ಉಳ್ಳಾಲ : ರಹ್ಮಾನಿಯ ವೆಲ್ವೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ಬೀರಿ ಇದರ ಆಶ್ರಯದಲ್ಲಿ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ನಾಟೆಕಲ್, ಮಂಗಳೂರು ಇವರ ಸಹಯೋಗದೊಂದಿಗೆ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಕೋಟೆಕಾರ್ ಸಹಕಾರಿ ಬ್ಯಾಂಕ್ ವಠಾರದಲ್ಲಿ ನಡೆಯಿತು.

ಟ್ರಸ್ಟ್ ಅಧ್ಯಕ್ಷ ಕೆ.ಶೇಖ್ ಅಬ್ದುಲ್ ಕರೀಮ್ ಕಾರ್ಯಕ್ರಮ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ. ಹೆಚ್. ಮಹಮೂದ್ ಹಾಜಿ, ಪ್ರಾಂಶುಪಾಲೆ ಸಿಸ್ಟರ್ ಪ್ರಮೀಳಾ ಡಿಸೋಜಾ, ಅಜ್ಜಿನಡ್ಕ ಮಸೀದಿ ಉಪಾಧ್ಯಕ್ಷ ಮೊಹಮ್ಮದ್ ಬಷೀರ್, ಉದ್ಯಮಿ ಅಬ್ದುಲ್ಲಾ ಹಾಜಿ ಕೆ.ಎಂ, ಕಣಚೂರು ಮೆಡಿಕಲ್ ಕಾಲೇಜು ಮೆನೇಜರ್ ಅಬ್ದುಲಾ ಖಾನ್, ಪುರಸಭೆ ನಾಮನಿರ್ದೇಶಿತ ಸದಸ್ಯ ದಿಲೀಪ್ ರೇಗೊ, ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಅಯ್ಯಬ್ ಗಾಲಿಬ್ ಖಾನ್, ಕೋಶಾಧಿಕಾರಿ ಶೇಖ್ ಅರ್ಷದ್ ಅಮೀನ್, ಕಾರ್ಯದರ್ಶಿ ಶೇಖ್ ಮೊಹಮ್ಮದ್ ಅರ್ಫಾನ್, ಶೇಖ್ ಮನ್ಸೂರ್ ಅಹಮದ್ ಉಪಾಧ್ಯಕ್ಷ ಶೇಖ್ ಮೊಹಮ್ಮದ್ ಮೊಕ್ಸಿನ್ ಮತ್ತಿತರರು ಉಪಸ್ಥಿತರಿದ್ದರು.

