ಉಳ್ಳಾಲ: ನಾಲ್ಕು ಗೋಡೆಗಳ ಮಧ್ಯೆ ಮಕ್ಕಳಿಗೆ ಶಿಕ್ಷಣ ನೀಡಿದರಷ್ಟೆ ಉತ್ತಮ ಶಿಕ್ಷಕರಾಗಲು ಸಾಧ್ಯವಿಲ್ಲ. ಜನರೊಂದಿಗೆ ಬೆರೆತು ಸಮಾಜದ ಏಳಿಗೆಗಾಗಿ ತನ್ನನ್ನ ತೊಡಗಿಸಿದರೆ ಮಾತ್ರ ಉತ್ತಮ ಶಿಕ್ಷಕನಾಗಲು ಸಾಧ್ಯವಿದೆ. ಭಗತ್ ಸಿಂಗ್ ಪ್ರತಿಷ್ಠಾನವು ಸಮಾಜಕ್ಕೆ ಆದರ್ಶ ಪ್ರಾಯರಾದವರನ್ನ ಗುರುತಿಸಿ ಗುರುವಂದನೆ ನಡೆಸುವ ಮೂಲಕ ಗುರುಪರಂಪರೆಯ ಸಂಸ್ಕೃತಿಯ ಸಂರಕ್ಷಣೆ ಮಾಡುತ್ತಿದೆಯೆಂದು ನಿವೃತ್ತ ಮುಖ್ಯ ಶಿಕ್ಷಕರು,ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷರಾದ ರವೀಂದ್ರ ರೈ ಕಳ್ಳಿಮಾರು ಹೇಳಿದರು.


ಗುರುಪೂರ್ಣಿಮೆಯ ಪ್ರಯುಕ್ತ ತೊಕ್ಕೊಟ್ಟಿನ ಭಗತ್ ಸಿಂಗ್ ಪ್ರತಿಷ್ಠಾನದ ವತಿಯಿಂದ ಅಸೈಗೋಳಿಯ ಅಯ್ಯಪ್ಪ ಮಂದಿರದಲ್ಲಿ ನಿವೃತ್ತ ಮುಖ್ಯ ಶಿಕ್ಷಕರು, ಮಂಗಳೂರು ವಿವಿಯ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ಸದಸ್ಯರಾದ ಆನಂದ.ಕೆ ಅಸೈಗೋಳಿಯವರಿಗೆ ನಡೆದ ಗುರುವಂದನಾ ಕಾರ್ಯಕ್ರಮವನ್ನುದ್ಧೇಶಿಸಿ ಅವರು ಮಾತನಾಡಿದರು. ವಿಷಯ ಜ್ಞಾನ ಇದ್ದವರು ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯ. ಆನಂದ ಅಸೈಗೋಳಿಯವರು ಆ ರೀತಿಯ ಎಲ್ಲಾ ಗುಣಗಳನ್ನ ಅಳವಡಿಸಿದ ಉತ್ತಮ ಶಿಕ್ಷಕರಾಗಿದ್ದಾರೆ. ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲೂ ತನ್ನನ್ನು ತೊಡಗಿಸಿಕೊಂಡಿರುವ ಅವರು ವಿಶಾಲ ಮನಸ್ಸುಳ್ಳವರಾಗಿದ್ದಾರೆ.ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸಿ ಮತ್ತಷ್ಟು ಸೇವಾ ಕಾರ್ಯಗಳಲ್ಲಿ ತನ್ನನ್ನ ತೊಡಗಿಸುವಂತಾಗಲಿಯೆಂದು ಶುಭ ಹಾರೈಸಿದರು.
ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಮಾತನಾಡಿ ಆನಂದ ಮಾಸ್ತರ್ ಅವರು ಶಿಕ್ಷಕ ವೃತ್ತಿಯೊಂದಿಗೆ ಸಾಮಾಜಿಕ ಕಳಕಳಿಯನ್ನ ಅಳವಡಿಸಿಕೊಂಡವರಾಗಿದ್ದು, ಎಪ್ಪತ್ತರ ಹರೆಯದಲ್ಲೂ ಅವರಲ್ಲಿರುವ ಲವಲವಿಕೆ, ಸಮಾಜ ಸೇವೆಯ ಹಪಹಪಿಯು ಎಲ್ಲರಿಗೂ ಮಾದರಿಯಾಗಿದೆಯೆಂದರು.
ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲು, ಗಂಗಾ ಆನಂದ್ ಅಸೈಗೋಳಿ, ಅಸೈಗೋಳಿ ಶ್ರೀ ಆಯ್ಯಪ್ಪ ಮಂದಿರದ ಅಧ್ಯಕ್ಷರಾದ ಶ್ರೀನಿವಾಸ್ ಶೆಟ್ಟಿ ಪುಲ್ಲು, ಮುನ್ನೂರು ಯುವಕ ಮಂಡಲದ ಅಧ್ಯಕ್ಷರಾದ ಹರೀಶ್ ಮುಂಡೋಳಿ, ಗ್ರಾಮಚವಾಡಿ ಬಿಲ್ಲವ ಸಂಘದ ಅಧ್ಯಕ್ಷರಾದ ವಿಜೇತ್ ಪಜೀರು, ಬಿಜೆಪಿ ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು, ಯುವಮೋರ್ಚ ಅಧ್ಯಕ್ಷರಾದ ಮುರಳಿ ಕೊಣಾಜೆ, ಪರಂಜ್ಯೋತಿ ಮಹಿಳಾ ಸಂಘದ ಅಧ್ಯಕ್ಷರಾದ ನಾಗವೇಣಿ ಶೆಟ್ಟಿ, ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ರಾಕೇಶ್ ಬೈಪಾಸ್, ಉಪಾಧ್ಯಕ್ಷರಾದ ಮಾಧವ ಉಳ್ಳಾಲ, ಕೋಶಾಧಿಕಾರಿ ಪ್ರಸಾದ್ ಕೊಂಡಾಣ, ಗುರುವಂದನೆ ಸಂಚಾಲಕರಾದ ಮೋಹನ್ ಸಾಲಿಯನ್, ಶಿಕ್ಷಕರಾದ ತ್ಯಾಗಂ ಹರೇಕಳ, ಪ್ರಮುಖರಾದ ರವೀಂದ್ರ ಬಂಗೇರ, ನವೀನ್ ಎ.ಕೆ, ಶಿವಾಜಿ ಕುತ್ತಾರು, ಲಕ್ಷ್ಮೀನಾರಾಯಣ, ರಾಜೇಂದ್ರ ಸೇವಂತಿಗುಡ್ಡೆ, ಶರತ್ ಭಂಡಾರಿ, ರಮೇಶ್ ಸಾಮಾನಿ, ಸತೀಶ್ ಪೂಜಾರಿ, ಗಂಗಾಧರ ಅಂಬ್ಲ ಮೊಗರು, ಚಂದ್ರಶೇಖರ್ ಕೊಲ್ಯ, ವಿಶ್ವನಾಥ ಎಲ್ಯಾರ್ ಪದವು, ಬೃಜೇಶ್ ನಾಯರ್,ಸೂರಜ್ ಗಟ್ಟಿ,ಪ್ರಭಾಕರ ಮಡ್ಯಾರ್,ರಾಮಚಂದ್ರ ಶೆಟ್ಟಿ, ನವೀನ್ ನಡುಮನೆ,ಸಮೃದ್ ಭಂಡಾರಿ,ರವೀನಾ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.
ಭಗತ್ ಸಿಂಗ್ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡು ಸ್ವಾಗತಿಸಿದರು.ಅಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟ್ಟು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೃಷ್ಣ ಪೊನ್ನೆತ್ತೋಡು ನಿರೂಪಿಸಿದರು. ದೀಕ್ಷಿತ್ ನಿಸರ್ಗ ವಂದಿಸಿದರು.
*ಧರ್ಮ ಪತ್ನಿ,ಮಕ್ಕಳ ಸಹಕಾರದಿಂದ ಶಿಕ್ಷಕ ವೃತ್ತಿ ಜೊತೆಗೆ ಸಮಾಜಕ್ಕೆ ಸ್ವಲ್ಪ ಕೊಡುಗೆ ನೀಡುವ ಅವಕಾಶ ಲಭಿಸಿದೆ. ಅರ್ವತ್ತು ವರ್ಷ ದಾಟಿದ ಮೇಲೆ ಮನೆಯೊಳಗೆ ಕುಳಿತರೆ ಕಾಯಿಲೆಗೆ ಆಹ್ವಾನ ನೀಡಿದಂತಾಗುತ್ತದೆ. ಸಮಾಜದ ಜೊತೆ ಬೆರೆತು ಕೆಲಸ ಮಾಡಿದಾಗ ಸದಾ ಲವಲವಿಕೆಯಿಂದ ಇರಲು ಸಾಧ್ಯ.ಅನೇಕರು ನಿವೃತ್ತ ಬದುಕಿನಲ್ಲಿ ಸದಾ ಕಾರ್ಯಚಟುವಟಿಕೆಯಲ್ಲಿದ್ದು ನಮಗೆಲ್ಲರಿಗೆ ಮಾದರಿಯಾಗಿದ್ದಾರೆ.
*ಆನಂದ ಕೆ.ಅಸೈಗೋಳಿ,ನಿವೃತ್ತ ಮುಖ್ಯ ಶಿಕ್ಷಕರು.


