ್ಥಿಗಳ ಪ್ರತಿಭೆ, ಕಲಾ ಕೌಶಲ್ಯ ಹಾಗೂ ಸಾಮರ್ಥ್ಯವನ್ನು ಅನಾವರಣಗೊಳಿಸಿದ ಕಾರ್ಯಕ್ರಮದಲ್ಲಿ ಎರಡೂ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಿತು. ಅಂತಿಮವಾಗಿ ಟೀಂ ಬುಖಾರ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡರೆ, ಟೀಂ ಸಮರ್ಕಂದ್ ರನ್ನರ್ಸ್-ಅಪ್ ಸ್ಥಾನ ಪಡೆದುಕೊಂಡಿತು.
ಕಾರ್ಯಕ್ರಮದ ಯಶಸ್ವಿ ಆಯೋಜನೆಯಲ್ಲಿ ಸ್ಥಳೀಯ ಸದರ್ ಹಾರಿಸ್ ಹನೀಫಿ ಹಾಗೂ ಮದ್ರಸದ ಇತರ ಉಸ್ತಾದರು ಸಕ್ರಿಯವಾಗಿ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಮಿಹ್ರಾಜುಲ್ ಹುದಾ ಓಲ್ಡ್ ಸ್ಟುಡೆಂಟ್ಸ್ ಸಂಘಟನೆಯ ಸಹಕಾರದೊಂದಿಗೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ವಿದ್ಯಾರ್ಥಿಗಳ ಅತ್ಯುತ್ತಮ ಪ್ರದರ್ಶನ, ಉಸ್ತಾದರ ಮಾರ್ಗದರ್ಶನ ಹಾಗೂ ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ಕಲಾ ಪ್ರತಿಭೋತ್ಸವವು ಯಶಸ್ವಿಯಾಗಿ ಹಾಗೂ ವಿಜೃಂಭಣೆಯಿಂದ ನೆರವೇರಿತು.

