ಕೊಣಾಜೆ ಗ್ರಾಮದ ಕುಂಟಾಲಗುರಿ ನಿವಾಸಿ83 ವರ್ಷದ ಕೆಪಿಎ ಅಬ್ದುಲ್ ಖಾದರ್ ಹಾಜಿ ಆಲಿಯಾಸ್ ಚೆರೋನು ಹಾಜಿ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದ್ದಾರೆ.

ಕುಂಟಾಲಗುಳಿ ಪ್ರದೇಶದಲ್ಲಿ ಕಳೆದ 60 ವರ್ಷಕ್ಕಿಂತಲೂ ಮಿಕ್ಕಿ ಅಂಗಡಿ ನಡೆಸುತ್ತಿದ್ದ ಇವರು ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ನಡುಪದವು ಮಸೀದಿಯ ಮಾಜಿ ಅಧ್ಯಕ್ಷರಾಗಿ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಇವರ ನಿಧನಕ್ಕೆ ಸಚಿವ ಯು.ಟಿ.ಖಾದರ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮೃತವ್ಯಕ್ತಿ
ಒಂದು ಗಂಡು ಮೂರು ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.


