ಹಳೆಯಂಗಡಿ: ದೇವಾಡಿಗ ಸಮಾಜ ಸೇವಾ ಸಂಘ (ರಿ.) ಪಾವಂಜೆ, ದೇವಾಡಿಗ ಮಹಿಳಾ ವೇದಿಕೆ, ದೇವಾಡಿಗ ಯುವ ವೇದಿಕೆ ಹಾಗೂ ದೇವಾಡಿಗ ಸೇವಾ ಟ್ರಸ್ಟ್ (ರಿ.) ಪಾವಂಜೆ ಇವುಗಳ ಸಂಯುಕ್ತ ಆಶ್ರಯದಲ್ಲಿ “ಆಟಿಡೊಂಜಿ ಐತಾರ – ಆಟಿಡ ಪೊರ್ಲು-ಪೊಲಿಕೆ, ವನಸ್-ತೆನಸದ ಪರ್ಬ” ಕಾರ್ಯಕ್ರಮವು ಆಗಸ್ಟ್ 9 ಭಾನುವಾರ ಬೆಳಿಗ್ಗೆ 10:00 ಗಂಟೆಗೆ ಹಳೆಯಂಗಡಿಯ ದೇವಾಡಿಗ ಭವನದಲ್ಲಿ ನಡೆಯಲಿದೆ.

ದೇವಾಡಿಗ ಮಹಿಳಾ ವೇದಿಕೆ ಪಾವಂಜೆಯ ಅಧ್ಯಕ್ಷೆ ವಿಜಯಲಕ್ಷ್ಮಿ ಜನಾರ್ಧನ್ ಪಡುಪಣಂಬೂರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ವೃತ್ತಿಪರ ಸಾಮಾಜಿಕ ಕಾರ್ಯಕರ್ತ ಅಶೋಕ್ ವೇಣೂರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ನಿವೃತ್ತ ಪ್ರಾಾಂಶುಪಾಲರಾದ ಬಾಬು ದೇವಾಡಿಗ ಅಂಬ್ಲಮೊಗರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸುರತ್ಕಲ್ ಗೋವಿಂದ ದಾಸ ಪದವಿಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕಿ ಪಲ್ಲವಿ ರಾಜೇಶ್ ಆಟಿ ತಿಂಗಳ ವಿಶೇಷ ಕುರಿತು ಮಾತೃಭಾಷಾ ಸಂದೇಶ ನೀಡಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಂಗಳೂರು ಮಹಾನಗರ ಪಾಲಿಕೆಯ ಅಭಿಯಂತರರಾದ ಲಾವಣ್ಯ ಅಜೇಯ್ ಕಿರಣ್, ಉಳ್ಳಾಲದ ಪರವಾನಗಿ ಭೂಮಾಪಕರಾದ ದೇವಿಕಾ ತಿಲಕ್ ಗಂಜಿಮಠ ಹಾಗೂ ದೇವಾಡಿಗ ಸಮಾಜ ಸೇವಾ ಸಂಘ ಪಾವಂಜೆಯ ಅಧ್ಯಕ್ಷರಾದ ಅಣ್ಣಪ್ಪ ದೇವಾಡಿಗ ಭಾಗವಹಿಸಲಿದ್ದಾರೆ.
ಸಂಪ್ರದಾಯಿಕ ಆಹಾರ ಪದಾರ್ಥಗಳ ಸವಿ:
ಕಾರ್ಯಕ್ರಮದಲ್ಲಿ ತುಳುನಾಡಿನ ಸಾಂಪ್ರದಾಯಿಕ ಆಹಾರಗಳಾದ ತಿಮರೆ ಚಟ್ನಿ, ಕುಡುತ ಚಟ್ನಿ, ರಚ್ಚಗುಂಜಿ ಚಟ್ನಿ, ನುಗ್ಗೆತೊಪ್ಪು ಪಲ್ಯ, ಬೋಳೆ ತೊಜಂಕ್ ಸುಕ್ಕ, ಅಂಬಡೆ ತೇವು ಗಸಿ, ತೇವು ತೇಟ್ಲ ಗಸಿ, ಕುಡುತ ಸಾರ್, ಪೆಲಕಾಯಿ ಗಟ್ಟಿ, ಪೆಲಕಾಯಿ ಗಾಯ್, ಪುಂಡಿಗಸಿ, ಮೂಡೆ, ಪತ್ರೊಡೆ, ಸೇಮೆದಡ್ಡೆ ಪೇರ್, ಸಾರ್ನಡ್ಡೆ, ಪದಂಗಿ ಪಾಯಸ, ಮೆತ್ತೆದ ಗಂಜಿ, ನುಪ್ಪು, ಪೋಡಿಎಟ್ಟಿ ಚಟ್ನಿ, ಕೋರಿ ಸಾರ್, ಕೋರಿ ಸುಕ್ಕ ಸೇರಿದಂತೆ ವೈವಿಧ್ಯಮಯ ಅಡುಗೆಗಳ ವ್ಯವಸ್ಥೆ ಮಾಡಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಸಂಘದ ಸದಸ್ಯರಿಂದ ತುಳು ಪದ ಹಾಗೂ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಈ ಸಭೆಯಲ್ಲಿ ಸಮಾಜದ ಬಂಧುಗಳು ಹಾಗೂ ಸಾರ್ವಜನಿಕರು ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಟಕರು ಮನವಿ ಮಾಡಿದ್ದಾರೆ.

