ಸೋಮೇಶ್ವರ ಪುರಸಭೆ ಸಿಬ್ಬಂದಿ ಲತಾರವರ ಪ್ರಾಮಾಣಿಕತೆಗೆ ಸಾರ್ವಜನಿಕರ ಮೆಚ್ಚುಗೆ
ಸೋಮೇಶ್ವರ: ತೆರಿಗೆ ಪಾವತಿಗಾಗಿ ಸೋಮೇಶ್ವರ ಪುರಸಭೆಗೆ ಆಗಮಿಸಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಬಿಟ್ಟು ಹೋಗಿದ್ದ ಹಣವನ್ನು ಪುರಸಭೆ ಸಿಬ್ಬಂದಿ ಪತ್ತೆಹಚ್ಚಿ, ಅದರ ವಾರಸುದಾರರನ್ನು ಗುರುತಿಸಿ ಅವರಿಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಪುರಸಭೆ ಸಿಬ್ಬಂದಿ ಶ್ರೀಮತಿ ಲತಾ ಅವರು ಹಣವನ್ನು ಸುರಕ್ಷಿತವಾಗಿ ಇರಿಸಿಕೊಂಡು, ಅದರ ವಾರಸುದಾರರನ್ನು ಪತ್ತೆಹಚ್ಚಿ ಹಣವನ್ನು ಮರಳಿ ನೀಡಿದರು. ಅವರ ಪ್ರಾಮಾಣಿಕತೆ ಹಾಗೂ ಕರ್ತವ್ಯನಿಷ್ಠೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ಹಣ ಹಾಗೂ ವಸ್ತುಗಳ ಬಗ್ಗೆ ಜವಾಬ್ದಾರಿಯಿಂದ ನಡೆದುಕೊಂಡು, ಕಳೆದುಹೋದ ಹಣವನ್ನು ವಾರಸುದಾರರಿಗೆ ಮರಳಿ ನೀಡಿದ ಲತಾರವರ ಕಾರ್ಯವು ಇತರರಿಗೆ ಮಾದರಿಯಾಗಿದೆ.

