ಮಂಗಳೂರು: ಸಾಂ ಸೆಬೆಸ್ತ್ಯಾಂವ್ ಫಿರ್ಗಜ್ ಪೆರ್ಮನ್ನೂರಿನಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.


ಕಾರ್ಯಕ್ರಮದಲ್ಲಿ ವಂದನೀಯ ಫಾದರ್ ಆಂಡ್ರ್ಯೂ ಲಿಯೋ ಡಿಸೋಜ, ಫಾದರ್ ಮೆಲ್ವಿನ್ ಡಿಸೋಜ ಹಾಗೂ ಫಾದರ್ ಜಗದೀಶ್ ಪಿಂಟೋ ಉಪಸ್ಥಿತರಿದ್ದರು. ಪ್ಯಾರಿಷ್ ಕೌನ್ಸಿಲ್ ಉಪಾಧ್ಯಕ್ಷ ಅರುಣ್ ಡಿಸೋಜ, ಕಾರ್ಯದರ್ಶಿ ಜ್ಯೋತಿ ಡಿಸೋಜ, ಬೆಥನಿ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಜ್ಯೋತಿಕಾ ಗಲ್ಬಾವೊ, 21 ಕಮಿಷನ್ ಸಂಯೋಜಕ ಡಾಲ್ಫಿ ಡಿಸೋಜ ಹಾಗೂ ಯುವಜನ ಆಯೋಗದ ಸಂಚಾಲಕ ಡೆರಿಲ್ ಡಿಸೋಜ ಭಾಗವಹಿಸಿದ್ದರು.
ಅನಿಮೇಟರ್‌ಗಳಾದ ರಯಾನ್ ಡಿಸೋಜ, ಸಿಸ್ಟರ್ ಗ್ರೆಟ್ಟಾ ಲೋಬೋ ಹಾಗೂ ಶ್ರೀಮತಿ ಡ್ಯಾಫ್ನಿ ವೀಗಸ್ ಉಪಸ್ಥಿತರಿದ್ದರು. ಅಧ್ಯಕ್ಷ ವಿಲ್ಸನ್ ಟೆಲ್ಲಿಸ್ ಹಾಗೂ ಕಾರ್ಯದರ್ಶಿ ರಿಶಾಲ್ ಶೈನಾ ಮೊಂಟೇರೋ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

